- Kannada News Photo gallery Cricket photos IPL 2025: players who can captain Delhi Capitals in the IPL
IPL 2025: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ಯಾಪ್ಟನ್ ಯಾರು?
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಿಷಭ್ ಪಂತ್ ಮುನ್ನಡೆಸಿದ್ದರು. ಆದರೀಗ ಪಂತ್ ಲಕ್ನೋ ಸೂಪರ್ ಜೈಂಟ್ಸ್ ಪಾಲಾಗಿದ್ದಾರೆ. ಇದೀಗ ಹೊಸ ನಾಯಕನ ಹುಡುಕಾಟದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಮುಂದೆ ಮೂರು ಆಯ್ಕೆಗಳಿವೆ...
Updated on: Dec 01, 2024 | 9:03 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ 2025 ರಲ್ಲಿ 5 ತಂಡಗಳನ್ನು ಹೊಸ ನಾಯಕರುಗಳು ಮುನ್ನಡೆಸಲಿದ್ದಾರೆ. ಈ ಐದು ತಂಡಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಒಂದು. ಆದರೆ ಡೆಲ್ಲಿ ಪಡೆಯನ್ನು ಮುನ್ನಡೆಸುವವರು ಯಾರು ಎಂಬುದೇ ಈಗ ಕುತೂಹಲ. ಏಕೆಂದರೆ ತಂಡದಲ್ಲಿ ಮೂವರು ಸ್ಟಾರ್ ಆಟಗಾರರಿದ್ದಾರೆ. ಈ ಮೂವರು ಸಹ ನಾಯಕತ್ವದ ಅನುಭವ ಹೊಂದಿರುವವರು.

ಅದರಲ್ಲೂ ಕಳೆದ ಸೀಸನ್ನಲ್ಲಿ ಎರಡು ತಂಡಗಳನ್ನು ಮುನ್ನಡೆಸಿದ ಇಬ್ಬರು ಮಾಜಿ ನಾಯಕರುಗಳು ಈಗ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದಾರೆ. ಹೀಗಾಗಿ ಈ ಬಾರಿ ಡೆಲ್ಲಿ ಪಡೆಯ ಸಾರಥ್ಯ ಯಾರಿಗೆ ದೊರೆಯಲಿದೆ ಎಂಬುದೇ ಕುತೂಹಲ. ಅದರಂತೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ಯಾಪ್ಟನ್ ಪಟ್ಟದ ರೇಸ್ನಲ್ಲಿರುವ ಆಟಗಾರರೆಂದರೆ…

ಕೆಎಲ್ ರಾಹುಲ್: ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈ ಬಾರಿಯ ಮೆಗಾ ಹರಾಜಿನ ಮೂಲಕ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಬರೋಬ್ಬರಿ 14 ಕೋಟಿ ರೂ.ಗೆ ಖರೀದಿಸಿದೆ. ಅತ್ತ ವಿಕೆಟ್ ಕೀಪರ್, ಆರಂಭಿಕನಾಗಿರುವ ರಾಹುಲ್ ಕಳೆದ ಸೀಸನ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದರು. ಅಲ್ಲದೆ ಐಪಿಎಲ್ನಲ್ಲಿ 64 ಪಂದ್ಯಗಳಲ್ಲಿ ಕ್ಯಾಪ್ಟನ್ ಆಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಭಾರತೀಯ ಆಟಗಾರನಿಗೆ ನಾಯಕತ್ವ ನೀಡಲು ಮುಂದಾದರೆ ಕೆಎಲ್ ರಾಹುಲ್ಗೆ ಕ್ಯಾಪ್ಟನ್ ಪಟ್ಟ ದೊರೆಯುವುದು ಖಚಿತ.

ಫಾಫ್ ಡುಪ್ಲೆಸಿಸ್: ಕಳೆದ ಸೀಸನ್ನಲ್ಲಿ ಆರ್ಸಿಬಿ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದ ಫಾಫ್ ಡುಪ್ಲೆಸಿಸ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯಲಿದ್ದಾರೆ. 2 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರ್ಪಡೆಯಾಗಿರುವ ಫಾಫ್ ನಾಯಕತ್ವದ ಆಕಾಂಕ್ಷಿ. ಏಕೆಂದರೆ ಫಾಫ್ ಐಪಿಎಲ್ನಲ್ಲಿ 42 ಪಂದ್ಯಗಳಲ್ಲಿ ಕ್ಯಾಪ್ಟನ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಸೌತ್ ಆಫ್ರಿಕಾ ತಂಡವನ್ನು ಮುನ್ನಡೆಸಿದ ಅನುಭವವು ಕೂಡ ಅವರ ಜೊತೆಗಿದೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಅನುಭವಿ ನಾಯಕನ ಮೊರೆ ಹೋದರೆ ಫಾಫ್ಗೆ ಕ್ಯಾಪ್ಟನ್ ಪಟ್ಟ ಸಿಗಲಿದೆ.

ಅಕ್ಷರ್ ಪಟೇಲ್: ಈ ಬಾರಿಯ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಅಕ್ಷರ್ ಪಟೇಲ್ ಅವರನ್ನು ಬರೋಬ್ಬರಿ 16.5 ಕೋಟಿ ರೂ.ಗೆ ರಿಟೈನ್ ಮಾಡಿಕೊಂಡಿತ್ತು. ಈ ರಿಟೈನ್ ಬೆನ್ನಲ್ಲೇ ಅಕ್ಷರ್ಗೆ ಕ್ಯಾಪ್ಟನ್ ಪಟ್ಟ ದೊರೆಯಲಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಅಕ್ಷರ್ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಹೀಗಾಗಿ ಆಲ್ರೌಂಡರ್ಗೆ ಕ್ಯಾಪ್ಟನ್ ಸ್ಥಾನ ನೀಡಲು ಮುಂದಾದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ಅಕ್ಷರ್ ಪಟೇಲ್ ಪಾಲಾಗಲಿದೆ.
