IPL 2025: ರಿಂಕು ಸಿಂಗ್ ನಿಯತ್ತಿಗೆ ಕೋಟಿ ಕೋಟಿ ನೀಡಿದ KKR

IPL 2025 KKR: ಐಪಿಎಲ್ ಮೆಗಾ ಹರಾಜಿಗೂ ಮುನ್ನ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು 6 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಅದರಂತೆ ರಿಂಕು ಸಿಂಗ್, ವರುಣ್ ಚಕ್ರವರ್ತಿ, ಸುನಿಲ್ ನರೈನ್, ಆ್ಯಂಡ್ರೆ ರಸೆಲ್, ಹರ್ಷಿತ್ ರಾಣಾ ಹಾಗೂ ರಮಣ್​ದೀಪ್ ಸಿಂಗ್ ಮುಂದಿನ ಸೀಸನ್​ನಲ್ಲಿ ಕೆಕೆಆರ್ ಪರ ಕಣಕ್ಕಿಳಿಯಲಿದ್ದಾರೆ.

ಝಾಹಿರ್ ಯೂಸುಫ್
|

Updated on: Nov 02, 2024 | 10:54 AM

2018 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ರಿಂಕು ಸಿಂಗ್ ಅವರನ್ನು ಖರೀದಿಸಿದ್ದು ಬರೋಬ್ಬರಿ 80 ಲಕ್ಷ ರೂ.ಗೆ, ಆದರೆ ಆ ಬಳಿಕ ಏರಿಕೆಯತ್ತ ಸಾಗಬೇಕಿದ್ದ ರಿಂಕು ಅವರ ಸಂಭಾವನೆ ಇಳಿಮುಖವಾಗಿದ್ದು ಮಾತ್ರ ವಿಪರ್ಯಾಸ. ಅದರಲ್ಲೂ 2022 ರಲ್ಲಿ ಕೆಕೆಆರ್ ಫ್ರಾಂಚೈಸಿಯು ಯುವ ದಾಂಡಿಗನನ್ನು ಕೇವಲ 55 ಲಕ್ಷ ರೂ.ಗೆ ರಿಟೈನ್ ಮಾಡಿಕೊಂಡಿತ್ತು.

1 / 7
ಅಂದರೆ ಈ ಹಿಂದಿನ ಸೀಸನ್​ಗಿಂತಲೂ 25 ಲಕ್ಷ ರೂ. ಕಡಿಮೆ ಪಡೆದುಕೊಂಡಿದ್ದರು. ಇದಾಗ್ಯೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ರಿಂಕು ಸಿಂಗ್ ಹೊರಬಂದಿರಲಿಲ್ಲ. ಕಳೆದ ಎರಡು ಸೀಸನ್​ಗಳಲ್ಲಿ ಎಡಗೈ ದಾಂಡಿಗ ಕೇವಲ 55 ಲಕ್ಷ ರೂ.ನೊಂದಿಗೆ ಕೆಕೆಆರ್ ತಂಡದಲ್ಲಿ ಮುಂದುವರೆದಿದ್ದರು.

2 / 7
ಅಷ್ಟೇ ಅಲ್ಲದೆ ಈ ಬಾರಿಯ ಐಪಿಎಲ್ ಮೆಗಾ ಹರಾಜಿಗೆ ರಿಂಕು ಸಿಂಗ್ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿಗಳು ಕೂಡ ಹರಿದಾಡಿದ್ದವು. ಇದರ ನಡುವೆ ಕೆಕೆಆರ್ ಆಟಗಾರ ನೀಡಿದ ಹೇಳಿಕೆಯು ಆತನಿಗೆ ನೈಟ್ ರೈಡರ್ಸ್ ತಂಡದ ಮೇಲಿನ ನಿಯತ್ತನ್ನು ಬಹಿರಂಗಪಡಿಸಿತ್ತು.

3 / 7
ಖಾಸಗಿ ಸಂದರ್ಶನವೊಂದರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಕೇವಲ 55 ಲಕ್ಷ ರೂ. ಮಾತ್ರ ನೀಡುತ್ತಿರುವ ಬಗ್ಗೆ ರಿಂಕು ಸಿಂಗ್ ಅವರನ್ನು ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ರಿಂಕು, ಕಡಿಮೆ ಸಂಭಾವನೆ ವಿಷಯದಲ್ಲಿ ನನಗೇನು ಸಮಸ್ಯೆಯಿಲ್ಲ. ಕೆಕೆಆರ್ ನೀಡುತ್ತಿರುವ ಈ ಸಂಭಾವನೆಯಿಂದ ನಾನಂತು ಸಂತುಷ್ಟನಾಗಿದ್ದೀನಿ ಎಂದು ಅಚ್ಚರಿಯ ಹೇಳಿಕೆ ನೀಡಿದ್ದರು.

4 / 7
ನನ್ನ ಪಾಲಿಗೆ 50-55 ಲಕ್ಷ ರೂ. ದೊಡ್ಡ ಮೊತ್ತ. ನಾನು ಕೆರಿಯರ್ ಶುರು ಮಾಡಿದಾಗ ಇಷ್ಟು ಮೊತ್ತ ಗಳಿಸುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಬಾಲ್ಯದಲ್ಲಿ 10-5 ರೂಪಾಯಿಗೂ ಒದ್ದಾಡುತ್ತಿದ್ದವನಿಗೆ 55 ಲಕ್ಷ ರೂ. ಸಿಗುತ್ತಿದೆ. ಇದರಿಂದ ನಾನು ಸಂತೃಪ್ತನಾಗಿದ್ದೇನೆ ಎಂದು ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯ ನಡೆಯನ್ನು ರಿಂಕು ಸಿಂಗ್ ಸಮರ್ಥಿಸಿಕೊಂಡಿದ್ದರು.

5 / 7
ಈ ಸಮರ್ಥನೆಗೆ ಉಡುಗೊರೆಯೋ, ಅಥವಾ ಕೆಕೆಆರ್​ಗೆ ತೋರಿದ ನಿಯತ್ತಿನ ಫಲವೊ... ಈ ಬಾರಿ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಸ್ಟಾರ್ ಆಟಗಾರರನ್ನು ಬದಿಗಿಟ್ಟು ರಿಂಕು ಸಿಂಗ್ ಅವರನ್ನು ಮೊದಲ ರಿಟೈನ್ ಆಗಿ ಆಯ್ಕೆ ಮಾಡಿಕೊಂಡಿದೆ. ಅಲ್ಲದೆ ಬರೋಬ್ಬರಿ 13 ಕೋಟಿ ರೂ. ನೀಡಿದೆ. ಅಂದರೆ ಕಳೆದ ಬಾರಿಗಿಂತ ರಿಂಕು ಸಿಂಗ್ ಅವರ ಸಂಭಾವನೆಯನ್ನು 23 ಪಟ್ಟು ಹೆಚ್ಚಿಸಲಾಗಿದೆ. ಈ ಮೂಲಕ ಈ ಬಾರಿಯ ಕೆಕೆಆರ್ ತಂಡದ ದುಬಾರಿ ಆಟಗಾರನಾಗಿ ರಿಂಕು ಸಿಂಗ್ ಕಾಣಿಸಿಕೊಂಡಿದ್ದಾರೆ.

6 / 7
ಈ ಬಾರಿಯ ಮೆಗಾ ಹರಾಜಿಗೂ ಮುನ್ನ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು 6 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಇಲ್ಲಿ ರಿಂಕು ಸಿಂಗ್​ಗೆ 13 ಕೋಟಿ ರೂ. ನೀಡಿದರೆ, ವರುಣ್ ಚಕ್ರವರ್ತಿ, ಸುನಿಲ್ ನರೈನ್ ಹಾಗೂ ಆ್ಯಂಡ್ರೆ ರಸೆಲ್​ಗೆ ತಲಾ 12 ಕೋಟಿ ರೂ. ನೀಡಿದೆ. ಇನ್ನು ಹರ್ಷಿತ್ ರಾಣಾ ಹಾಗೂ ರಮಣ್​ದೀಪ್ ಸಿಂಗ್​ಗೆ ತಲಾ 4 ಕೋಟಿ ರೂ. ನೀಡಲಾಗಿದೆ.

7 / 7
Follow us
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ

ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ

ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು

ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?

ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ

ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ

ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ

Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು

ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು

ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ