IPL 2025: ಸಿಕ್ಸ್ ಹೊಡೆಸಿಕೊಳ್ಳದೇ ಒಂದೇ ಎಸೆತದಲ್ಲಿ ರನ್ ನೀಡಿದ ಶಾರ್ದೂಲ್ ಠಾಕೂರ್

Updated on: Apr 09, 2025 | 1:54 PM

IPL 2025 KKR vs LSG: ಕೊಲ್ಕತ್ತಾ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 238 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಕೆಕೆಆರ್ 234 ರನ್​ಗಳಿಸಿತು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡವು 4 ರನ್​ಗಳ ರೋಚಕ ಜಯ ಸಾಧಿಸಿತು.

1 / 5
IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ 21ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಲ್​ರೌಂಡರ್ ಶಾರ್ದೂಲ್ ಠಾಕೂರ್ (Shardul Thakur) ಅನಪೇಕ್ಷಿತ ದಾಖಲೆ ಬರೆದಿದ್ದಾರೆ. ಅದು ಕೂಡ ಒಂದೇ ಎಸೆತದಲ್ಲಿ 6 ರನ್​ಗಳನ್ನು ನೀಡುವ ಮೂಲಕ. ವಿಶೇಷ ಎಂದರೆ ಈ ಆರು ರನ್​ಗಳಲ್ಲಿ ಸಿಕ್ಸ್​ ಮೂಡಿಬಂದಿಲ್ಲ. ಫೋರ್​ ಅನ್ನು ಸಹ ನೀಡಿಲ್ಲ. ಇದಾಗ್ಯೂ ಒಂದೇ ಎಸೆತದಲ್ಲಿ 6 ರನ್ ನೀಡಲು ಹೇಗೆ ಸಾಧ್ಯ? ಎಂಬ ಪ್ರಶ್ನೆ ಮೂಡುವುದು ಸಹಜ.

2 / 5
ಈ ಪ್ರಶ್ನೆಗೆ ಉತ್ತರ 5 ವೈಡ್​ಗಳು. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಇನಿಂಗ್ಸ್​ನ 13ನೇ ಓವರ್​ ಎಸೆಯಲು ಬಂದ ಶಾರ್ದೂಲ್ ಠಾಕೂರ್ ಬ್ಯಾಕ್ ಟು ಬ್ಯಾಕ್ 5 ವೈಡ್​ಗಳನ್ನು ಎಸೆದಿದ್ದಾರೆ. ಅಂದರೆ 5 ಎಸೆತಗಳಲ್ಲಿ 5 ರನ್ ನೀಡಿದರೂ ಶಾರ್ದೂಲ್ ಅವರ ಓವರ್ ಕೌಂಟ್ ಶುರುವಾಗಿರಲಿಲ್ಲ. ಇನ್ನು ಆರನೇ ಎಸೆತದಲ್ಲಿ ಒಂದು ರನ್​ ನೀಡುವ ಮೂಲಕ ಮೊದಲ ಎಸೆತವನ್ನು ಪೂರೈಸಿದರು. 

3 / 5
ಈ ಮೂಲಕ ಶಾರ್ದೂಲ್ ಠಾಕೂರ್ ಒಂದೇ ಎಸೆತದಲ್ಲಿ 6 ರನ್​ಗಳನ್ನು ನೀಡಿ ಅನಗತ್ಯ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಅಲ್ಲದೆ ಐಪಿಎಲ್ ಇತಿಹಾಸದಲ್ಲಿ ಒಂದೇ ಓವರ್​ನಲ್ಲಿ ಅತೀ ಹೆಚ್ಚು ಎಸೆತಗಳನ್ನು ಎಸೆದ ಮೂರನೇ ಬೌಲರ್​ ಎಂಬ ಹೀನಾಯ ದಾಖಲೆಯೊಂದನ್ನು ಸಹ ಬರೆದರು.

4 / 5
ಇದಕ್ಕೂ ಮುನ್ನ ಇಂತಹದೊಂದು ದಾಖಲೆ ಮೊಹಮ್ಮದ್ ಸಿರಾಜ್ ಹಾಗೂ ತುಷಾರ್ ದೇಶಪಾಂಡೆ ಹೆಸರಿನಲ್ಲಿತ್ತು. 2023 ರಲ್ಲಿ ಆರ್​ಸಿಬಿ ಪರ ಕಣಕ್ಕಿಳಿದಿದ್ದ ಸಿರಾಜ್ ಒಂದೇ ಓವರ್​ನಲ್ಲಿ 11 ಎಸೆತಗಳನ್ನು ಎಸೆದಿದ್ದರು. ಇದೇ ವರ್ಷ ಸಿಎಸ್​ಕೆ ಪರ ಆಡಿದ್ದ ತುಷಾರ್ ದೇಶಪಾಂಡೆ ಕೂಡ 11 ಎಸೆತಗಳೊಂದಿಗೆ ಓವರ್​ ಪೂರ್ಣಗೊಳಿಸಿದ್ದರು.

5 / 5
ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 11 ಎಸೆತಗಳನ್ನು (wd,wd,wd,wd,wd,1,1,0,4,2,W) ಎಸೆಯುವ ಮೂಲಕ ಶಾರ್ದೂಲ್ ಠಾಕೂರ್ ಕೂಡ ಐಪಿಎಲ್​ನಲ್ಲಿ ದೀರ್ಘಾವಧಿ ಬೌಲಿಂಗ್ ಮಾಡಿದ ಬೌಲರ್​ಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಐಪಿಎಲ್​ನ ಅನಗತ್ಯ ದಾಖಲೆ ಶೂರರ ಪಟ್ಟಿಗೆ ತಮ್ಮ ಹೆಸರನ್ನು ಸೇರ್ಪಡೆಗೊಳಿಸಿದ್ದಾರೆ.