- Kannada News Photo gallery Cricket photos Kartik Meiyappan becomes the first player to take a hat trick in 2022 T20 World Cup
T20 World Cup 2022: ಮೂರು ಎಸೆತದ ಮೂಲಕ ವಿಶ್ವ ದಾಖಲೆ ಬರೆದ ಕಾರ್ತಿಕ್..!
Kartik Meiyappan: ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಬ್ರೇಟ್ ಲೀ (2007), ಐರ್ಲೆಂಡ್ನ ಕರ್ಟಿಸ್ ಕ್ಯಾಂಪರ್ (2021) ಸೇರಿದಂತೆ ನಾಲ್ವರು ಬೌಲರ್ಗಳು ಈ ಸಾಧನೆ ಮಾಡಿದ್ದರು.
Updated on: Oct 18, 2022 | 3:54 PM

ಆಸ್ಟ್ರೇಲಿಯಾದ ಸೈಮಂಡ್ಸ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ನ ಅರ್ಹತಾ ಪಂದ್ಯದಲ್ಲಿ ಯುಎಇ ಸ್ಪಿನ್ನರ್ ಕಾರ್ತಿಕ್ ಮೇಯಪ್ಪನ್ ಹ್ಯಾಟ್ರಿಕ್ ವಿಕೆಟ್ ಉರುಳಿಸಿ ಹೊಸ ಸಾಧನೆ ಮಾಡಿದ್ದಾರೆ.

ಶ್ರೀಲಂಕಾ ವಿರುದ್ಧ ನಡೆದ ಈ ಪಂದ್ಯದಲ್ಲಿ ಸ್ಪಿನ್ ಮೋಡಿ ಮಾಡಿದ ಕಾರ್ತಿಕ್ ಮೇಯಪ್ಪನ್ 15ನೇ ಓವರ್ನಲ್ಲಿ ಈ ಸಾಧನೆ ಮಾಡಿದರು. 15ನೇ ಓವರ್ನ ಮೊದಲ ಎಸೆತದಲ್ಲಿ 2 ರನ್ ನೀಡಿದ್ದ ಮೇಯಪ್ಪನ್, 2ನೇ ಎಸೆತದಲ್ಲಿ 1 ರನ್ ನೀಡಿದರು. ಇನ್ನು ಮೂರನೇ ಎಸೆತದಲ್ಲಿ ಯಾವುದೇ ರನ್ ನೀಡಿರಲಿಲ್ಲ.

ಇದಾದ ಬಳಿಕ ನಾಲ್ಕನೇ ಎಸೆತದಲ್ಲಿ ಭಾನುಕಾ ರಾಜಪಕ್ಸೆ ಕ್ಯಾಚ್ ನೀಡಿ ಹೊರನಡೆದರು. ಇನ್ನು 5ನೇ ಎಸೆತದಲ್ಲಿ ಅಸಲಂಕಾ ವಿಕೆಟ್ ಪಡೆದರು. ಹಾಗೆಯೇ ಕೊನೆಯ ಎಸೆತದಲ್ಲಿ ದಸುನ್ ಶನಕ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು.

ಈ ಮೂಲಕ ಟಿ20 ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಯುಎಇ ಆಟಗಾರ ಎನಿಸಿಕೊಂಡರು. ಅಷ್ಟೇ ಅಲ್ಲದೆ ಈ ಸಾಧನೆ ಮಾಡಿದ 5ನೇ ಆಟಗಾರ ಎಂಬ ವಿಶ್ವ ದಾಖಲೆ ನಿರ್ಮಿಸಿದರು.

ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಬ್ರೇಟ್ ಲೀ (2007), ಐರ್ಲೆಂಡ್ನ ಕರ್ಟಿಸ್ ಕ್ಯಾಂಪರ್ (2021), ಶ್ರೀಲಂಕಾದ ವನಿಂದು ಹಸರಂಗ (2021) ಹಾಗೂ ಸೌತ್ ಆಫ್ರಿಕಾದ ಕಗಿಸೊ ರಬಾಡ (2021) ಈ ಸಾಧನೆ ಮಾಡಿದ್ದರು. ಇದೀಗ 2022ರ ಟಿ20 ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಕಾರ್ತಿಕ್ ಮೇಯಪ್ಪನ್ ಹೊಸ ದಾಖಲೆ ಬರೆದಿದ್ದಾರೆ.

ವಿಶೇಷ ಎಂದರೆ ಕಾರ್ತಿಕ್ ಮೇಯಪ್ಪನ್ ಭಾರತೀಯ ಮೂಲದ ಕ್ರಿಕೆಟಿಗ. ಚೆನ್ನೈ ಮೂಲದವರಾಗಿರುವ ಮೇಯಪ್ಪನ್ ತಮ್ಮ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದು ಯುಎಇ ಪರ. ಹಾಗೆಯೇ ಯುಎಇ ನಲ್ಲಿ ನಡೆದ ಐಪಿಎಲ್ನಲ್ಲಿ ಆರ್ಸಿಬಿ ತಂಡದ ನೆಟ್ ಬೌಲರ್ ಆಗಿಯೂ ಕಾರ್ತಿಕ್ ಕಾಣಿಸಿಕೊಂಡಿದ್ದರು. ಇದೀಗ ಟಿ20 ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿ ಇಡೀ ವಿಶ್ವದ ಗಮನ ಸೆಳೆದಿದ್ದಾರೆ.




