- Kannada News Photo gallery Cricket photos Ishan Kishan was spotted practicing in Baroda With Hardik and Krunal Pandya
ಟೀಮ್ ಇಂಡಿಯಾದಿಂದ ನಾಪತ್ತೆಯಾದ್ದ ಇಶಾನ್ ಕಿಶನ್ ಬರೋಡಾದಲ್ಲಿ ಪತ್ತೆ: ಏನು ಮಾಡುತ್ತಿದ್ದಾರೆ ನೋಡಿ
Ishan Kishan Latest News: ಕಳೆದ ಕೆಲವು ದಿನಗಳಿಂದ ಇಶಾನ್ ಕಿಶನ್ ಎಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಭಾರತ ತಂಡಕ್ಕೂ ಆಯ್ಕೆ ಆಗದ ಇವರು, ಕೋಚ್ ರಾಹುಲ್ ದ್ರಾವಿಡ್ ರಣಜಿ ಆಡಿ ಎಂದು ಹೇಳಿದರು ಅಲ್ಲೂ ಕಾಣಿಸಿಕೊಂಡಿಲ್ಲ. ಹೀಗಿರುವಾಗ ಇದೀಗ ಕಿಶನ್ ಬರೋಡದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಏನು ಮಾಡುತ್ತಿದ್ದಾರೆ ನೋಡಿ.
Updated on: Feb 08, 2024 | 8:27 AM

ಕಳೆದ ಕೆಲವು ಸಮಯದಿಂದ ಯಾರ ಕಣ್ಣಿಗೂ ಕಾಣಿಸದೆ, ಭಾರತ ತಂಡದಕ್ಕೂ ಆಯ್ಕೆಯಾಗದೆ, ರಣಿಜಿಯಲ್ಲೂ ಕಾಣಿಸದ ಇಶಾನ್ ಕಿಶನ್ ಇದೀಗ ಬರೋಡಾದಲ್ಲಿ ಇದ್ದಾರೆ ಎಂದು ವರದಿ ಆಗಿದೆ. ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಇಶಾನ್ ಕಿಶನ್ ಮತ್ತು ಟೀಮ್ ಇಂಡಿಯಾ ನಡುವೆ ವಿವಾದ ಉಂಟಾಗಿತ್ತು. ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಆ ಪ್ರವಾಸದಿಂದ ಹಠಾತ್ತನೆ ತವರಿಗೆ ಹಿಂತಿರುಗಿದರು. ಅಂದಿನಿಂದ ಕಿಶನ್ ಭಾರತ ತಂಡದಿಂದ ಹೊರಗುಳಿದಿದ್ದಾರೆ.

ಟೀಮ್ ಇಂಡಿಯಾದ ಮ್ಯಾನೇಜ್‌ಮೆಂಟ್ ಮತ್ತು ಇಶಾನ್ ಕಿಶನ್ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಎದ್ದು ಕಾಣುತ್ತಿದೆ. ಈ ನಡುವೆ ಕೋಚ್ ರಾಹುಲ್ ದ್ರಾವಿಡ್ ಕೂಡ ಇಶಾನ್ ಕಿಶನ್ ಬಗ್ಗೆ ಹಲವು ಮಾತುಗಳನ್ನು ಹೇಳಿದ್ದರು, ಈ ಎಲ್ಲಾ ಊಹಾಪೋಹಗಳ ಹೊರತಾಗಿ ಇಶಾನ್ ಕಿಶನ್ ಬಗ್ಗೆ ಇದೀಗ ಹಲವು ವಿಷಯಗಳು ಬೆಳಕಿಗೆ ಬಂದಿವೆ.

ಕ್ರಿಕ್‌ಬಜ್ ವರದಿಯ ಪ್ರಕಾರ, ಇಶಾನ್ ಕಿಶನ್ ಪ್ರಸ್ತುತ ಬರೋಡಾದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಅವರೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ. ಇಶಾನ್ ಕಿಶನ್ ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನ ಇಲ್ಲಿ ಬೆವರು ಹರಿಸುತ್ತಿದ್ದಾರೆ. ಅಚ್ಚರಿ ವಿಷಯ ಎಂದರೆ ಅವರು ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಟೀಮ್ ಇಂಡಿಯಾಗೆ ಮರಳಲು ಇಶಾನ್ ಕಿಶನ್ ದೇಶೀಯ ಕ್ರಿಕೆಟ್‌ನಲ್ಲಿ ಆಡಬೇಕಾಗುತ್ತದೆ ಎಂದು ರಾಹುಲ್ ದ್ರಾವಿಡ್ ಹೇಳಿದಾಗ, ಕಿಶನ್ ರಣಜಿ ಟ್ರೋಫಿ ಪಂದ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ತಂಡದ ಒತ್ತಾಯದ ಹೊರತಾಗಿಯೂ ಕಿಶನ್ ಆಟದಿಂದ ದೂರ ಉಳಿದಿದ್ದಾರೆ. ಇದೇ ವೇಳೆ ದ್ರಾವಿಡ್ ಅವರು ಇಶಾನ್ ಪುನರಾಗಮನವು ಅವರಿಗೆ ಮಾತ್ರ ಬಿಟ್ಟದ್ದು ಎಂದು ಸ್ಪಷ್ಟಪಡಿಸಿದ್ದಾರೆ.

ಏತನ್ಮಧ್ಯೆ, ಇಶಾನ್ ಕಿಶನ್ ಬರೋಡಾದ ಕಿರಣ್ ಮೋರ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಿರುವುದು ಕಂಡುಬಂದಿದೆ. ಪಾಂಡ್ಯ ಸಹೋದರರೊಂದಿಗೆ ಐಪಿಎಲ್‌ಗೆ ತಯಾರಿ ನಡೆಸುತ್ತಿದ್ದಾರೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ. ಕಳೆದ ವರ್ಷ ನವೆಂಬರ್‌ನಿಂದ ಇಶಾನ್ ಕಿಶನ್ ಯಾವುದೇ ಪಂದ್ಯವನ್ನು ಆಡಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.

ಇಶಾನ್ ಕಿಶನ್ ಪದೇ ಪದೇ ರಣಜಿ ಪಂದ್ಯವನ್ನು ಆಡಲು ನಿರಾಕರಿಸುತ್ತಿದ್ದಾರೆ. ಸದ್ಯ ತಂಡದಿಂದ ದೂರವಿದ್ದು, ದೇಶಿ ಕ್ರಿಕೆಟ್ ಕಡೆ ಗಮನ ಹರಿಸುತ್ತಿಲ್ಲ. ಹೀಗಾಗಿ ಬಿಸಿಸಿಐ ಅವರನ್ನು ತಮ್ಮ ಒಪ್ಪಂದದ ಭಾಗವಾಗಿ ಮಾಡುತ್ತದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಕೂಡ ಎದ್ದಿದೆ. ಪ್ರಸ್ತುತ, ಇಶಾನ್ ಕಿಶನ್ ಟೀಮ್ ಇಂಡಿಯಾದ ಕೇಂದ್ರ ಒಪ್ಪಂದದ ಸಿ-ಕೆಟಗರಿಯಲ್ಲಿದ್ದಾರೆ.
