IPL 2025: RCBಗೆ ಆಘಾತದ ಮೇಲೆ ಆಘಾತ: ಪ್ಲೇಆಫ್​ ಪಂದ್ಯಗಳಿಗೆ ಐವರು ಅಲಭ್ಯ?

Updated on: May 15, 2025 | 11:54 AM

IPL 2025 RCB: ಈ ಬಾರಿಯ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿ ಪ್ರದರ್ಶನ ನೀಡಿದೆ. ಆಡಿರುವ 11 ಪಂದ್ಯಗಳಲ್ಲಿ 8 ಜಯ ಸಾಧಿಸಿ 16 ಅಂಕಗಳನ್ನು ಪಡೆದಿರುವ ಆರ್​ಸಿಬಿ ತಂಡವು ಮುಂದಿನ ಮೂರು ಪಂದ್ಯಗಳಲ್ಲಿ ಒಂದು ಜಯ ಸಾಧಿಸಿ ಪ್ಲೇಆಫ್ ಆಡುವುದು ಖಚಿತವಾಗಲಿದೆ.

1 / 7
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಪುನರಾರಂಭಕ್ಕೆ ದಿನಾಂಕ ಫಿಕ್ಸ್ ಆಗಿದೆ. ಅದರಂತೆ ಮೇ 17 ರಿಂದ ಐಪಿಎಲ್​ ಮತ್ತೆ ಶುರುವಾಗಲಿದೆ. ಶನಿವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೆ ಆರ್​ಸಿಬಿ ತಂಡದ ಇಬ್ಬರು ಅಲಭ್ಯರಾಗಿರುವುದು ಖಚಿತವಾಗಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಪುನರಾರಂಭಕ್ಕೆ ದಿನಾಂಕ ಫಿಕ್ಸ್ ಆಗಿದೆ. ಅದರಂತೆ ಮೇ 17 ರಿಂದ ಐಪಿಎಲ್​ ಮತ್ತೆ ಶುರುವಾಗಲಿದೆ. ಶನಿವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೆ ಆರ್​ಸಿಬಿ ತಂಡದ ಇಬ್ಬರು ಅಲಭ್ಯರಾಗಿರುವುದು ಖಚಿತವಾಗಿದೆ.

2 / 7

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಡಗೈ ದಾಂಡಿಗ ದೇವದತ್ ಪಡಿಕ್ಕಲ್ ಗಾಯಗೊಂಡಿದ್ದು, ಹೀಗಾಗಿ ಮುಂದಿನ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಅಲ್ಲದೆ ಅವರ ಬದಲಿಗೆ ಇದೀಗ ತಂಡಕ್ಕೆ ಕರ್ನಾಟಕದ ಬಲಗೈ ಬ್ಯಾಟರ್ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದಾರೆ.

3 / 7

ಇನ್ನು ಭುಜದ ನೋವಿನಿಂದ ಬಳಲುತ್ತಿರುವ ಜೋಶ್ ಹೇಝಲ್​ವುಡ್ ಕೂಡ ಆರ್​ಸಿಬಿ ತಂಡದ ಉಳಿದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಆಸ್ಟ್ರೇಲಿಯಾ ವೇಗಿ ಕೂಡ ಪ್ಲೇಆಫ್ ಸುತ್ತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎನ್ನಲಾಗುತ್ತಿದೆ.

4 / 7

ಹಾಗೆಯೇ ಆರ್​ಸಿಬಿ ತಂಡದ ಆರಂಭಿಕ ದಾಂಡಿಗ ಜೇಕಬ್ ಬೆಥೆಲ್ ಕೂಡ ಪ್ಲೇಆಫ್ ಪಂದ್ಯದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಇಂಗ್ಲೆಂಡ್ ತಂಡದಲ್ಲಿ ಬೆಥೆಲ್ ಸ್ಥಾನ ಪಡೆದಿದ್ದಾರೆ. ಹೀಗಾಗಿ ಅವರು ಕೂಡ ಕೆಕೆಆರ್ ಹಾಗೂ ಎಸ್​ಆರ್​ಹೆಚ್ ವಿರುದ್ಧದ ಪಂದ್ಯಗಳ ಬಳಿಕ ತವರಿಗೆ ಹಿಂತಿರುಗಲಿದ್ದಾರೆ.

5 / 7

ಇನ್ನು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ತಂಡದ ಭಾಗವಾಗಿರುವ ಸೌತ್ ಆಫ್ರಿಕಾ ವೇಗಿ ಲುಂಗಿ ಎನ್​ಗಿಡಿ ಕೂಡ ಮೇ 25 ರಂದು ತವರಿಗೆ ಮರಳಲಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಆರ್​ಸಿಬಿ ತಂಡವು ಪ್ಲೇಆಫ್ ಪ್ರವೇಶಿಸಿದರೆ ಲುಂಗಿ ಎನ್​ಗಿಡಿ ಕೂಡ ಕಾಣಿಸಿಕೊಳ್ಳುವುದಿಲ್ಲ. 

6 / 7

ಮತ್ತೊಂದೆಡೆ ರೊಮಾರಿಯೊ ಶೆಫರ್ಡ್ ವೆಸ್ಟ್ ಇಂಡೀಸ್ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ನಡುವಣ ಏಕದಿನ ಸರಣಿ ಮೇ 29 ರಿಂದ ಶುರುವಾಗಲಿದೆ. ಹೀಗಾಗಿ ರೊಮಾರಿಯೊ ಶೆಫರ್ಡ್ ಕೂಡ ಪ್ಲೇಅಫ್ ಪಂದ್ಯಕ್ಕೂ ಮುನ್ನವೇ ಆರ್​ಸಿಬಿ ತಂಡವನ್ನು ತೊರೆಯಲಿದ್ದಾರೆ ಎಂದು ವರದಿಯಾಗಿದೆ.

7 / 7

ಒಟ್ಟಿನಲ್ಲಿ ಪ್ಲೇಆಫ್ ಸುತ್ತಿಗೆ ಪ್ರವೇಶಿಸುವ ಹಂತದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇದೀಗ ಪ್ರಮುಖ ಆಟಗಾರರ ಅಲಭ್ಯತೆಯೇ ದೊಡ್ಡ ಚಿಂತೆ. ಏಕೆಂದರೆ ಪ್ಲೇಆಫ್ ಪಂದ್ಯಗಳು ಮೇ 29 ರಿಂದ ಶುರುವಾಗಲಿದ್ದು, ಈ ಪಂದ್ಯಗಳಿಗೆ ಆರ್​ಸಿಬಿ ತಂಡದ ಐವರು ಆಟಗಾರರು ಅಲಭ್ಯರಾಗುವುದು ಬಹುತೇಕ ಖಚಿತವಾಗಿದೆ. ಈ ಐವರ ಅನುಪಸ್ಥಿತಿ ನಡುವೆಯೂ ಭರ್ಜರಿ ಪ್ರದರ್ಶನ ನೀಡಿ ಈ ಬಾರಿ ಆರ್​ಸಿಬಿ ಕಪ್ ಗೆಲ್ಲಲಿದೆಯಾ ಕಾದು ನೋಡಬೇಕಿದೆ.

Published On - 12:54 pm, Wed, 14 May 25

Loading...
Unable to load recommendations.
Follow Us