Virat Kohli: ಕೊಹ್ಲಿ 2 ಶತಕ ಬಾರಿಸುವಷ್ಟರಲ್ಲಿ, 8 ಸೆಂಚುರಿ ಸಿಡಿಸಿದ ಕೇನ್
TV9 Web | Updated By: ಝಾಹಿರ್ ಯೂಸುಫ್
Updated on:
Feb 07, 2024 | 2:31 PM
Kane Williamson: ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಬಾರಿಸುವ ಮೂಲಕ ಕೇನ್ ವಿಲಿಯಮ್ಸನ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದರಲ್ಲೂ ಕ್ರಿಕೆಟ್ ಅಂಗಳದ ಶತಕಗಳ ಸರದಾರ ಎನಿಸಿಕೊಂಡಿರುವ ವಿರಾಟ್ ಕೊಹ್ಲಿಯನ್ನು (Virat Kohli) ಸೆಂಚುರಿಗಳ ವಿಷಯದಲ್ಲಿ ಹಿಂದಿಕ್ಕಿದ್ದಾರೆ.
1 / 5
ಶತಕಗಳ ಸರದಾರ ವಿರಾಟ್ ಕೊಹ್ಲಿ (Virat Kohli) 2 ಶತಕ ಬಾರಿಸುವಷ್ಟರಲ್ಲಿ ನ್ಯೂಝಿಲೆಂಡ್ನ ಕೇನ್ ವಿಲಿಯಮ್ಸನ್ (Kane Williamson) 8 ಸೆಂಚುರಿಗಳನ್ನು ಪೂರೈಸಿದ್ದಾರೆ. ಅಚ್ಚರಿ ಎನಿಸಿದರೂ ಇದು ನಿಜ. ಕಳೆದ ಮೂರು ವರ್ಷಗಳಿಂದ ಟೆಸ್ಟ್ ಕ್ರಿಕೆಟ್ನಲ್ಲಿ ವಿಲಿಯಮ್ಸನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ.
2 / 5
2021 ರಲ್ಲಿ ಟೆಸ್ಟ್ ಶತಕಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಗಿಂತ ಕೇನ್ ವಿಲಿಯಮ್ಸನ್ ಹಿಂದಿದ್ದರು. ಕೊಹ್ಲಿ 27 ಶತಕಗಳೊಂದಿಗೆ ಫ್ಯಾಬ್-4 ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದರೆ, ಕೇನ್ ವಿಲಿಯಮ್ಸನ್ ಕೇವಲ 23 ಶತಕಗಳನ್ನು ಹೊಂದಿದ್ದರು.
3 / 5
ಆದರೆ ಇದೀಗ ಕೇನ್ ವಿಲಿಯಮ್ಸನ್ ಅವರ ಒಟ್ಟು ಟೆಸ್ಟ್ ಶತಕಗಳ ಸಂಖ್ಯೆ 31 ಕ್ಕೇರಿದೆ. ಅತ್ತ ವಿರಾಟ್ ಕೊಹ್ಲಿ 29 ಶತಕಗಳಲ್ಲೇ ಉಳಿದಿದ್ದಾರೆ. ಅಂದರೆ ಕಳೆದ ಮೂರು ವರ್ಷಗಳಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ನಲ್ಲಿ 2 ಸೆಂಚುರಿಗಳನ್ನು ಮಾತ್ರ ಬಾರಿಸಿದ್ದಾರೆ. ಇತ್ತ ಇದೇ ಅವಧಿಯಲ್ಲಿ ಕೇನ್ ವಿಲಿಯಮ್ಸನ್ ಬರೋಬ್ಬರಿ 8 ಶತಕ ಸಿಡಿಸಿ ಮುನ್ನುಗ್ಗಿದ್ದಾರೆ.
4 / 5
ಇನ್ನು ಫ್ಯಾಬ್-4 ಪಟ್ಟಿಯಲ್ಲಿ 32 ಶತಕಗಳನ್ನು ಬಾರಿಸಿರುವ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ದ್ವಿತೀಯ ಸ್ಥಾನದಲ್ಲಿ ಕೇನ್ ವಿಲಿಯಮ್ಸನ್ (31) ಇದ್ದು, ತೃತೀಯ ಸ್ಥಾನದಲ್ಲಿ ಇಂಗ್ಲೆಂಡ್ ಜೋ ರೂಟ್ (30) ಇದ್ದಾರೆ. ಹಾಗೆಯೇ 29 ಶತಕಗಳೊಂದಿಗೆ ವಿರಾಟ್ ಕೊಹ್ಲಿ ಫ್ಯಾಬ್-4 ನಲ್ಲಿ ನಾಲ್ಕನೇ ಸ್ಥಾನದಲ್ಲೇ ಉಳಿದಿದ್ದಾರೆ.
5 / 5
ಸದ್ಯ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂಲಕ ಕಂಬ್ಯಾಕ್ ಮಾಡುವ ಸಾಧ್ಯತೆಯಿದೆ. ಈ ರಿಎಂಟ್ರಿಯೊಂದಿಗೆ ಭರ್ಜರಿ ಸೆಂಚುರಿ ಸಿಡಿಸಿದರೆ ಟೆಸ್ಟ್ ಕ್ರಿಕೆಟ್ನಲ್ಲಿ 30 ಶತಕಗಳನ್ನು ಬಾರಿಸಿದ ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ.