AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಸಂಜು ಸ್ಯಾಮ್ಸನ್ CSK ಎಂಟ್ರಿಗೆ ಬ್ರೇಕ್

IPL 2026 Sanju Samson: ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಮಹೇಂದ್ರ ಸಿಂಗ್ ಧೋನಿಯ ಉತ್ತರಾಧಿಕಾರಿಯನ್ನು ಹುಡುಕುತ್ತಿದೆ. ಈ ಹುಡುಕಾಟದ ನಡುವೆ ಸಿಎಸ್​ಕೆ ಜೊತೆ ಸಂಜು ಸ್ಯಾಮ್ಸನ್ ಹೆಸರು ತಳುಕು ಹಾಕಿಕೊಂಡಿತ್ತು. ಇದರ ಬೆನ್ನಲ್ಲೇ ಸ್ಯಾಮ್ಸನ್ ಖರೀದಿಗಾಗಿ ನಾವು ಆಸಕ್ತರಾಗಿದ್ದೇವೆ ಎಂಬುದನ್ನು ಸಹ ಸಿಎಸ್​ಕೆ ಫ್ರಾಂಚೈಸಿ ಮೂಲಗಳು ಖಚಿತಪಡಿಸಿದ್ದರು. ಆದರೀಗ...

ಝಾಹಿರ್ ಯೂಸುಫ್
|

Updated on: Aug 06, 2025 | 12:54 PM

Share
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರ ಮಿನಿ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ (CSK) ಬಿಗ್ ಡೀಲ್ ಕುದುರಿಸಿಕೊಳ್ಳುವ ಸಾಧ್ಯತೆಯಿದೆ. ಅದು ಕೂಡ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ (Sanju Samson) ಅವರನ್ನು ಖರೀದಿಸುವ ಮೂಲಕ..! ಇಂತಹದೊಂದು ಸುದ್ದಿಯೊಂದು ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದ್ದವು.

1 / 5
ಈ ಸುದ್ದಿ ಬೆನ್ನಲ್ಲೇ ಐಪಿಎಲ್ 2026ರ ಟ್ರೇಡ್ ವಿಂಡೋ ಮೂಲಕ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಲು ನಾವು ಆಸಕ್ತರಾಗಿದ್ದೇವೆ ಎಂಬುದನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದರು. ಸ್ಯಾಮ್ಸನ್ ಅವರ ಆಯ್ಕೆಯನ್ನು ನಾವು ಖಂಡಿತವಾಗಿಯೂ ಎದುರು ನೋಡುತ್ತಿದ್ದೇವೆ. ಏಕೆಂದರೆ ಅವರು ಪರಿಪೂರ್ಣ ಆಟಗಾರ. ಹೀಗಾಗಿ ಅವರನ್ನು ತಂಂಡಕ್ಕೆ ಕರೆತರಲು ಉತ್ಸುಕರಾಗಿದ್ದೇವೆ ಎಂದು ತಿಳಿಸಿದ್ದರು.

2 / 5
ಸಂಜು ಸ್ಯಾಮ್ಸನ್ ಭಾರತೀಯ ಬ್ಯಾಟ್ಸ್‌ಮನ್. ಅಷ್ಟೇ ಅಲ್ಲದೆ ವಿಕೆಟ್ ಕೀಪರ್ ಮತ್ತು ಓಪನರ್. ಅವರು ಆಯ್ಕೆಗೆ ಲಭ್ಯವಿದ್ದರೆ, ನಮ್ಮ ತಂಡಕ್ಕೆ ಸೇರಿಸಿಕೊಳ್ಳುವ ಆಯ್ಕೆಯನ್ನು ನಾವು ಖಂಡಿತವಾಗಿಯೂ ಪರಿಗಣಿಸುತ್ತೇವೆ. ಆದರೆ ಯಾರನ್ನು ನೀಡಿ ಸಂಜು ಸ್ಯಾಮ್ಸನ್ ಅವರನ್ನು ಖರೀದಿಸುತ್ತೇವೆ ಎಂಬ ಬಗ್ಗೆ ನಾವು ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಇದಾಗ್ಯೂ ನಾವು ಸ್ಯಾಮ್ಸನ್ ಮೇಲೆ ಕಣ್ಣಿಟ್ಟಿರುವುದು ನಿಜ ಎಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದರು.

3 / 5
ಹೀಗಾಗಿ ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಲಿದ್ದಾರೆ ಎಂಬ ಸುದ್ದಿ ಮಹತ್ವ ಪಡೆದುಕೊಂಡಿತ್ತು. ಆದರೀಗ ಈ ಸುದ್ದಿಗಳಿಗೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಬ್ರೇಕ್ ಹಾಕಿದೆ. ಸ್ಯಾಮ್ಸನ್ ಮುಂದಿನ ಸೀಸನ್​ನಲ್ಲೂ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿಯಲಿದ್ದಾರೆ ಎಂಬುದನ್ನು ಖಚಿತಪಡಿಸಿದ್ದಾರೆ. 

4 / 5
ಇತ್ತ ಆರ್​ಆರ್​ ತಂಡದ ಈ ಖಚಿತಪಡಿಸುವಿಕೆ ಟ್ರೇಡ್ ಡೀಲ್ ವಿಫಲವಾಗಿರುವುದರ ಭಾಗವಾ? ಅಥವಾ ಸ್ಯಾಮ್ಸನ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳುವ ನಿರ್ಧಾರವಾ? ಎಂಬುದು ಬಹಿರಂಗವಾಗಿಲ್ಲ. ಇದಾಗ್ಯೂ ಸಂಜು ಸ್ಯಾಮ್ಸನ್ ಅವರು ರಾಜಸ್ಥಾನ್ ರಾಯಲ್ಸ್ ತಂಡದಲ್ಲೇ ಉಳಿಯಲಿದ್ದಾರೆ ಎಂಬುದನ್ನು ಮಾತ್ರ ಖಚಿತಪಡಿಸಿದ್ದಾರೆ. ಹೀಗಾಗಿ ಐಪಿಎಲ್ 2026 ರಲ್ಲೂ ಆರ್​ಆರ್ ಪಡೆಯನ್ನು ಸಂಜು ಸ್ಯಾಮ್ಸನ್ ಮುನ್ನಡೆಸುವುದನ್ನು ಎದುರು ನೋಡಬಹುದು.

5 / 5
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ

ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ

ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ

ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ