IPL 2025: RCB ಅಂಗಳದಲ್ಲಿ ಅಶುತೋಷ್ ಶರ್ಮಾ

IPL 2025 Mega Auction: ಅಶುತೋಷ್ ಶರ್ಮಾ ಕಳೆದ ಸೀಸನ್​ನಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದರು. ಈ ವೇಳೆ 9 ಇನಿಂಗ್ಸ್ ಆಡಿದ್ದ ಅವರು 15 ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ ಒಟ್ಟು 189 ರನ್ ಚಚ್ಚಿದ್ದರು. ಇದೀಗ ಯುವ ಸ್ಪೋಟಕ ದಾಂಡಿಗನ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕಣ್ಣಿಟ್ಟಿದೆ.

ಝಾಹಿರ್ ಯೂಸುಫ್
|

Updated on: Nov 20, 2024 | 11:59 AM

IPL 2025: ಐಪಿಎಲ್ ಮೆಗಾ ಹರಾಜಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಭರ್ಜರಿ ಸಿದ್ಧತೆಯಲ್ಲಿದೆ. ಈ ಸಿದ್ಧತೆಗಳ ನಡುವೆ ಆರ್​ಸಿಬಿ ಕೆಲ ಆಟಗಾರರ ಟ್ರಯಲ್ಸ್ ನಡೆಸಿದೆ. ಇದರಲ್ಲಿ ಪಂಜಾಬ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಶುತೋಷ್ ಶರ್ಮಾ ಕೂಡ ಕಾಣಿಸಿಕೊಂಡಿದ್ದಾರೆ.

1 / 5
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆರ್​ಸಿಬಿ ತಂಡದ ಟ್ರಯಲ್ಸ್​ನಲ್ಲಿ ಅಶುತೋಷ್ ಶರ್ಮಾ ಕೂಡ ಭಾಗವಹಿಸಿದ್ದು, ಈ ಮೂಲಕ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ.

2 / 5
ಇತ್ತ ಪ್ರಮುಖ ಆಟಗಾರರೊಬ್ಬರು ಟ್ರಯಲ್ಸ್​ನಲ್ಲಿ ಭಾಗವಹಿಸಿರುವುದರಿಂದ ನಿರೀಕ್ಷೆಗಳು ಹೆಚ್ಚಾಗಿವೆ. ಅದರಲ್ಲೂ ಆರ್​ಸಿಬಿ ಉತ್ತಮ ಫಿನಿಶರ್​ನ ಹುಡುಕಾಟದಲ್ಲಿದ್ದು, ಹೀಗಾಗಿಯೇ ಅಶುತೋಷ್ ಅವರನ್ನು ಟ್ರಯಲ್ಸ್​ಗೆ ಕರೆಸಿಕೊಂಡಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಮೆಗಾ ಹರಾಜಿನಲ್ಲಿ ಆರ್​ಸಿಬಿ ಅಶುತೋಷ್ ಖರೀದಿಗೆ ಬಿಡ್ಡಿಂಗ್ ನಡೆಸುವ ಸಾಧ್ಯತೆ ಹೆಚ್ಚಿದೆ.

3 / 5
ಕಳೆದ ಸೀಸನ್​ನಲ್ಲಿ ಪಂಜಾಬ್ ಕಿಂಗ್ಸ್ ಪರ 11 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಅಶುತೋಷ್ ಶರ್ಮಾ 9 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದರು. ಈ ವೇಳೆ 167ರ ಸ್ಟ್ರೈಕ್ ರೇಟ್​ನಲ್ಲಿ ಒಟ್ಟು 189 ರನ್ ಕಲೆಹಾಕಿದ್ದಾರೆ. ಅದರಲ್ಲೂ ಯುವ ದಾಂಡಿಗ ಪಂಜಾಬ್ ಕಿಂಗ್ಸ್ ತಂಡದ ಫಿನಿಶಿಂಗ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಇದೇ ಕಾರಣದಿಂದಾಗಿ ಇದೀಗ ಆರ್​ಸಿಬಿ ಕೂಡ ಅಶುತೋಷ್ ಶರ್ಮಾ ಮೇಲೆ ಕಣ್ಣಿಟ್ಟಿದೆ.

4 / 5
ಇನ್ನು ಮೆಗಾ ಹರಾಜಿಗೂ ಮುನ್ನ ಆರ್​ಸಿಬಿ ಫ್ರಾಂಚೈಸಿ ಒಟ್ಟು ಮೂವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಇಲ್ಲಿ ವಿರಾಟ್ ಕೊಹ್ಲಿಯನ್ನು 21 ಕೋಟಿ ರೂ. ನೀಡಿ ಉಳಿಸಿಕೊಂಡರೆ, ರಜತ್ ಪಾಟಿದಾರ್​ಗೆ 11 ಕೋಟಿ ರೂ. ನೀಡಲಾಗಿದೆ. ಹಾಗೆಯೇ ಯಶ್ ದಯಾಳ್ 5 ಕೋಟಿ ರೂ.ಗೆ ರಿಟೈನ್ ಆಗಿದ್ದಾರೆ. ಅಂದರೆ ಆರ್​ಸಿಬಿ ಫ್ರಾಂಚೈಸಿಯು ಮೂವರು ಆಟಗಾರರನ್ನು ಉಳಿಸಿಕೊಳ್ಳಲು 37 ಕೋಟಿ ರೂ. ಖರ್ಚು ಮಾಡಿದೆ. ಇನ್ನುಳಿದ 83 ಕೋಟಿ ರೂ. ನಲ್ಲಿ 22 ಆಟಗಾರರನ್ನು ಖರೀದಿಸಬಹುದು.

5 / 5
Follow us
ಈ ರಾಶಿಯವರ ಜೀವನದಲ್ಲಿ ಸಂಪತ್ತು ಮತ್ತು ಖ್ಯಾತಿ ಹೆಚ್ಚಾಗುತ್ತದೆ

ಯುಐ, ಮ್ಯಾಕ್ಸ್ ಒಟ್ಟಿಗೆ ರಿಲೀಸ್ ಆಗುತ್ತಿರುವ ಬಗ್ಗೆ ಉಪೇಂದ್ರ ಪ್ರತಿಕ್ರಿಯೆ

ಏಕದಿನ ಸರಣಿಗಾಗಿ ಕಾಂಗರೂಗಳ ನಾಡಿಗೆ ಕಾಲಿಟ್ಟ ಟೀಂ ಇಂಡಿಯಾ

ಅಣ್ಣ 10 ವರ್ಷಗಳಿಂದ ಕಾಯುತ್ತಿದ್ದೇನೆ ಎಂದ ಫ್ಯಾನ್​ಗೆ ನಿರಾಸೆ ಮಾಡದ ರೋಹಿತ್

ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್

ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!

ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು

ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ

ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?

ಒಂದು ವಾರದೊಳಗೆ ಎಲ್ಲವೂ ಸುಖಾಂತ್ಯವಾಗುತ್ತದೆ ಅಂತ ಅಶೋಕ ಹೇಳಿದ್ಯಾಕೆ?