ಪದೇ ಪದೇ ಗಾಯಗೊಳ್ಳುತ್ತಿರುವ ಮ್ಯಾಕ್ಸ್‌ವೆಲ್; ಮತ್ತೆ ಆರ್​ಸಿಬಿ ಸೇರಿದರೆ ಕಥೆ ಏನು?

Updated on: Nov 21, 2024 | 4:26 PM

Glenn Maxwell injury: ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತೊಮ್ಮೆ ಗಾಯಗೊಂಡಿದ್ದಾರೆ. ಐಪಿಎಲ್ ಮೆಗಾ ಹರಾಜಿಗೆ ಮುನ್ನ ಇದು ಆರ್‌ಸಿಬಿಗೆ ದೊಡ್ಡ ಹೊಡೆತ. ಮ್ಯಾಕ್ಸ್‌ವೆಲ್ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲು ಆರ್‌ಸಿಬಿ ಯೋಚಿಸುತ್ತಿದೆ. ಆದರೆ ಈ ಗಾಯದಿಂದ ಅವರು ಒಂದು ತಿಂಗಳು ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗಬಹುದು.

1 / 6
ಐಪಿಎಲ್ ಮೆಗಾ ಹರಾಜಿಗೂ ಮುನ್ನ ಆರ್​ಸಿಬಿಗೆ ಆಘಾತ ಎದುರಾಗಿದೆ. ಧಾರಣ ಪಟ್ಟಿಯನ್ನು ಬಿಡುಗಡೆ ಮಾಡುವ ವೇಳೆ ತಂಡದಲ್ಲಿ ಉಳಿಸಿಕೊಳ್ಳದಿದ್ದರೂ, ಮೆಗಾ ಹರಾಜಿನಲ್ಲಿ ಆರ್​ಟಿಎಮ್ ಕಾರ್ಡ್​ ಬಳಸಿ ಮತ್ತೆ ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದುಕೊಂಡಿದ್ದ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತೊಮ್ಮೆ ಇಂಜುರಿಗೆ ತುತ್ತಾಗಿದ್ದಾರೆ. ಇದರಿಂದ ಮ್ಯಾಕ್ಸ್‌ವೆಲ್ ಕೆಲವು ದಿನ ಕ್ರಿಕೆಟ್​ನಿಂದ ದೂರ ಉಳಿಯಲ್ಲಿದ್ದಾರೆ ಎಂದು ವರದಿಯಾಗಿದೆ.

ಐಪಿಎಲ್ ಮೆಗಾ ಹರಾಜಿಗೂ ಮುನ್ನ ಆರ್​ಸಿಬಿಗೆ ಆಘಾತ ಎದುರಾಗಿದೆ. ಧಾರಣ ಪಟ್ಟಿಯನ್ನು ಬಿಡುಗಡೆ ಮಾಡುವ ವೇಳೆ ತಂಡದಲ್ಲಿ ಉಳಿಸಿಕೊಳ್ಳದಿದ್ದರೂ, ಮೆಗಾ ಹರಾಜಿನಲ್ಲಿ ಆರ್​ಟಿಎಮ್ ಕಾರ್ಡ್​ ಬಳಸಿ ಮತ್ತೆ ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದುಕೊಂಡಿದ್ದ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತೊಮ್ಮೆ ಇಂಜುರಿಗೆ ತುತ್ತಾಗಿದ್ದಾರೆ. ಇದರಿಂದ ಮ್ಯಾಕ್ಸ್‌ವೆಲ್ ಕೆಲವು ದಿನ ಕ್ರಿಕೆಟ್​ನಿಂದ ದೂರ ಉಳಿಯಲ್ಲಿದ್ದಾರೆ ಎಂದು ವರದಿಯಾಗಿದೆ.

2 / 6

ವಾಸ್ತವವಾಗಿ ಕಳೆದ ಕೆಲವು ವರ್ಷಗಳಿಂದ ಮ್ಯಾಕ್ಸ್‌ವೆಲ್ ಅವರು ಪದೇ ಪದೇ ಇಂಜುರಿಗೆ ಒಳಗಾಗುತ್ತಿದ್ದಾರೆ. ಇದರಿಂದ ಅವರು ಹಲವು ಪ್ರಮುಖ ಸರಣಿಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಅವರ ಫಾರ್ಮ್​ ಕೂಡ ಕಳವಳಕಾರಿಯಾಗಿದೆ. ಇದೆಲ್ಲದರ ನಡುವೆಯೂ ಮ್ಯಾಕ್ಸ್‌ವೆಲ್ ಅವರನ್ನು ಆರ್​ಸಿಬಿ, ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.

3 / 6

ಆದರೆ ಸದಾ ಇಂಜುರಿಯಿಂದಲೇ ಕ್ರಿಕೆಟ್​ನಿಂದ ದೂರ ಉಳಿಯುತ್ತಿರುವ ಮ್ಯಾಕ್ಸ್‌ವೆಲ್ ಅವರನ್ನು ಆರ್​ಸಿಬಿ ನಂಬುವುದಾದರು ಹೇಗೆ ಎಂಬ ಪ್ರಶ್ನೆ ಎದ್ದಿದೆ. ಪಾಕಿಸ್ತಾನ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿರುವ ಮ್ಯಾಕ್ಸ್‌ವೆಲ್, ಒಂದು ತಿಂಗಳ ಕಾಲ ಕ್ರಿಕೆಟ್​ನಿಂದ ದೂರ ಉಳಿಯಬಹುದು ಎಂದು ವರದಿಯಾಗಿದೆ.

4 / 6

ಸದ್ಯ ಭಾರತ ತಂಡದ ವಿರುದ್ಧ ಆಸ್ಟ್ರೇಲಿಯಾ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಿದೆ. ಈ ಸರಣಿಯ ನಂತರ ಆಸ್ಟ್ರೇಲಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ 2 ಟೆಸ್ಟ್‌ಗಳ ಸರಣಿ ನಡೆಯಲಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ಈ ಸರಣಿಯ ಮೂಲಕ ಪುನರಾಗಮನ ಮಾಡಲು ಬಯಸಿದ್ದಾರೆ. ಈ ಸರಣಿಗೂ ಮುನ್ನ ಪ್ರಥಮ ದರ್ಜೆ ಪಂದ್ಯಗಳನ್ನು ಆಡಲು ಬಯಸಿದ್ದರು. ಆದರೆ ಈಗ ಒಂದು ತಿಂಗಳ ಕಾಲ ಎಲ್ಲದರಿಂದ ದೂರ ಉಳಿಯಬೇಕಾಗಬಹುದು.

5 / 6

ಮ್ಯಾಕ್ಸ್‌ವೆಲ್ ಕಳೆದ ತಿಂಗಳು ಇಎಸ್‌ಪಿಎನ್‌ಕ್ರಿಕ್‌ಇನ್‌ಫೋ ಜೊತೆ ಮಾತನಾಡುತ್ತಾ ಟೆಸ್ಟ್ ಕ್ರಿಕೆಟ್ ಆಡುವ ಆಸೆಯನ್ನು ವ್ಯಕ್ತಪಡಿಸಿದ್ದರು. ಆದರೀಗ ಮಂಡಿರಜ್ಜು ಸಮಸ್ಯೆಯಿಂದ ಬಳಲುತ್ತಿರುವ ಮ್ಯಾಕ್ಸ್‌ವೆಲ್ ಅವರಿಗೆ ಮತ್ತೊಮ್ಮೆ ಟೆಸ್ಟ್ ಮಾದರಿಯಲ್ಲಿ ಆಡುವುದು ಕಷ್ಟಕರವಾಗಿದೆ.

6 / 6

ಆದಾಗ್ಯೂ ಆರ್​ಸಿಬಿಗೆ ಸಮಾಧಾನಕರ ಸಂಗತಿಯೆಂದರೆ ಐಪಿಎಲ್ ಆರಂಭಕ್ಕೆ ಇನ್ನು ಸಾಕಷ್ಟು ಸಮಯವಿದೆ. ಅಷ್ಟರಲ್ಲಿ ಮ್ಯಾಕ್ಸ್‌ವೆಲ್ ಚೇತರಿಸಿಕೊಳ್ಳಲಿದ್ದು, ಕ್ರಿಕೆಟ್​ಗೆ ಮರಳುವುದು ಖಚಿತ. ಆದರೆ ಐಪಿಎಲ್ ಆರಂಭಕ್ಕೂ ಮುನ್ನ ಮ್ಯಾಕ್ಸ್‌ವೆಲ್ ತಮ್ಮ ಫಾರ್ಮ್​ ಕಂಡುಕೊಂಡರೆ, ಆರ್​ಸಿಬಿಗೆ ಆನೆಬಲ ಬರಲಿದೆ. ಒಂದು ವೇಳೆ ಮತ್ತೊಮ್ಮೆ ಅವರು ತಮ್ಮ ಕಳಪೆ ಫಾರ್ಮ್​ ಅನ್ನು ಮುಂದುವರೆಸಿದರೆ, ಆರ್​ಸಿಬಿಗೆ ಕಳೆದ ಬಾರಿಯಂತೆ ಹಿನ್ನಡೆಯುಂಟಾಗಲಿದೆ.

Published On - 4:10 pm, Thu, 21 November 24

Loading...
Unable to load recommendations.
Follow Us