Virat Kohli: ವಿರಾಟ್ ಕೊಹ್ಲಿ ಹರಾಜಿನಲ್ಲಿ ಕಾಣಿಸಿಕೊಂಡರೆ 30 ಕೋಟಿ ರೂ. ಗ್ಯಾರಂಟಿ..!

|

Updated on: Aug 13, 2024 | 8:03 AM

Virat Kohli: ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮಾತ್ರ ಕಣಕ್ಕಿಳಿದಿದ್ದಾರೆ. 2008 ರಲ್ಲಿ 12 ಲಕ್ಷ ರೂ. ಸಂಭಾವನೆಯೊಂದಿಗೆ ಶುರುವಾದ ಜರ್ನಿಯು ಇದೀಗ 15 ಕೋಟಿ ರೂ.ಗೆ ಬಂದು ನಿಂತಿದೆ. ಇನ್ನು ಈ ಬಾರಿಯ ಮೆಗಾ ಹರಾಜಿಗೂ ಮುನ್ನ 15 ಕೋಟಿ ರೂ.ಗೂ ಅಧಿಕ ಮೊತ್ತ ನೀಡಿ ವಿರಾಟ್ ಕೊಹ್ಲಿಯನ್ನು ಆರ್​ಸಿಬಿ ಉಳಿಸಿಕೊಳ್ಳಲಿದೆ.

1 / 6
ಐಪಿಎಲ್ (IPL 2025) ಮೆಗಾ ಹರಾಜಿನ ಸಿದ್ಧತೆಗಳು ಶುರುವಾಗಿದೆ. ಈ ಹರಾಜಿಗೆ ಬೇಕಾದ ರೂಪುರೇಷೆಗಳನ್ನು ಸಿದ್ಧಪಡಿಸುವಲ್ಲಿ ಐಪಿಎಲ್ ಆಡಳಿತ ಮಂಡಳಿ ನಿರತರಾಗಿದ್ದಾರೆ. ಇದರ ನಡುವೆ ಈ ಬಾರಿಯ ಹರಾಜಿಗೂ ಮುನ್ನ 6 ಆಟಗಾರರನ್ನು ಉಳಿಸಿಕೊಳ್ಳಲು ಫ್ರಾಂಚೈಸಿಗಳಿಗೆ ಅವಕಾಶ ನೀಡುವ ಸಾಧ್ಯತೆಯಿದೆ ಎಂಬ ಸುದ್ದಿಯೊಂದು ಹೊರಬಿದ್ದಿದೆ.

2 / 6
ಹೀಗಾಗಿ ಈ ಬಾರಿಯ ಮೆಗಾ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ತಮ್ಮ ಸ್ಟಾರ್ ಆಟಗಾರರನ್ನು ಉಳಿಸಿಕೊಳ್ಳುವುದು ಖಚಿತ. ಒಂದು ವೇಳೆ ಕೆಲ ಪ್ರಮುಖ ಆಟಗಾರರು ಹರಾಜಿನಲ್ಲಿ ಕಾಣಿಸಿಕೊಂಡರೆ ಕೋಟಿ ಮೊತ್ತಕ್ಕೆ ಬಿಕರಿಯಾಗುವುದರಲ್ಲಿ ಅನುಮಾನವೇ ಇಲ್ಲ.

3 / 6
ಅದರಲ್ಲೂ ಬ್ಯಾಟಿಂಗ್ ಮೆಸ್ಟ್ರೋ ವಿರಾಟ್ ಕೊಹ್ಲಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ 30 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಹರಾಜಾಗುವುದು ಖಚಿತ. ಹೀಗೆ ಅಂದಿದ್ದು ಮತ್ಯಾರೂ ಅಲ್ಲ, ಅನುಭವಿ ಹರಾಜುದಾರ ಹ್ಯೂ ಎಡ್ಮೀಡ್ಸ್. ಎಡ್ಮೀಡ್ಸ್ 2018 ರಿಂದ 2022 ರವರೆಗೆ ಐಪಿಎಲ್​​ನಲ್ಲಿ ಹರಾಜುದಾರನಾಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ವಿಶ್ವದಾದ್ಯಂತ ಅವರು 2,500 ಕ್ಕೂ ಹೆಚ್ಚು ಹರಾಜುಗಳನ್ನು ನಡೆಸಿದ್ದಾರೆ.

4 / 6
ಹೀಗೆ ಹಲವು ಹರಾಜುಗಳಲ್ಲಿ ಪಾಲ್ಗೊಂಡಿರುವ ಹ್ಯೂ ಎಡ್ಮೀಡ್ಸ್ ಅವರ ಪ್ರಕಾರ, ಐಪಿಎಲ್​ನ ಸ್ಟಾರ್ ಎಂದರೆ ವಿರಾಟ್ ಕೊಹ್ಲಿ. ಅವರೇನಾದರೂ ಹರಾಜಿನ ಭಾಗವಾದರೆ 30 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಬಿಕರಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ. ಈ ಮೂಲಕ ಕಿಂಗ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ಪಡೆದ ಆಟಗಾರ ಎನಿಸಿಕೊಳ್ಳಲಿದ್ದಾರೆ ಎಂದು ಎಡ್ಮೀಡ್ಸ್ ಅಭಿಪ್ರಾಯಪಟ್ಟಿದ್ದಾರೆ.

5 / 6
ಆದರೆ 2008 ರಲ್ಲಿ 12 ಲಕ್ಷ ರೂ.ಗೆ ಆರ್​ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟ ವಿರಾಟ್ ಕೊಹ್ಲಿ ಆ ಬಳಿಕ ಯಾವತ್ತೂ ಹರಾಜಿನಲ್ಲಿ ಕಾಣಿಸಿಕೊಂಡಿಲ್ಲ ಎಂಬುದು ವಿಶೇಷ. ಅಲ್ಲದೆ ಐಪಿಎಲ್ ಇತಿಹಾಸದಲ್ಲಿ ಒಂದೇ ತಂಡದ ಪರ ಅತೀ ವರ್ಷ ಆಡಿದ ಆಟಗಾರ ಎಂಬ ದಾಖಲೆ ಕೂಡ ಕಿಂಗ್ ಕೊಹ್ಲಿ ಹೆಸರಿನಲ್ಲಿದೆ.

6 / 6
ಇನ್ನು ಈ ಬಾರಿ ಐಪಿಎಲ್​ನಲ್ಲಿ ಮೆಗಾ ಹರಾಜು ನಡೆಯಲಿದ್ದು, ಅದಕ್ಕೂ ಮುನ್ನ ಆರ್​ಸಿಬಿ ವಿರಾಟ್ ಕೊಹ್ಲಿಯನ್ನು ರಿಟೈನ್ ಮಾಡಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಈ ಬಾರಿ ಸಹ ಕಿಂಗ್ ಕೊಹ್ಲಿಯನ್ನು ಹರಾಜಿನಲ್ಲಿ ನಿರೀಕ್ಷಿಸುವಂತಿಲ್ಲ.