
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಹರಾಜು ಪ್ರಕ್ರಿಯೆಗೆ ತೆರೆ ಬಿದ್ದಿದೆ. ಈ ಬಾರಿಯ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಬಿಡ್ ಆಗಿರುವುದು ಕ್ಯಾಮರೋನ್ ಗ್ರೀನ್. ಆಸ್ಟ್ರೇಲಿಯಾ ಆಲ್ರೌಂಡರ್ನನ್ನು ಕೆಕೆಆರ್ ಬರೋಬ್ಬರಿ 25.20 ಕೋಟಿ ರೂ.ಗೆ ಖರೀದಿಸಿದ್ದಾರೆ. ಇದಾಗ್ಯೂ ಜಾಕ್ ಪಾಟ್ ಹೊಡೆದಿರುವುದು ಜೋಶ್ ಇಂಗ್ಲಿಸ್ಗೆ (Josh Inglis).

ಏಕೆಂದರೆ ಜೋಶ್ ಇಂಗ್ಲಿಸ್ ಬರೋಬ್ಬರಿ 8.60 ಕೋಟಿ ರೂ.ಗೆ ಬಿಡ್ ಆಗಿದ್ದಾರೆ. ಆಸ್ಟ್ರೇಲಿಯನ್ ವಿಕೆಟ್ ಕೀಪರ್ ಬ್ಯಾಟರ್ನನ್ನು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಬೃಹತ್ ಮೊತ್ತ ನೀಡಿ ಖರೀದಿಸಿದೆ. ಇದರಲ್ಲೇನು ವಿಶೇಷ ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಉತ್ತರ ಈ ಕೆಳಗಿದೆ...

ಜೋಶ್ ಇಂಗ್ಲಿಸ್ ಕಳೆದ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದರು. ಇದಾಗ್ಯೂ ಅವರನ್ನು ಕಿಂಗ್ಸ್ ಪಡೆ ರಿಟೈನ್ ಮಾಡಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಜೋಶ್ ಇಂಗ್ಲಿಸ್ ಮುಂದಿನ ಸೀಸನ್ನಲ್ಲಿ ಕೇವಲ 4 ಮ್ಯಾಚ್ಗಳಿಗೆ ಮಾತ್ರ ಲಭ್ಯನಿರಲಿದ್ದೇನೆ ಎಂದು ತಿಳಿಸಿರುವುದು.

ಅಂದರೆ ಐಪಿಎಲ್ 2026 ರಲ್ಲಿ ಜೋಶ್ ಇಂಗ್ಲಿಸ್ ವೈಯುಕ್ತಿಕ ಕಾರಣಗಳಿಂದಾಗಿ ಕೇವಲ 4 ನಾಲ್ಕು ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿಯಲಿದ್ದೇನೆ ಎಂದು ತಿಳಿಸಿದ್ದಾರೆ. ಮೊದಲೇ ನಾಲ್ಕು ಮ್ಯಾಚ್ಗಳಿಗೆ ಲಭ್ಯರಿರುವುದಾಗಿ ತಿಳಿಸಿ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು.

ಇದಾಗ್ಯೂ 4 ಪಂದ್ಯಗಳಿಗಾಗಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಜೋಶ್ ಇಂಗ್ಲಿಸ್ ಅವರನ್ನು ಬರೋಬ್ಬರಿ 8.60 ಕೋಟಿ ರೂ. ನೀಡಿ ಖರೀದಿಸಿದೆ. ಅದರಂತೆ ಒಂದು ಪಂದ್ಯಕ್ಕಾಗಿ ಇಂಗ್ಲಿಸ್ ಬರೋಬ್ಬರಿ 2.14 ಕೋಟಿ ರೂ. ಪಡೆಯಲಿದ್ದಾರೆ. ಈ ಮೂಲಕ ಮುಂದಿನ ಸೀಸನ್ ಐಪಿಎಲ್ನಲ್ಲಿ ಪಂದ್ಯವೊಂದಕ್ಕೆ ಗರಿಷ್ಠ ಮೊತ್ತ ಪಡೆಯುವ ಆಟಗಾರನಾಗಿ ಜೋಶ್ ಇಂಗ್ಲಿಸ್ ಕಾಣಿಸಿಕೊಳ್ಳಲಿದ್ದಾರೆ.