Sign In

By signing in or creating an account, you agree with Associated Broadcasting Company's Terms & Conditions and Privacy Policy.

2083 ದಿನಗಳ ಬಳಿಕ ಶತಕ ಬಾರಿಸಿದ ಜೋ ರೂಟ್, ಅದು ಸಹ ವ್ಯರ್ಥ..!

Afghanistan vs England: ಲಾಹೋರ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡ 325 ರನ್​ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡವು 49.5 ಓವರ್​ಗಳಲ್ಲಿ 317 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಅಫ್ಘಾನ್ ಪಡೆ 8 ರನ್​ಗಳ ಜಯ ಸಾಧಿಸಿದೆ.

ಝಾಹಿರ್ ಯೂಸುಫ್
|

Updated on: Feb 27, 2025 | 9:04 AM

ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್ ಜೋ ರೂಟ್ ಕಡೆಯಿಂದ ಮತ್ತೊಂದು ಶತಕ ಮೂಡಿಬಂದಿದೆ. ಆದರೆ ಈ ಬಾರಿ ಮೂಡಿಬಂದಿರುವ ಶತಕ ಬರೋಬ್ಬರಿ 6 ವರ್ಷಗಳ ಬಳಿಕ ಎಂಬುದು ವಿಶೇಷ. ಅಂದರೆ ಏಕದಿನ ಕ್ರಿಕೆಟ್​ನಲ್ಲಿ ರೂಟ್ ಶತಕ ಬಾರಿಸಿ 2083 ದಿನಗಳು ಕಳೆದಿದ್ದವು.

1 / 6
ಈ 2083 ದಿನಗಳಲ್ಲಿ ಜೋ ರೂಟ್ ಇಂಗ್ಲೆಂಡ್ ಪರ 39 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 8 ಅರ್ಧಶತಕಗಳೊಂದಿಗೆ ಒಟ್ಟು 1123 ರನ್​ಗಳನ್ನು ಸಹ ಕಲೆಹಾಕಿದ್ದಾರೆ. ಇದಾಗ್ಯೂ ಅವರ ಬ್ಯಾಟ್​ನಿಂದ ಮೂರಂಕಿ ಮೊತ್ತ ಮೂಡಿಬಂದಿರಲಿಲ್ಲ.

2 / 6
ಇದೀಗ 6 ವರ್ಷಗಳ ಬಳಿಕ ಜೋ ರೂಟ್ ಸೆಂಚುರಿ ಸಿಡಿಸಿದ್ದಾರೆ. ಲಾಹೋರ್​ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ರೂಟ್ 111 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 12 ಫೋರ್​ಗಳೊಂದಿಗೆ ಆಕರ್ಷಕ ಶತಕ ಬಾರಿಸಿದ್ದಾರೆ. ಈ ಮೂಲಕ ಕಳೆದ ಆರು ವರ್ಷಗಳ ಏಕದಿನ ಶತಕದ ಬರವನ್ನು ನೀಗಿಸಿದ್ದಾರೆ.

3 / 6
ಇದಕ್ಕೂ ಮುನ್ನ ಜೋ ರೂಟ್ ಏಕದಿನ ಕ್ರಿಕೆಟ್​ನಲ್ಲಿ ಶತಕ ಸಿಡಿಸಿದ್ದು 2019 ರಲ್ಲಿ. ಸೌತಾಂಪ್ಟನ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ  ಏಕದಿನ ಪಂದ್ಯದಲ್ಲಿ ರೂಟ್ 94 ಎಸೆತಗಳಲ್ಲಿ ಅಜೇಯ ಶತಕ ಬಾರಿಸಿದ್ದರು. ಆ ಬಳಿಕ ಜೋ ಕಡೆಯಿಂದ ಒನ್​ಡೇ ಕ್ರಿಕೆಟ್​ನಲ್ಲಿ ಮೂರಂಕಿ ಮೊತ್ತ ಬಂದಿರಲಿಲ್ಲ.

4 / 6
ಇದೀಗ ಚಾಂಪಿಯನ್ಸ್ ಟ್ರೋಫಿಯ 8ನೇ ಪಂದ್ಯದಲ್ಲಿ ಜೋ ರೂಟ್ 120 ರನ್ ಬಾರಿಸಿ ಮಿಂಚಿದ್ದಾರೆ. ಈ 120 ರನ್​ಗಳ ಶತಕದ ಹೊರತಾಗಿಯೂ ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಸೋಲನುಭವಿಸಿದೆ. ಅಫ್ಘಾನಿಸ್ತಾನ್ ನೀಡಿದ 325 ರನ್​ಗಳನ್ನು ಬೆನ್ನತ್ತಿದ ಇಂಗ್ಲೆಂಡ್ 317 ರನ್​ಗಳಿಗೆ ಆಲೌಟ್ ಆಗಿ 8 ರನ್​ಗಳಿಂದ ಸೋಲೊಪ್ಪಿಕೊಂಡಿದೆ.

5 / 6
ಇದರೊಂದಿಗೆ 6 ವರ್ಷಗಳ ಬಳಿಕ, ಅಂದರೆ ಬರೋಬ್ಬರಿ 2083 ದಿನಗಳ ನಂತರ ಜೋ ರೂಟ್ ಬ್ಯಾಟ್​ನಿಂದ ಮೂಡಿಬಂದ ಶತಕವು ವ್ಯರ್ಥವಾದಂತಾಗಿದೆ. ಅಷ್ಟೇ ಅಲ್ಲದೆ ಈ ಸೋಲಿನೊಂದಿಗೆ ಇಂಗ್ಲೆಂಡ್ ತಂಡವು ಚಾಂಪಿಯನ್ಸ್ ಟ್ರೋಫಿ 2025 ರಿಂದ ಹೊರಬಿದ್ದಿದೆ.

6 / 6
Follow us
ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ

ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್​ನಲ್ಲಿ 20 ರನ್ ಬಾರಿಸಿದ ವಿಡಿಯೋ

ಮಾರ್ಚ್ 8ರಂದು ನಾನು ಮತ್ತು ಸಿಎಂ ಇಬ್ಬರೂ ಲಭ್ಯರಿರಲಿಲ್ಲ: ಶಿವಕುಮಾರ್

ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್

ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ

‘ಅಪ್ಪು ಹವಾ’: ಸ್ಟಾರ್ ನಟರ ಹೊಸ ಸಿನಿಮಾಕ್ಕೂ ಸಿಗಲ್ಲ ಇಂಥಾ ಸ್ವಾಗತ

ಅಧ್ಯಕ್ಷರು ಊಟಕ್ಕೆ ಕರೆದರೆ ಹೋಗದಿರಲಾಗುತ್ತದೆಯೇ? ಸತೀಶ್ ಜಾರಕಿಹೊಳಿ

ಬೆಂಗಳೂರಿನ ರೈಲಿನೊಳಗೆ ಯುವಕನಿಂದ ಮೂತ್ರ ವಿಸರ್ಜನೆ; ವಿಡಿಯೋ ವೈರಲ್

ಪ್ರತಿದಿನ ಮಾಧ್ಯಮಗಳೊಂದಿಗೆ ಮಾತಾಡುವ ರೇಣುಕಾಚಾರ್ಯಗೆ ವಿಷಯಗಳು ಸಿಗುತ್ತಿಲ್ಲ

ಮಟ ಮಟ ಮಧ್ಯಾಹ್ನ ಫುಲ್ ಟೈಟ್​ ಆಗಿ ಬಂದು ಬಸ್ ಕೆಳಗೆ ಮಲಗಿದ ಕುಡುಕ!