IPL 2025: ಆರ್​ಸಿಬಿ ಮಣಿಸಿದ ಸಂತಸದಲ್ಲಿದ್ದ ಗುಜರಾತ್‌ಗೆ ಬಿಗ್ ಶಾಕ್; ಮನೆಗೆ ತೆರಳಿದ ತಂಡದ ಸ್ಟಾರ್ ವೇಗಿ

|

Updated on: Apr 04, 2025 | 2:47 PM

Gujarat Titans: ಗುಜರಾತ್ ಟೈಟಾನ್ಸ್ ತಂಡದ ಪ್ರಮುಖ ವೇಗದ ಬೌಲರ್ ಕಗಿಸೊ ರಬಾಡ ವೈಯಕ್ತಿಕ ಕಾರಣಗಳಿಂದ ಐಪಿಎಲ್ ತೊರೆದು ದಕ್ಷಿಣ ಆಫ್ರಿಕಾಕ್ಕೆ ಮರಳಿದ್ದಾರೆ. ರಾಯಲ್ ಚಾಲೆಂಜರ್ಸ್ ವಿರುದ್ಧದ ಗೆಲುವಿನ ನಂತರ ಈ ಸುದ್ದಿ ಬಂದಿದ್ದು, ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಈ ಸೀಸನ್ ನಲ್ಲಿ ಅವರು ಕೇವಲ ಎರಡು ಪಂದ್ಯಗಳಲ್ಲಿ ಎರಡು ವಿಕೆಟ್ ಪಡೆದಿದ್ದಾರೆ.

1 / 6
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಅವರ ನೆಲದಲ್ಲೇ ಮಣಿಸಿದ ಸಂತಸದಲ್ಲಿದ್ದ ಗುಜರಾತ್ ಟೈಟಾನ್ಸ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ತಂಡದ ಸ್ಟಾರ್ ವೇಗದ ಬೌಲರ್ ಕಗಿಸೊ ರಬಾಡ ಐಪಿಎಲ್ ತೊರೆದು ಮನೆಗೆ ವಾಪಸ್ಸಾಗಿದ್ದಾರೆ. ಅವರು ಮತ್ತೆ ಐಪಿಎಲ್​ಗೆ ಹಿಂತಿರುಗುತ್ತಾರೋ ಇಲ್ಲವೋ ಎಂಬುದರ ಕುರಿತು ಇನ್ನೂ ಯಾವುದೇ ಮಾಹಿತಿ ಸಿಕ್ಕಿಲ್ಲ.

2 / 6
 ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಕಗಿಸೊ ರಬಾಡ ಆಡಿರಲಿಲ್ಲ. ಈಗ ಅವರು ದಕ್ಷಿಣ ಆಫ್ರಿಕಾಕ್ಕೆ ಹಿಂತಿರುಗಿದ್ದಾರೆ ಎಂಬ ಸುದ್ದಿ ಬಂದಿದೆ. ವರದಿಗಳ ಪ್ರಕಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಟೈಟಾನ್ಸ್ ತಂಡ 8 ವಿಕೆಟ್‌ಗಳ ಅದ್ಭುತ ಜಯ ಸಾಧಿಸಿದ ಒಂದು ದಿನದ ನಂತರ ರಬಾಡ ಮನೆಗೆ ಹೋಗುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

3 / 6
ರಬಾಡ ದಕ್ಷಿಣ ಆಫ್ರಿಕಾಕ್ಕೆ ಮರಳಿದ ಬಗ್ಗೆ ಮಾಹಿತಿ ನೀಡಿರುವ ಗುಜರಾತ್ ಟೈಟಾನ್ಸ್, ‘ಕಾಗಿಸೊ ರಬಾಡ ವೈಯಕ್ತಿಕ ಕಾರಣದಿಂದಾಗಿ ದಕ್ಷಿಣ ಆಫ್ರಿಕಾಕ್ಕೆ ಮರಳಿದ್ದಾರೆ' ಎಂದು ಹೇಳಿದೆ. ಈ ಸೀಸನ್​ನಲ್ಲಿ ರಬಾಡ ಕೇವಲ ಎರಡು ಪಂದ್ಯಗಳನ್ನು ಆಡಿದ್ದು, ಕೇವಲ ಎರಡು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ. ಅಂದರೆ ಈ ಐಪಿಎಲ್‌ನಲ್ಲಿ ರಬಾಡ ಅವರ ಪ್ರದರ್ಶನ ಇಲ್ಲಿಯವರೆಗೆ ಉತ್ತಮವಾಗಿರಲಿಲ್ಲ.

4 / 6
ಪಂಜಾಬ್ ಕಿಂಗ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಅವರು 41 ರನ್‌ಗಳಿಗೆ ಕೇವಲ ಒಂದು ವಿಕೆಟ್ ಪಡೆದಿದ್ದರು. ಆ ಪಂದ್ಯದಲ್ಲಿ ಟೈಟಾನ್ಸ್ ಸೋಲನ್ನು ಎದುರಿಸಬೇಕಾಯಿತು. ಮುಂಬೈ ಇಂಡಿಯನ್ಸ್ ವಿರುದ್ಧದ ಎರಡನೇ ಪಂದ್ಯದಲ್ಲೂ ಅವರು ಹೆಚ್ಚು ಪರಿಣಾಮಕಾರಿಯಾಗಿರಲಿಲ್ಲ, 42 ರನ್‌ಗಳಿಗೆ ಕೇವಲ ಒಂದು ವಿಕೆಟ್ ಪಡೆದಿದ್ದರು. ಆದರೆ ಇತರರ ಉತ್ತಮ ಪ್ರದರ್ಶನದಿಂದ ಗುಜರಾತ್ ಪಂದ್ಯವನ್ನು ಗೆದ್ದುಕೊಂಡಿತು.

5 / 6
ರಬಾಡ ಇಲ್ಲಿಯವರೆಗೆ ಕೇವಲ ಎರಡು ವಿಕೆಟ್‌ಗಳನ್ನು ಮಾತ್ರ ಪಡೆಯಲು ಸಾಧ್ಯವಾದರೂ, ಅವರನ್ನು ಗುಜರಾತ್ ಟೈಟಾನ್ಸ್‌ನ ಬೌಲಿಂಗ್ ದಾಳಿಯ ಬೆನ್ನೆಲುಬು ಎಂದು ಪರಿಗಣಿಸಲಾಗಿದೆ. ತಂಡದಲ್ಲಿ ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಮತ್ತು ಇಶಾಂತ್ ಶರ್ಮಾ ಅವರಂತಹ ಬೌಲರ್‌ಗಳು ಇದ್ದರೂ, ಅವರ ಪಾತ್ರ ಮುಖ್ಯವಾಗಿದೆ. ಹೀಗಾಗಿ ಅವರು ತಂಡಕ್ಕೆ ಯಾವಾಗ ಮರಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

6 / 6
10.75 ಕೋಟಿ ರೂಪಾಯಿಗೆ ಗುಜರಾತ್ ತಂಡವನ್ನು ಸೇರಿಕೊಂಡಿರುವ ರಬಾಡ ಅವರ ಐಪಿಎಲ್ ವೃತ್ತಿಜೀವನದ ಬಗ್ಗೆ ಹೇಳುವುದಾದರೆ... ಅವರು ಇಲ್ಲಿಯವರೆಗೆ ಆಡಿರುವ 82 ಐಪಿಎಲ್ ಪಂದ್ಯಗಳಿಂದ 119 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ಎಕಾನಮಿ ರೇಟ್ ಪ್ರತಿ ಓವರ್‌ಗೆ 8.53 ರನ್‌ ಆಗಿದೆ. ರಬಾಡ ಐಪಿಎಲ್ 2020 ರಲ್ಲಿ 17 ಪಂದ್ಯಗಳಲ್ಲಿ ಒಟ್ಟು 30 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿದ್ದರು.