AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಗಾ ಹರಾಜಿನಲ್ಲಿ ಈ ಐವರು ವಿಕೆಟ್‌ಕೀಪರ್​ಗಳ ಮೇಲೆ ಹಣದ ಮಳೆ ಸುರಿಯುವುದು ಖಚಿತ

IPL 2025 Mega Auction: ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ 1574 ಆಟಗಾರರು ಭಾಗವಹಿಸಲಿದ್ದಾರೆ. ರಿಷಬ್ ಪಂತ್, ಕೆಎಲ್ ರಾಹುಲ್, ಇಶಾನ್ ಕಿಶನ್, ಜೋಸ್ ಬಟ್ಲರ್ ಮತ್ತು ಕ್ವಿಂಟನ್ ಡಿ ಕಾಕ್ ಅವರಂತಹ ಐದು ಪ್ರಮುಖ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳು ಹೆಚ್ಚು ಬೇಡಿಕೆಯಲ್ಲಿದ್ದಾರೆ. ಅವರನ್ನು ಪಡೆಯಲು ಹಲವಾರು ಫ್ರಾಂಚೈಸಿಗಳು ತೀವ್ರ ಸ್ಪರ್ಧೆ ನಡೆಸುವ ನಿರೀಕ್ಷೆಯಿದೆ.

ಪೃಥ್ವಿಶಂಕರ
|

Updated on: Nov 06, 2024 | 8:27 PM

Share
 ಐಪಿಎಲ್ 2025 ರ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ಜೆಡ್ಡಾದಲ್ಲಿ ನಡೆಯಲಿದೆ. ಈ ಮೆಗಾ ಹರಾಜಿನಲ್ಲಿ ಒಟ್ಟು 1574 ಕ್ರಿಕೆಟಿಗರು ಸೇರಿದ್ದಾರೆ. ಇವರಲ್ಲಿ ಯಾವ್ಯಾವ ಆಟಗಾರರಿಗೆ ಅಧಿಕ ಹಣ ಸಿಗಬಹುದು ಎಂಬ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ. ಅದರಲ್ಲೂ ಈ ಐವರು ಸ್ಟಾರ್ ವಿಕೆಟ್‌ಕೀಪರ್​ಗಳಲ್ಲಿ ಭಾರಿ ಮೊತ್ತ ಸಿಗಬಹುದು ಎಂದು ಹೇಳಲಾಗುತ್ತಿದೆ.

1 / 6
ಅಧಿಕ ಮೊತ್ತಕ್ಕೆ ಹರಾಜಾಗಬಹುದಾದ ಐವರು ವಿಕೆಟ್‌ಕೀಪರ್​ಗಳಲ್ಲಿ ಟೀಂ ಇಂಡಿಯಾದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಅಗ್ರಸ್ಥಾನದಲ್ಲಿದ್ದಾರೆ. ಪಂತ್​ರನ್ನು ಖರೀದಿಸಲು ಈಗಾಗಲೇ ಐದಾರು ಫ್ರಾಂಚೈಸಿಗಳು ತಂತ್ರ ಹೆಣೆಯುತ್ತಿವೆ. ಈ ಐದು ಫ್ರಾಂಚೈಸಿಗಳಲ್ಲಿ ಆರ್​ಸಿಬಿ, ಸಿಎಸ್​ಕೆ, ಪಿಬಿಕೆಎಸ್, ಲಕ್ನೋ, ಕೆಕೆಆರ್ ಸೇರಿವೆ. ಪಂತ್ ತಂಡ ಸೇರಿಕೊಳ್ಳುವುದರಿಂದ ಒಬ್ಬ ವಿಕೆಟ್‌ಕೀಪರ್ ಜೊತೆಗೆ ಸ್ಫೋಟಕ ಬ್ಯಾಟ್ಸ್‌ಮನ್ ಹಾಗೂ ನಾಯಕನೂ ಸಿಗುವುದರಿಂದ ಎಲ್ಲಾ ಫ್ರಾಂಚೈಸಿಗಳು ಪಂತ್ ಮೇಲೆ ಕಣ್ಣಿಟ್ಟಿವೆ.

2 / 6
ಲಕ್ನೋ ಸೂಪರ್​ಜೈಂಟ್ಸ್ ತಂಡದಿಂದ ಹೊರಬಿದ್ದಿರುವ ಕೆಎಲ್ ರಾಹುಲ್ ಮೇಲೂ ಸಾಕಷ್ಟು ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಇದಕ್ಕೆ ಕಾರಣವೂ ಇದ್ದು, ಪಂತ್​ರಂತೆ ರಾಹುಲ್​ ಕೂಡ ತಂಡ ಸೇರಿಕೊಳ್ಳುವುದರಿಂದ ಆ ತಂಡಕ್ಕೆ ಒಬ್ಬ ವಿಕೆಟ್‌ಕೀಪರ್ ಜೊತೆಗೆ ಸ್ಫೋಟಕ ಬ್ಯಾಟ್ಸ್‌ಮನ್ ಹಾಗೂ ನಾಯಕನೂ ಸಿಗುವುದರಿಂದ ಎಲ್ಲಾ ಫ್ರಾಂಚೈಸಿಗಳು ರಾಹುಲ್ ಮೇಲೆ ಕಣ್ಣಿಟ್ಟಿವೆ. ಈ ಫ್ರಾಂಚೈಸಿಗಳ ಪೈಕಿ ರಾಹುಲ್​ರನ್ನು ಖರೀದಿಸಲು ಆರ್​ಸಿಬಿ ತುದಿಗಾಲಿನಲ್ಲಿ ನಿಂತಿದೆ.

3 / 6
ಈ ಮೊದಲು ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ್ದ ಇಶಾನ್ ಕಿಶನ್​ ಅವರಿಗೂ ಮೆಗಾ ಹರಾಜಿನಲ್ಲಿ ಸಾಕಷ್ಟು ಹಣ ಸಿಗುವುದು ಖಚಿತ. ಮುಂಬೈ ತಂಡ ಈಗಾಗಲೇ ಐವರು ಕ್ಯಾಪ್ಡ್ ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿರುವುದರಿಂದ ಕಿಶನ್ ಅವರ ಮೇಲೆ ಆರ್​ಟಿಎಮ್ ಕಾರ್ಡನ್ನು ಬಳಸಲು ಸಾಧ್ಯವಿಲ್ಲ. ಹೀಗಾಗಿ ಕಿಶನ್ ಮುಂದಿನ ಆವೃತ್ತಿಯಿಂದ ಹೊಸ ತಂಡದೊಂದಿಗೆ ಕಾಣಿಕೊಳ್ಳಬಹುದು. ಕಿಶನ್ ವಿಕೆಟ್‌ಕೀಪರ್ ಜೊತೆಗೆ ಆರಂಭಿಕ ಬ್ಯಾಟರ್ ಆಗಿ ತಂಡಕ್ಕೆ ವೇಗದ ಆರಂಭ ನೀಡುವಲ್ಲಿ ನಿಸ್ಸೀಮರು.

4 / 6
ಕಳೆದ ಕೆಲವು ಆವೃತ್ತಿಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟಿಂಗ್‌ ಜೀವಾಳವಾಗಿದ್ದ ಇಂಗ್ಲೆಂಡ್‌ನ ಜೋಸ್ ಬಟ್ಲರ್ ಅವರನ್ನು ಫ್ರಾಂಚೈಸಿ ತಂಡದಿಂದ ಬಿಡುಗಡೆ ಮಾಡಿದೆ. ಈಗಾಗಲೇ ಫ್ರಾಂಚೈಸಿ 6 ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿರುವುದರಿಂದ ಬಟ್ಲರ್, ಮುಂದಿನ ಆವೃತ್ತಿಯಿಂದ ಹೊಸ ತಂಡದೊಂದಿಗೆ ಆಡುವುದನ್ನು ಕಾಣಬಹುದು. ಬಟ್ಲರ್ ಆರಂಭಿಕನಾಗಿ ಅಲ್ಲದೆ ವಿಕೆಟ್‌ಕೀಪರ್ ಆಗಿಯೂ ತಂಡಕ್ಕೆ ನೆರವಾಗಬಲ್ಲರು.

5 / 6
ದಕ್ಷಿಣ ಆಫ್ರಿಕಾದ ಮಾಜಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಹರಾಜಿಗೆ ಬಿಡುಗಡೆ ಮಾಡಿದೆ. ಹೀಗಾಗಿ ಅವರು ಕೂಡ ಆರಂಭಿಕನಾಗಿ ಅಲ್ಲದೆ ವಿಕೆಟ್‌ಕೀಪರ್ ಆಗಿಯೂ ತಂಡಕ್ಕೆ ಕೊಡುಗೆ ನೀಡಬಲ್ಲರು. ಆದ್ದರಿಂದ ಡಿ ಕಾಕ್ ಖರೀದಿಗೆ ಫ್ರಾಂಚೈಸಿಗಳು ಮುಗಿಬೀಳುವುದು ಖಚಿತ.

6 / 6