- Kannada News Photo gallery Cricket photos IPL 2026: LSG are likely to release Mayank Yadav ahead of the IPL 2026 auction
IPL 2026: LSG ತಂಡದಿಂದ 11 ಕೋಟಿ ರೂ. ಆಟಗಾರನಿಗೆ ಗೇಟ್ ಪಾಸ್..!
IPL 2026 LSG: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜು ಡಿಸೆಂಬರ್ ಮೂರನೇ ವಾರದಲ್ಲಿ ನಡೆಯಲಿದೆ. ಈ ಹರಾಜಿಗೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಕೆಲ ಪ್ರಮುಖ ಆಟಗಾರರು ಹೊರಬೀಳುವುದು ಖಚಿತ. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿದ ಆಟಗಾರ ಕೂಡ ಇರುವುದು ವಿಶೇಷ.
Updated on: Oct 11, 2025 | 12:05 PM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಹರಾಜಿಗೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದಿಂದ ಒಂದಷ್ಟು ಸ್ಟಾರ್ ಆಟಗಾರರು ಹೊರಬೀಳಲಿದ್ದಾರೆ. ಈ ಸ್ಟಾರ್ ಆಟಗಾರರಲ್ಲಿ 11 ಕೋಟಿ ರೂ. ಬೆಲೆಯ ಸ್ಟಾರ್ ಆಟಗಾರ ಕೂಡ ಇರುವುದು ವಿಶೇಷ.

ಲಕ್ನೋ ಸೂಪರ್ ಜೈಂಟ್ಸ್ ಮೂಲಗಳ ಮಾಹಿತಿ ಪ್ರಕಾರ, ಐಪಿಎಲ್ ಮಿನಿ ಹರಾಜಿಗೂ ಮುನ್ನ ತಂಡದ ಪ್ರಮುಖ ವೇಗಿ ಮಯಾಂಕ್ ಯಾದವ್ ಅವರನ್ನು ಕೈ ಬಿಡಲು ನಿರ್ಧರಿಸಲಾಗಿದೆ. 2022 ರಿಂದ ಲಕ್ನೋ ತಂಡದ ಭಾಗವಾಗಿರುವ ಮಯಾಂಕ್ ಈವರೆಗೆ ಆಡಿರುವುದು ಕೇವಲ 6 ಪಂದ್ಯಗಳನ್ನು ಮಾತ್ರ ಎಂದರೆ ನಂಬಲೇಬೇಕು.

2024 ರಲ್ಲಿ ನಾಲ್ಕು ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದಿದ್ದ ಮಯಾಂಕ್ ಯಾದವ್ ತನ್ನ ಬೆಂಕಿಯುಂಡೆಯಂತಹ ಎಸೆತಗಳಿಂದ ಗಮನ ಸೆಳೆದಿದ್ದರು. ಅಲ್ಲದೆ ನಾಲ್ಕು ಮ್ಯಾಚ್ಗಳಲ್ಲಿ 7 ವಿಕೆಟ್ ಕಬಳಿಸಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಹೀಗಾಗಿಯೇ 23 ವರ್ಷದ ಯುವ ವೇಗಿಯನ್ನು ಮೆಗಾ ಹರಾಜಿಗೂ ಮುನ್ನ ಬರೋಬ್ಬರಿ 11 ಕೋಟಿ ರೂ. ನೀಡಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ರಿಟೈನ್ ಮಾಡಿಕೊಂಡಿತು. ಆದರೆ ಐಪಿಎಲ್ 2025 ರಲ್ಲಿ ಫಿಟ್ನೆಸ್ ಸಮಸ್ಯೆಯಿಂದ ಸೈಡ್ ಲೈನ್ ಆದ ಮಯಾಂಕ್ ಕಣಕ್ಕಿಳಿದದ್ದು ಕೇವಲ 2 ಮ್ಯಾಚ್ಗಳಲ್ಲಿ ಮಾತ್ರ.

ಐಪಿಎಲ್ 2025 ರಲ್ಲಿ 2 ಪಂದ್ಯಗಳಲ್ಲಿ 8 ಓವರ್ ಎಸೆದಿದ್ದ ಮಯಾಂಕ್ ಯಾದವ್ ನೀಡಿದ್ದು ಬರೋಬ್ಬರಿ 100 ರನ್ಗಳು. ಅಲ್ಲದೆ ಕೇವಲ 2 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದರು. ಇದೇ ಕಾರಣದಿಂದಾಗಿ ಇದೀಗ ಮಯಾಂಕ್ ಯಾದವ್ ಅವರನ್ನು ಬಿಡುಗಡೆ ಮಾಡಲು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ನಿರ್ಧರಿಸಿದೆ.




