- Kannada News Photo gallery Cricket photos Jasprit Bumrah Likely To Make Team India Comeback in Ireland series
Jasprit Bumrah: ಟೀಂ ಇಂಡಿಯಾಕ್ಕೆ ಬುಮ್ರಾ ಕಂಬ್ಯಾಕ್ ಯಾವಾಗ? ಇಲ್ಲಿದೆ ಬಿಗ್ ಅಪ್ಡೇಟ್
Jasprit Bumrah: ಟೀಂ ಇಂಡಿಯಾದ ಪ್ರಮುಖ ಬೌಲಿಂಗ್ ಅಸ್ತ್ರ, ಯಾರ್ಕರ್ ಕಿಂಗ್ ಜಸ್ಪ್ರಿತ್ ಬುಮ್ರಾ, ಏಷ್ಯಾಕಪ್ಗೂ ಮುನ್ನ ನಡೆಯುವ ಐರ್ಲೆಂಡ್ ವಿರುದ್ಧದ ಸರಣಿ ಮೂಲಕ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
Updated on: Jun 18, 2023 | 1:47 PM

ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸೋತು ಭಾರಿ ಟೀಕೆಗೆ ಗುರಿಯಾಗಿದ್ದ ಟೀಂ ಇಂಡಿಯಾ ಒಂದು ತಿಂಗಳ ಬಳಿಕ ವಿಂಡೀಸ್ ಪ್ರವಾಸ ಮಾಡಲಿದೆ. ಈ ಪ್ರವಾಸದೊಂದಿಗೆ ಈ ಹಿಂದೆ ಇಂಜುರಿಯಿಂದಾಗಿ ತಂಡದಿಂದ ಹೊರಗುಳಿದಿದ್ದ ಹಲವು ಸ್ಟಾರ್ ಕ್ರಿಕೆಟಿಗರು ಟೀಂ ಇಂಡಿಯಾಕ್ಕೆ ಮರಳಲು ಸಿದ್ಧರಾಗಿದ್ದಾರೆ.

ಅವರುಗಳಲ್ಲಿ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ರಂತಹ ಕ್ರಿಕೆಟಿಗರು ಸೇರಿದ್ದಾರೆ. ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ ಟೀಂ ಇಂಡಿಯಾದ ಪ್ರಮುಖ ಬೌಲಿಂಗ್ ಅಸ್ತ್ರ, ಯಾರ್ಕರ್ ಕಿಂಗ್ ಜಸ್ಪ್ರಿತ್ ಬುಮ್ರಾ, ಏಷ್ಯಾಕಪ್ಗೂ ಮುನ್ನ ನಡೆಯುವ ಐರ್ಲೆಂಡ್ ವಿರುದ್ಧದ ಸರಣಿ ಮೂಲಕ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ನ್ಯೂಸ್ 18 ವರದಿ ಮಾಡಿದ್ದು, ಆಗಸ್ಟ್‌ನಲ್ಲಿ ಟೀಂ ಇಂಡಿಯಾ ಐರ್ಲೆಂಡ್ ಪ್ರವಾಸ ಮಾಡಲಿದ್ದು, ಈ ಪ್ರವಾಸದಲ್ಲಿ ಬುಮ್ರಾ ಟೀಂ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸ ಮುಗಿದ ಬಳಿಕ ಮೆನ್ ಇನ್ ಬ್ಲೂ ತಂಡ ಮೂರು ಪಂದ್ಯಗಳ ಟಿ20 ಸರಣಿಗೆ ಐರ್ಲೆಂಡ್ಗೆ ಪ್ರಯಾಣಿಸಲಿದೆ. ಈ ಪ್ರವಾಸವೂ ಆಗಸ್ಟ್ 18 ರಿಂದ ಆರಂಭವಾಗಿ 20, ಮತ್ತು 23 ರಂದು ಅಂತ್ಯಗೊಳ್ಳಲಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.

ಈ ಸರಣಿ ಬಳಿಕ ಟೀಂ ಇಂಡಿಯಾ ಏಷ್ಯಾಕಪ್ಗಾಗಿ ಶ್ರೀಲಂಕಾ ಪ್ರವಾಸ ಮಾಡಬೇಕಾಗಿದೆ. ಹೀಗಾಗಿ ಏಷ್ಯಾಕಪ್ ತಯಾರಿಯ ದೃಷ್ಟಿಯಿಂದ ಬುಮ್ರಾ ಐರ್ಲೆಂಡ್ ವಿರುದ್ಧ ಸರಣಿ ಆಡಲಿದ್ದಾರೆ. ಇಂಜುರಿಯಿಂದಾಗಿ ಬುಮ್ರಾ ಕಳೆದ ವರ್ಷ ಏಷ್ಯಾಕಪ್ ಮತ್ತು ಟಿ 20 ವಿಶ್ವಕಪ್‌ನಿಂದ ಹೊರಗುಳಿದಿದ್ದರು. ಹಾಗೆಯೇ ಐಪಿಎಲ್, ಡಬ್ಲ್ಯುಟಿಸಿಯಲ್ಲೂ ಆಡಲಿಲ್ಲ. ಆದರೆ ಈ ವರ್ಷದ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಭಾಗವಹಿಸಲು ಬುಮ್ರಾ ಸಂಪೂರ್ಣ ಫಿಟ್ ಆಗುವ ನಿರೀಕ್ಷೆಯಿದೆ.

"ಜಸ್ಪ್ರೀತ್ ಬುಮ್ರಾ ಈ ವರ್ಷದ ಆಗಸ್ಟ್‌ನಲ್ಲಿ ನಡೆಯಲ್ಲಿರುವ ಐರ್ಲೆಂಡ್ ವಿರುದ್ಧದ ಸರಣಿಗೆ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಭಾರತೀಯ ಕ್ರಿಕೆಟ್ ತಂಡಕ್ಕೆ ದೊಡ್ಡ ಉತ್ತೇಜನ ನೀಡಲಿದೆ. ಎನ್ಸಿಎಯ ವೈದ್ಯಕೀಯ ವಿಭಾಗ ಮುಖ್ಯಸ್ಥ ನಿತಿನ್ ಪಟೇಲ್ ಮತ್ತು ಫಿಸಿಯೋ ರಜನಿಕಾಂತ್, ಬುಮ್ರಾ ಅವರ ಫಿಟ್ನೆಸ್ಗೆ ಬುಮ್ರಾ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಬುಮ್ರಾ ಪೂರ್ನ ಫಿಟ್‌ನೆಸ್‌ನೊಂದಿಗೆ ಮೈದಾನಕ್ಕೆ ಮರಳುವ ಸಾಧ್ಯತೆಯಿದೆ" ಎಂದು ಮಂಡಳಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ನ್ಯೂಸ್ 18 ವರದಿ ಮಾಡಿದೆ.




