
2026 ರ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಪ್ರತಿ ಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆ ಸೃಷ್ಟಿಸುತ್ತಿರುವ ವೈಭವ್, ಎಲಿಮಿನೇಟರ್ ಪಂದ್ಯದಲ್ಲಿ ಕೇವಲ 29 ಎಸೆತಗಳಲ್ಲಿ 97 ರನ್ ಬಾರಿಸುವ ಮೂಲಕ ಹಲವು ದಾಖಲೆಗಳನ್ನು ಸೃಷ್ಟಿಸಿದರು (PC- PTI).

ಈ ಪಂದ್ಯದಲ್ಲಿ ಐತಿಹಾಸಿಕ ಇನ್ನಿಂಗ್ಸ್ ಆಡಿದ ವೈಭವ್ ರಾಜಸ್ಥಾನವನ್ನು ಗೆಲುವಿನತ್ತ ಕೊಂಡೊಯ್ದರು. 29 ಎಸೆತಗಳಲ್ಲಿ 97 ರನ್ ಬಾರಿಸಿದ ವೈಭವ್, 12 ಸಿಕ್ಸರ್‌ಗಳು ಮತ್ತು 5 ಬೌಂಡರಿಗಳನ್ನು ಬಾರಿಸಿದರು. ಆದಾಗ್ಯೂ, ಕ್ರಿಸ್ ಗೇಲ್ ಅವರ ವೇಗದ ಐಪಿಎಲ್ ಶತಕದ ದಾಖಲೆಯನ್ನು ಮುರಿಯುವಲ್ಲಿ ವೈಭವ್ ವಿಫಲರಾದರು (PC- PTI).

ಇದೀಗ ವೈಭವ್ ಅವರ ಬ್ಯಾಟಿಂಗ್ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಹರಾಜಿಗೆ ಬಂದರೆ ಯುವ ಆಟಗಾರನಿಗೆ ಎಷ್ಟು ಹಣ ನೀಡುತ್ತೀರಿ ಎಂದು ವೀರೇಂದ್ರ ಸೆಹ್ವಾಗ್ ಅವರನ್ನು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸೆಹ್ವಾಗ್ ಯಾವುದೇ ಹಿಂಜರಿಕೆಯಿಲ್ಲದೆ 30 ಕೋಟಿ ರೂ. ನೀಡುವುದಾಗಿ ಹೇಳಿದರು. ಭಾರತದ ಮಾಜಿ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ ಕೂಡ ಈ ಮೊತ್ತಕ್ಕೆ ಒಪ್ಪಿಗೆ ಸೂಚಿಸಿದರು (PC- PTI).

ಐಪಿಎಲ್ 2025 ಕ್ಕಿಂತ ಮೊದಲು ನಡೆದ ಹರಾಜಿನಲ್ಲಿ, ರಾಜಸ್ಥಾನ್ ರಾಯಲ್ಸ್ ತಂಡ ವೈಭವ್ ಅವರನ್ನು 1 ಕೋಟಿ 10 ಲಕ್ಷ ರೂ.ಗಳಿಗೆ ಖರೀದಿಸಿತು.2026 ರ ಸೀಸನ್ಗೂ ಮುನ್ನ ರಾಜಸ್ಥಾನ್ ಫ್ರಾಂಚೈಸಿ ವೈಭವ್ ಅವರನ್ನು ತಂಡದಲ್ಲೇ ಉಳಿಸಿಕೊಂಡಿತು (PC- PTI).

ಪ್ರಸ್ತುತ ಆವೃತ್ತಿಯಲ್ಲಿ ವೈಭವ್ ಇಲ್ಲಿಯವರೆಗೆ ಆಡಿರುವ 15 ಪಂದ್ಯಗಳ 15 ಇನ್ನಿಂಗ್ಸ್‌ಗಳಲ್ಲಿ 680 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ, ಅವರ ಸರಾಸರಿ 45.33 ಮತ್ತು ಸ್ಟ್ರೈಕ್ ರೇಟ್ 242.86 ಆಗಿದೆ. ಇಲ್ಲಿಯವರೆಗೆ 55 ಬೌಂಡರಿಗಳು ಮತ್ತು 65 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ವೈಭವ್ ಕೇವಲ ಬೌಂಡರಿಗಳಿಂದಲೇ 610 ರನ್ ಗಳಿಸಿದ್ದಾರೆ (PC- PTI).