Virat Kohli: ಜನ್ಮ ದಿನದ ಸಂಭ್ರಮದಲ್ಲಿರುವ ಕಿಂಗ್ ಕೊಹ್ಲಿಗೆ ಶಾಕ್ ನೀಡಿದ ಐಸಿಸಿ..!

ICC Test Rankings: ವಿರಾಟ್ ಕೊಹ್ಲಿ ಅವರು ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್ ಶ್ರೇಯಾಂಕದಲ್ಲಿ 22ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದು 10 ವರ್ಷಗಳ ನಂತರ ಅವರ ಅತ್ಯಂತ ಕಡಿಮೆ ಶ್ರೇಯಾಂಕ. ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧದ ಕಳಪೆ ಪ್ರದರ್ಶನದಿಂದಾಗಿ ಈ ಕುಸಿತ ಸಂಭವಿಸಿದೆ. ಈ ವರ್ಷ ಅವರ ಸರಾಸರಿ 22.72 ಮಾತ್ರ. ಯಶಸ್ವಿ ಜೈಸ್ವಾಲ್ ಭಾರತದ ಪರ ಟಾಪ್ 5 ರೊಳಗೆ ಇರುವ ಏಕೈಕ ಆಟಗಾರರಾಗಿದ್ದಾರೆ.

ಪೃಥ್ವಿಶಂಕರ
|

Updated on: Nov 06, 2024 | 4:04 PM

ವಿರಾಟ್ ಕೊಹ್ಲಿ ಪ್ರಸ್ತುತ ಕ್ರಿಕೆಟ್ ಲೋಕದ ರನ್ ಸಾಮ್ರಾಟ ಎನ್ನುವುದನ್ನು ಹೊಸದಾಗಿ ಹೇಳಬೇಕಿಲ್ಲ. ಆದರೆ ವಿರಾಟ್ ಕೊಹ್ಲಿ ಕಳೆದ ಎರಡು ಟೆಸ್ಟ್ ಸರಣಿಗಳಲ್ಲಿ ದಯನೀಯವಾಗಿ ವಿಫಲರಾಗಿದ್ದಾರೆ. ಬಾಂಗ್ಲಾದೇಶ ಮತ್ತು ನಂತರ ನ್ಯೂಜಿಲೆಂಡ್ ವಿರುದ್ಧ ವಿರಾಟ್ ಅವರ ಬ್ಯಾಟ್ ಭಾಗಶಃ ಮೌನವಾಗಿತ್ತು. ಇದೀಗ ಅದರ ಪರಿಣಾಮವನ್ನು ಕೊಹ್ಲಿ, ಐಸಿಸಿ ಟೆಸ್ಟ್ ರ್ಯಾಂಕಿಂಗ್​ನಲ್ಲಿ ಎದುರಿಸಬೇಕಾಗಿದೆ.

1 / 6
ವಾಸ್ತವವಾಗಿ ಐಸಿಸಿ, ನೂತನ ಟೆಸ್ಟ್ ಶ್ರೇಯಾಂಕಗಳನ್ನು ಪ್ರಕಟಿಸಿದೆ. ಇದರಲ್ಲಿ ವಿರಾಟ್ ಕೊಹ್ಲಿ ಟಾಪ್ 10 ರಿಂದ ಅಲ್ಲ, ಟಾಪ್ 20 ರಿಂದಲೇ ಹೊರಗುಳಿದಿದ್ದಾರೆ. ಈ ಮೂಲಕ ಬರೋಬ್ಬರಿ 10 ವರ್ಷಗಳ ಸುದೀರ್ಘ ಸಮಯದ ನಂತರ ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಇಂತಹ ಕೆಟ್ಟ ದಿನವನ್ನು ಎದುರಿಸಬೇಕಾಗಿ ಬಂದಿದೆ.

2 / 6
ಐಸಿಸಿ ಇಂದು ಬಿಡುಗಡೆ ಮಾಡಿರುವ ಟೆಸ್ಟ್ ಬ್ಯಾಟ್ಸ್‌ಮನ್​ಗಳ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ 22 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದಕ್ಕೂ ಮುನ್ನ ಕೊಹ್ಲಿ, 2014 ರಲ್ಲಿ ಅಂದರೆ 10 ವರ್ಷಗಳ ಹಿಂದೆ ಐಸಿಸಿ ಟೆಸ್ಟ್ ರ್ಯಾಂಕಿಂನಲ್ಲಿ ಟಾಪ್ 20 ರಿಂದ ಹೊರಬಿದ್ದಿದ್ದರು. ಅಂದಿನ ಇಂಗ್ಲೆಂಡ್ ಪ್ರವಾಸದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಕೊಹ್ಲಿಗೆ ಐಸಿಸಿ ಈ ರೀತಿಯ ಶಾಕ್ ನೀಡಿತ್ತು.

3 / 6
ವಿರಾಟ್ ಕೊಹ್ಲಿ ಈ ವರ್ಷ 6 ಟೆಸ್ಟ್ ಪಂದ್ಯಗಳನ್ನಾಡಿದ್ದು, 22.72ರ ಸರಾಸರಿಯಲ್ಲಿ 250 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಅವರ ಬ್ಯಾಟ್‌ನಿಂದ ಕೇವಲ ಒಂದು ಅರ್ಧಶತಕ ಮಾತ್ರ ಬಂದಿದೆ. ಇದಕ್ಕೆ ಹೋಲಿಸಿದರೆ ಕಳೆದ ವರ್ಷ ವಿರಾಟ್‌ಗೆ ಉತ್ತಮವಾಗಿತ್ತು. ಅವರು ಆಡಿದ 8 ಟೆಸ್ಟ್‌ಗಳಲ್ಲಿ 671 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದರು.

4 / 6
ಆದರೆ 2020 ರಿಂದ 2022 ರವರೆಗೆ ಕೊಹ್ಲಿ ಫಾರ್ಮ್ ತುಂಬಾ ಕೆಟ್ಟದಾಗಿತ್ತು. 2020 ರಲ್ಲಿ ವಿರಾಟ್ ಅವರ ಟೆಸ್ಟ್ ಸರಾಸರಿ 19.33 ಆಗಿದ್ದರೆ, 2021 ರಲ್ಲಿ 28.21, 2022 ರಲ್ಲಿ 26.50 ಸರಾಸರಿಯಲ್ಲಿ ರನ್ ಗಳಿಸಿದ್ದರು. ಅಂದರೆ ಕಳೆದ ಐದು ವರ್ಷಗಳಲ್ಲಿ ನಾಲ್ಕು ಬಾರಿ ವಿರಾಟ್ ಅವರ ಬ್ಯಾಟಿಂಗ್ ಸರಾಸರಿ 30ಕ್ಕಿಂತ ಕಡಿಮೆ ಇರುವುದು ನಿಜಕ್ಕೂ ಕಳವಳಕಾರಿ ಸಂಗತಿ.

5 / 6
ಉಳಿದಂತೆ ಯಶಸ್ವಿ ಜೈಸ್ವಾಲ್ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಭಾರತದ ಪರ ಟಾಪ್ 5 ರೊಳಗಿರುವ ಏಕೈಕ ಬ್ಯಾಟ್ಸ್‌ಮನ್ ಆಗಿದ್ದಾರೆ. ಜೈಸ್ವಾಲ್ ಪ್ರಸ್ತುತ 4 ನೇ ಸ್ಥಾನದಲ್ಲಿದ್ದಾರೆ. ರಿಷಬ್ ಪಂತ್ ಆರನೇ ಸ್ಥಾನದಲ್ಲಿದ್ದರೆ, ಶುಭ್‌ಮನ್ ಗಿಲ್ 16ನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 22ನೇ ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ 26ನೇ ಸ್ಥಾನಕ್ಕೆ ಕುಸಿದಿದ್ದಾರೆ.

6 / 6
Follow us
ಮನೆಯಲ್ಲಿ ಅಕ್ಷತೆಯನ್ನು ಹೇಗೆ ತಯಾರಿಸಬೇಕು? ವಿಡಿಯೋ ನೋಡಿ

Daily horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ

ಜಾಮೀನು ಸಿಕ್ಕಿದ್ದಕ್ಕೆ ಚಾಮುಂಡಿ ಬೆಟ್ಟದಲ್ಲಿ ಹರಿಕೆ ತೀರಿಸಿದ ವಿಜಯಲಕ್ಷ್ಮಿ

ಸಿಟಿ ರವಿ ವಿರುದ್ಧ ರಾಷ್ಟ್ರಪತಿಗೆ ಪತ್ರ, ಮೋದಿ ಭೇಟಿ ಮಾಡುವೆ: ಹೆಬ್ಬಾಳ್ಕರ್

ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಕುಮಾರಸ್ವಾಮಿ ಗುಡ್ ನ್ಯೂಸ್

ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್

ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ

ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ

ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ

ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್