AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಮೊದಲ ಸುತ್ತಿನಲ್ಲಿ ಹರಾಜಾಗುವ 6 ಆಟಗಾರರು ಇವರೇ

IPL 2025 Mega Auction: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಮೆಗಾ ಆಕ್ಷನ್​ನ ಮೊದಲ ಪಟ್ಟಿಯಲ್ಲಿ ಒಟ್ಟು 6 ಆಟಗಾರರು ಸ್ಥಾನ ಪಡೆದಿದ್ದಾರೆ. ಈ ಆಟಗಾರರ ಮೂಲ ಬೆಲೆಯು 2 ಕೋಟಿ ರೂ. ಇದ್ದು, ಹೀಗಾಗಿ ಐಪಿಎಲ್ ಮೊದಲ ಸುತ್ತಿನ ಹರಾಜಿನಲ್ಲೇ ಕೋಟಿಗಳ ಸುರಿಮಳೆಯಾಗುವುದನ್ನು ನಿರೀಕ್ಷಿಸಬಹುದು.

ಝಾಹಿರ್ ಯೂಸುಫ್
|

Updated on: Nov 16, 2024 | 8:30 AM

Share
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮೆಗಾ ಹರಾಜಿಗೆ ವೇದಿಕೆ ಸಿದ್ಧವಾಗಿದೆ. ನವೆಂಬರ್ 24 ಮತ್ತು 25 ರಂದು ನಡೆಯಲಿರುವ ಮೆಗಾ ಆಕ್ಷನ್​ಗಾಗಿ ಒಟ್ಟು 574 ಆಟಗಾರರ ಪಟ್ಟಿಯನ್ನು ಫೈನಲ್ ಮಾಡಲಾಗಿದೆ. ಈ 574 ಆಟಗಾರರಲ್ಲಿ ಆರು ಪ್ಲೇಯರ್ಸ್ ಮೊದಲ ಸುತ್ತಿನಲ್ಲೇ ಹರಾಜಾಗಲಿದ್ದಾರೆ. ಆ ಸ್ಟಾರ್ ಆಟಗಾರರು ಯಾರೆಂದರೆ...

1 / 7
ಜೋಸ್ ಬಟ್ಲರ್: ಇಂಗ್ಲೆಂಡ್ ಟಿ20 ತಂಡದ ನಾಯಕ ಜೋಸ್ ಬಟ್ಲರ್ ಕಳೆದ ಕೆಲ ಸೀಸನ್​ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿದ್ದರು. ಆದರೆ ಈ ಬಾರಿ ಅವರು ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅದರಂತೆ ಮೊದಲ ಸುತ್ತಿನ ಪಟ್ಟಿಯಲ್ಲಿ ಬಟ್ಲರ್ ಸ್ಥಾನ ಪಡೆದಿದ್ದಾರೆ.

2 / 7
ಶ್ರೇಯಸ್ ಅಯ್ಯರ್: ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕ ಶ್ರೇಯಸ್ ಅಯ್ಯರ್ ಕೂಡ ಈ ಬಾರಿಯ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಬಾರಿ ಕೆಕೆಆರ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿರುವ ಅಯ್ಯರ್​ಗಾಗಿ ಮೊದಲ ಸೆಟ್​ನಲ್ಲೇ ಬಿಡ್ಡಿಂಗ್ ನಡೆಯಲಿದೆ.

3 / 7
ರಿಷಭ್ ಪಂತ್: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ನಾಯಕ ರಿಷಭ್ ಪಂತ್ ಸಹ ಮೆಗಾ ಆಕ್ಷನ್​ನಲ್ಲಿದ್ದು, ಅವರು ಕೂಡ ಮಾರ್ಕ್ಯೂ ಲಿಸ್ಟ್​ನಲ್ಲಿ ಸ್ಥಾನ ಪಡೆದಿದ್ದಾರೆ. ಅದರಂತೆ ಮೊದಲ ಸುತ್ತಿನಲ್ಲೇ ಪಂತ್ ಅವರ ಹೆಸರು ಕೂಡ ಕಾಣಿಸಿಕೊಳ್ಳಲಿದೆ.

4 / 7
ಕಗಿಸೊ ರಬಾಡ: ಸೌತ್ ಆಫ್ರಿಕಾ ವೇಗಿ ಕಗಿಸೊ ರಬಾಡ ಕಳೆದ ಸೀಸನ್​ನಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮೆಗಾ ಹರಾಜಿನಲ್ಲಿರುವ ರಬಾಡಗೆ ಮೊದಲ ಸುತ್ತಿನಲ್ಲೇ ಬಿಡ್ಡಿಂಗ್ ನಡೆಯಲಿದೆ.

5 / 7
ಅರ್ಷದೀಪ್ ಸಿಂಗ್: ಟೀಮ್ ಇಂಡಿಯಾದ ಎಡಗೈ ವೇಗಿ ಅರ್ಷದೀಪ್ ಸಿಂಗ್ ಕೂಡ ಮೆಗಾ ಹರಾಜಿನ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ಯುವ ವೇಗಿಯ ಖರೀದಿಗೆ ಆರಂಭದಲ್ಲೇ ಪೈಪೋಟಿ ಕಂಡು ಬರಲಿದೆ.

6 / 7
ಮಿಚೆಲ್ ಸ್ಟಾರ್ಕ್​: ಕಳೆದ ಸೀಸನ್​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಮಿಚೆಲ್ ಸ್ಟಾರ್ಕ್​ ಈ ಬಾರಿಯ ಮಾರ್ಕ್ಯೂ ಲಿಸ್ಟ್​ನಲ್ಲಿ ಸ್ಥಾನ ಪಡೆದಿದ್ದಾರೆ. ಅದರಂತೆ ಮೊದಲ ಸುತ್ತಿನಲ್ಳೇ ಸ್ಟಾರ್ಕ್ ಖರೀದಿಗೆ ಬಿಡ್ಡಿಂಗ್ ನಡೆಯಲಿದೆ.

7 / 7
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ

ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್​​​ಗೆ​​ 14 ದಿನ ನ್ಯಾಯಾಂಗ ಬಂಧನ

ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​

ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!

ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!

ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ

‘ಬಿಗ್ ಬಾಸ್​ಗೆ ಮೂರು ಬಿಟ್ಟು ಬರ್ತಾರೆ ಅಂದುಕೊಂಡಿರಲಿಲ್ಲ’; ವೈಷ್ಣವಿ

ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ

ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ