
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದಿನಿಂದ ಪಿಂಕ್ ಬಾಲ್ ಟೆಸ್ಟ್ ಪ್ರಾರಂಭವಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಸನ ಸಾಮರ್ಥ್ಯವನ್ನು ಶೇ. 50 ರಿಂದ 100ರಷ್ಟು ವೀಕ್ಷಕರಿಗೆ ಅನುಮತಿ ನೀಡಿದೆ. ಹೀಗಾಗಿ ಹೌಸ್ಫುಲ್ ಕ್ರೀಡಾಂಗಣದಲ್ಲಿ ಹಗಲು- ರಾತ್ರಿ ಕದನ ನಡೆಯುತ್ತಿದೆ. ಈಗಾಗಲೇ ಮೊದಲ ಇನ್ನಿಂಗ್ಸ್ ಮುಗಿಸಿರುವ ಭಾರತ 252 ರನ್ಗಳಿಗೆ ಆಲ್ಔಟ್ ಆಯಿತು. ಈ ಹೈವೋಲ್ಟೆಜ್ ಮ್ಯಾಚ್ ನೋಡಲು ಕನಾರ್ಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಜರಿದ್ದರು. ಅವರೊಂದಿಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಕೂಡ ಕಂಡುಬಂದರು.

ಮೊಹಾಲಿ ಟೆಸ್ಟ್ನಲ್ಲಿ ಅಶ್ವಿನ್ ಕಪಿಲ್ ದೇವ್ ದಾಖಲೆ ಮುರಿದಿದ್ದರು. ಕಪಿಲ್ ದೇವ್ ಟೆಸ್ಟ್ ಕ್ರಿಕೆಟ್ನಲ್ಲಿ 434 ವಿಕೆಟ್ ತೆಗೆದ ಸಾಧನೆ ಮಾಡಿದ್ದರು. ಅಶ್ವಿನ್ ಯಶಸ್ಸಿನಿಂದ ತುಂಬಾ ಸಂತೋಷಗೊಂಡಿದ್ದ ಕಪಿಲ್, ಅಶ್ವಿನ್ 500 ವಿಕೆಟ್ ಪಡೆಯುವ ಗುರಿಯನ್ನು ಹೊಂದಬೇಕೆಂದು ಹಾರೈಸಿದ್ದರು.

