AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB: ‘ಆರ್‌ಸಿಬಿ ಜೊತೆಗಿನ ಪಯಣ ಇನ್ನೂ ಮುಗಿದಿಲ್ಲ’; ಹ್ಯಾಪಿ ನ್ಯೂಸ್ ನೀಡಿದ ಗ್ಲೆನ್ ಮ್ಯಾಕ್ಸ್‌ವೆಲ್

Glenn Maxwell: ಆರ್​ಸಿಬಿ ತಂಡ ಕೇವಲ ಮೂರು ಆಟಗಾರರನ್ನು ಉಳಿಸಿಕೊಂಡಿದ್ದು, ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ತಂಡದಿಂದ ಬಿಟ್ಟಿದೆ. ಆದರೆ ಮ್ಯಾಕ್ಸ್‌ವೆಲ್ ಅವರು ಈ ನಿರ್ಧಾರದ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಮತ್ತು ಆರ್​ಸಿಬಿ ಯ ತಂತ್ರವನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಮುಂಬರುವ ಮೆಗಾ ಹರಾಜಿನಲ್ಲಿ ಆರ್​ಸಿಬಿ ಮತ್ತೆ ಮ್ಯಾಕ್ಸ್‌ವೆಲ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ.

ಪೃಥ್ವಿಶಂಕರ
|

Updated on: Nov 06, 2024 | 5:34 PM

Share
ಐಪಿಎಲ್ 2025 ರ ಮೆಗಾ ಹರಾಜಿಗೆ ದಿನಾಂಕ ನಿಗದಿಯಾಗಿದೆ. ಇದೇ ತಿಂಗಳ ನವೆಂಬರ್ 24 ಮತ್ತು 25 ರಂದು ಆಟಗಾರರ ಹರಾಜು ನಡೆಯಲಿದೆ. ಈ ಬಾರಿಯ ಮೆಗಾ ಹರಾಜಿನಲ್ಲಿ 1574 ಆಟಗಾರರು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ತಾವು ತಂಡದಲ್ಲೇ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಿದ್ದವು. ಇದರಲ್ಲಿ ಕೆಲವು ಫ್ರಾಂಚೈಸಿಗಳು ಅಚ್ಚರಿಯ ನಿರ್ಧಾರವನ್ನು ಕೈಗೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದವು.

1 / 7
ಆ ಫ್ರಾಂಚೈಸಿಗಳ ಪೈಕಿ ಆರ್​ಸಿಬಿ ಕೂಡ ಒಂದಾಗಿತ್ತು. ರಿಟೆನ್ಷನ್ ಪಟ್ಟಿ ಬಿಡುಗಡೆಯಾಗುವುದಕ್ಕೂ ಮುನ್ನ ಆರ್​ಸಿಬಿ ಯಾವ್ಯಾವ ಆಟಗಾರರನ್ನು ಉಳಿಸಿಕೊಳ್ಳಬಹುದು ಎಂಬುದನ್ನು ಅಂದಾಜಿಸಲಾಗಿತ್ತು. ಆ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟ್ಸ್‌ಮನ್ ವಿಲ್ ಜಾಕ್ಸ್, ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ವೇಗಿ ಮೊಹಮ್ಮದ್ ಸಿರಾಜ್ ಅವರ ಹೆಸರು ಸಹ ಸೇರಿತ್ತು.

2 / 7
ಆದರೆ ಎಲ್ಲಾ ಊಹೆಗಳನ್ನು ಸುಳ್ಳು ಮಾಡಿದ್ದ ಆರ್​ಸಿಬಿ, ಕೇವಲ 3 ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿತ್ತು. ಅವರಲ್ಲಿ ವಿರಾಟ್ ಕೊಹ್ಲಿ, ರಜತ್ ಪಾಟಿದರ್, ಯಶ್ ದಯಾಳ್ ಮಾತ್ರ ಸೇರಿದ್ದರು. ಹೀಗಾಗಿ ಮೇಲೆ ತಿಳಿಸಿರುವ ಮೂರು ಆಟಗಾರರು ಮುಂದಿನ ಆವೃತ್ತಿಯಿಂದ ಆರ್​ಸಿಬಿ ಪರ ಆಡುವುದು ಅನುಮಾನ ಎಂದು ಹೇಳಲಾಗಿತ್ತು. ಆದರೀಗ ಈ ಬಗ್ಗೆ ಮಾತನಾಡಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

3 / 7
ಆರ್​ಸಿಬಿ ಫ್ರಾಂಚೈಸಿ ತನ್ನನ್ನು ಉಳಿಸಿಕೊಂಡಿರದ ಬಗ್ಗೆ ಮೌನ ಮುರಿದಿರುವ ಮ್ಯಾಕ್ಸ್‌ವೆಲ್, ಫ್ರಾಂಚೈಸಿಯ ಕಾರ್ಯತಂತ್ರ ನಿಜಕ್ಕೂ ನನಗೆ ಇಷ್ಟವಾಗಿದೆ. ಎಲ್ಲಾ ಐಪಿಎಲ್ ಫ್ರಾಂಚೈಸಿಗಳು ಈ ರೀತಿಯಾಗಿ ಮಾಡಿದರೆ ಒಳಿತು. ನನ್ನನ್ನು ತಂಡದಿಂದ ಹೊರಗಿಡುವ ಮುನ್ನ ಮೊ ಬೊಬಾಟ್ ಮತ್ತು ಆಂಡಿ ಫ್ಲವರ್ಸ್ ನನಗೆ ಕರೆ ಮಾಡಿದ್ದರು. ವೀಡಿಯೊ ಕಾಲ್​ನಲ್ಲಿ ನಮ್ಮ ನಡುವೆ 30 ನಿಮಿಷಕ್ಕೂ ಹೆಚ್ಚು ಸಮಯ ಮಾತುಕತೆ ನಡೆಯಿತು.

4 / 7
ಈ ವೇಳೆ ಈ ಇಬ್ಬರು ನನ್ನನ್ನು ಏಕೆ ಉಳಿಸಿಕೊಳ್ಳಲಿಲ್ಲ ಎಂಬುದನ್ನು ವಿವರವಾಗಿ ತಿಳಿಸಿದರು. ಉತ್ತಮ ತಂಡ ಕಟ್ಟಲು ನಾವು ಏನನ್ನು ನಿರೀಕ್ಷಿಸುತ್ತಿದ್ದವೆಂದು ಅವರು ನನಗೆ ಸಂಪೂರ್ಣ ಅರ್ಥ ಮಾಡಿಸಿದರು. ನನ್ನ ಪ್ರಕಾರ ಪ್ರತಿಯೊಂದು ತಂಡವೂ ಆರ್​ಸಿಬಿ ಯಂತೆಯೇ ಮಾಡಬೇಕೆಂದು ನಾನು ಬಯಸುತ್ತೇನೆ. ಇದು ತಂಡ ಮತ್ತು ಆಟಗಾರರ ನಡುವಿನ ಸಂಬಂಧವನ್ನು ಹೆಚ್ಚು ಸುಧಾರಿಸುತ್ತದೆ.

5 / 7
ಹೀಗಾಗಿ ಮುಂಬರುವ ಸೀಸನ್​ಗೆ ತಂಡದ ಕಾರ್ಯತಂತ್ರವನ್ನು ತಾನು ಅರ್ಥಮಾಡಿಕೊಂಡಿದ್ದೇನೆ. ಪ್ರಸ್ತುತ ಆರ್​ಸಿಬಿ ಜೊತೆಗಿನ ನನ್ನ ಪ್ರಯಾಣ ಇನ್ನೂ ಮುಗಿದಿಲ್ಲ ಎಂದು ಹೇಳಲು ಬಯಸುತ್ತೇನೆ. ಆರ್​ಸಿಬಿ ಫ್ರಾಂಚೈಸಿ ತಮ್ಮ ಸಿಬ್ಬಂದಿಯಲ್ಲೂ ಬದಲಾವಣೆಗಳನ್ನು ಮಾಡಿದೆ. ಹಾಗೆಯೇ ಸೂಕ್ತ ಆಟಗಾರರನ್ನು ಆಯ್ಕೆ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ನನಗೆ ತಿಳಿದಿದೆ. ನಾನು ಆ ತಂಡಕ್ಕೆ ಹಿಂತಿರುಗಲು ಇಷ್ಟಪಡುತ್ತೇನೆ. ಆಡಲು ಆರ್​ಸಿಬಿ ಉತ್ತಮ ಫ್ರಾಂಚೈಸ್ ಆಗಿದೆ ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.

6 / 7
ಇದರರ್ಥ ಆರ್​ಸಿಬಿ ಬಳಿ ಇನ್ನು 3 ಆರ್​ಟಿಎಮ್​ ಆಯ್ಕೆಯಿದ್ದು, ಮೆಗಾ ಹರಾಜಿನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್​ರನ್ನು ಮತ್ತೊಮ್ಮೆ ತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆಗಳು ಹೆಚ್ಚಿವೆ ಎಂಬುದನ್ನು ನಾವು ಮ್ಯಾಕ್ಸ್‌ವೆಲ್ ಅವರ ಮಾತಿನಿಂದ ಅರಿತುಕೊಳ್ಳಬಹುದಾಗಿದೆ. ಇದು ನಿಜವಾದರೆ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತೊಮ್ಮೆ ಆರ್​ಸಿಬಿ ಜೆರ್ಸಿಯನ್ನು ತೊಟ್ಟು ಕಣಕ್ಕಿಳಿಯುವುದನ್ನು ನಾವು ಕಾಣಬಹುದಾಗಿದೆ.

7 / 7
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ

ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ

ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್

ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ

ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!

ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ

ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ

ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌

ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?