ಬ್ಯಾಕ್ ಟು ಬ್ಯಾಕ್ 4 ಶತಕ: ಹೊಸ ವಿಶ್ವ ದಾಖಲೆ ಬರೆದ ಜೇಕ್ ಲಿಬ್ಬಿ

Updated on: Aug 11, 2026 | 3:06 PM

Jake Libby World Record: ಇಂಗ್ಲೆಂಡ್‌ನ ಡೊಮೆಸ್ಟಿಕ್ ಕ್ರಿಕೆಟ್ ಅಂಗಳದಲ್ಲಿ ರನ್ ಮಳೆ ಹರಿಸುತ್ತಿರುವ ವೋರ್ಸೆಸ್ಟರ್‌ಶೈರ್ ತಂಡದ ನಾಯಕ ಜೇಕ್ ಲಿಬ್ಬಿ, ಲಿಸ್ಟ್-ಎ (ಏಕದಿನ) ಕ್ರಿಕೆಟ್ ಇತಿಹಾಸದಲ್ಲೇ ಸಾರ್ವಕಾಲಿಕ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಮೆಟ್ರೋ ಬ್ಯಾಂಕ್ ಒನ್-ಡೇ ಕಪ್ ಟೂರ್ನಿಯಲ್ಲಿ ಸತತ 4 ಪಂದ್ಯಗಳಲ್ಲಿ ಬ್ಯಾಕ್-ಟು-ಬ್ಯಾಕ್ ಶತಕ ಸಿಡಿಸುವ ಮೂಲಕ ಲಿಬ್ಬಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.

1 / 5
ಲಿಸ್ಟ್-ಎ (ಏಕದಿನ) ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ವರ್ಲ್ಡ್​ ರೆಕಾರ್ಡ್ ಬರೆದಿರುವುದು ಮತ್ಯಾರೂ ಅಲ್ಲ, ಇಂಗ್ಲೆಂಡ್​ನ ಅನುಭವಿ ದಾಂಡಿಗ ಜೇಕ್ ಲಿಬ್ಬಿ. ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ 'ಮೆಟ್ರೋ ಬ್ಯಾಂಕ್ ಒನ್-ಡೇ ಕಪ್'ನಲ್ಲಿ ವೋರ್ಸೆಸ್ಟರ್‌ಶೈರ್ ಪರ ಕಣಕ್ಕಿಳಿಯುತ್ತಿರುವ ಜೇಕ್ ಬ್ಯಾಕ್ ಟು ಬ್ಯಾಕ್ ನಾಲ್ಕು ಶತಕ ಸಿಡಿಸಿದ್ದಾರೆ. (PC: wccc)

2 / 5
ಈ ನಾಲ್ಕು ಭರ್ಜರಿ ಶತಕಗಳೊಂದಿಗೆ ಜೇಕ್ ಲಿಬ್ಬಿ  ಲಿಸ್ಟ್-ಎ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಬ್ಯಾಟಿಂಗ್ ಸರಾಸರಿ ಹೊಂದಿದ  ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಂದರೆ 50 ಓವರ್​ಗಳ ಕ್ರಿಕೆಟ್​ನಲ್ಲಿ ಕನಿಷ್ಠ 50 ಇನಿಂಗ್ಸ್ ಆಡಿದ ಆಟಗಾರರಲ್ಲಿ ಅತ್ಯಧಿಕ ಬ್ಯಾಟಿಂಗ್ ಸರಾಸರಿಯ ವಿಶ್ವ ದಾಖಲೆ ಇದೀಗ ಜೇಕ್ ಲಿಬ್ಬಿ ಪಾಲಾಗಿದೆ. PC: wccc)

3 / 5
ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ಭಾರತದ ರುತುರಾಜ್ ಗಾಯಕ್ವಾಡ್ ಅವರ ಹೆಸರಿನಲ್ಲಿತ್ತು. ಲಿಸ್ಟ್-ಎ ಕ್ರಿಕೆಟ್​ನಲ್ಲಿ ಈವರೆಗೆ 100 ಇನಿಂಗ್ಸ್ ಆಡಿರುವ ರುತುರಾಜ್ ಗಾಯಕ್ವಾಡ್  58.61 ಸರಾಸರಿಯಲ್ಲಿ 5,334 ರನ್ ಕಲೆಹಾಕಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಜೇಕ್ ಲಿಬ್ಬಿ ಮುರಿದಿದ್ದಾರೆ. (PC: BCCI)

4 / 5
ಲಿಸ್ಟ್​-ಎ ಕ್ರಿಕೆಟ್​ನಲ್ಲಿ ಈವರೆಗೆ 54 ಇನಿಂಗ್ಸ್ ಆಡಿರುವ ಜೇಕ್ ಲಿಬ್ಬಿ 62.46ರ ಸರಾಸರಿಯಲ್ಲಿ ಒಟ್ಟು 2,561 ರನ್ ಕಲೆಹಾಕಿದ್ದಾರೆ. ಈ ಮೂಲಕ ಲಿಸ್ಟ್-ಎ ಕ್ರಿಕೆಟ್​ನಲ್ಲಿ ಕನಿಷ್ಠ 50 ಇನಿಂಗ್ಸ್ ಆಡಿ ಅತ್ಯಧಿಕ ಸರಾಸರಿ ಹೊಂದಿರುವ ಬ್ಯಾಟರ್​ಗಳ ಪಟ್ಟಿಯಲ್ಲಿ ಲಿಬ್ಬಿ ಅಗ್ರಸ್ಥಾನಕ್ಕೇರಿದ್ದಾರೆ. (PC: wccc)

5 / 5
62.46 ರ ಸರಾಸರಿಯೊಂದಿಗೆ ಜೇಕ್ ಲಿಬ್ಬಿ ಹಿಂದಿಕ್ಕಿರುವುದು ವಿಶ್ವ ಕ್ರಿಕೆಟ್‌ನ ದಿಗ್ಗಜರಾದ ಮೈಕಲ್ ಬೆವನ್ (57.86 ಸರಾಸರಿ) ಮತ್ತು ವಿರಾಟ್ ಕೊಹ್ಲಿ ( 57.80 ಸರಾಸರಿ) ಅವರನ್ನೂ ಎಂಬುದು ವಿಶೇಷ. ಇದಾಗ್ಯೂ ಜೇಕ್ ಲಿಬ್ಬಿ ಇನ್ನೂ ಕೂಡ ಇಂಗ್ಲೆಂಡ್ ಏಕದಿನ ತಂಡದಲ್ಲಿ ಸ್ಥಾನ ಪಡೆದಿಲ್ಲ ಎಂಬುದೇ ಅಚ್ಚರಿ! (PC: wccc)

Loading...
Unable to load recommendations.
Follow Us