ಈ ಸಾಧನೆ ಮಾಡಿದ ಮೊದಲ ಆಸೀಸ್ ಕ್ರಿಕೆಟಿಗ ಮಿಚೆಲ್ ಮಾರ್ಷ್​

Updated on: Aug 10, 2026 | 6:46 PM

Mitchell Marsh: ಇಂಗ್ಲೆಂಡ್‌ನ ದಿ ಹಂಡ್ರೆಡ್ ಲೀಗ್‌ನಲ್ಲಿ ಮಿಚೆಲ್ ಮಾರ್ಷ್ ಅದ್ಭುತ ಪ್ರದರ್ಶನ ನೀಡಿದ್ದಾರೆ. 7,000 ಟಿ20 ರನ್‌ಗಳನ್ನು ಪೂರ್ಣಗೊಳಿಸಿದ ಮಾರ್ಷ್, ಈ ಸೀಸನ್‌ನ ಟಾಪ್ ಸ್ಕೋರರ್ ಆಗಿದ್ದಾರೆ. ಅಲ್ಲದೆ, ಒಂದು ಕ್ಯಾಲೆಂಡರ್ ವರ್ಷದಲ್ಲಿ 1,500ಕ್ಕೂ ಹೆಚ್ಚು ಟಿ20 ರನ್ ಗಳಿಸಿದ ಮೊದಲ ಆಸ್ಟ್ರೇಲಿಯನ್ ಆಟಗಾರ ಎಂಬ ದಾಖಲೆ ನಿರ್ಮಿಸಿ, ಟಿಮ್ ಡೇವಿಡ್ ಅವರ ದಾಖಲೆಯನ್ನು ಮುರಿದಿದ್ದಾರೆ. ಅವರ ಅಸಾಧಾರಣ ಸಾಧನೆಗಳು ಕ್ರಿಕೆಟ್ ಲೋಕದಲ್ಲಿ ಸದ್ದು ಮಾಡುತ್ತಿವೆ.

1 / 5
ಇಂಗ್ಲೆಂಡ್‌ನಲ್ಲಿ ಪ್ರಸ್ತುತ ದಿ ಹಂಡ್ರೆಂಡ್ ಲೀಗ್ ನಡೆಯುತ್ತಿದೆ. ಈ ಲೀಗ್​ನ 27ನೇ ಪಂದ್ಯ ಸನ್‌ರೈಸರ್ಸ್ ಲೀಡ್ಸ್ ಮತ್ತು ವೆಲ್ಷ್ ಫೈರ್ ನಡುವೆ ನಡೆಯಿತು. ಈ ಪಂದ್ಯವನ್ನು ಲೀಡ್ಸ್ ತಂಡವು 71 ರನ್‌ಗಳ ಬೃಹತ್ ಅಂತರದಿಂದ ಜಯಗಳಿಸಿತು. ಈ ಪಂದ್ಯದಲ್ಲಿ ಸನ್‌ರೈಸರ್ಸ್ ಲೀಡ್ಸ್ ಪರ ಮಿಚೆಲ್ ಮಾರ್ಷ್ 34 ಎಸೆತಗಳಲ್ಲಿ 50 ರನ್ ಗಳಿಸಿದರಾದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.

2 / 5
ಆದಾಗ್ಯೂ ಈ ಇನ್ನಿಂಗ್ಸ್‌ ಮೂಲಕ ಮಾರ್ಷ್ ಟಿ20 ಕ್ರಿಕೆಟ್‌ನಲ್ಲಿ ಪ್ರಮುಖ ಮೈಲಿಗಲ್ಲು ಸಾಧಿಸಿದರು. ಮಾರ್ಷ್​ ಇದೀಗ ಟಿ20 ಕ್ರಿಕೆಟ್​ನಲ್ಲಿ  7,000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಇದರ ಜೊತೆಗೆ ‘ದಿ ಹಂಡ್ರೆಡ್' ಲೀಗ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.

3 / 5
ಮಿಚೆಲ್ ಮಾರ್ಷ್ ಈ ಬಾರಿಯ ದಿ ಹಂಡ್ರೆಡ್ ಲೀಗ್​ನಲ್ಲಿ ಏಳು ಪಂದ್ಯಗಳನ್ನು ಆಡಿದ್ದು, ಏಳು ಇನ್ನಿಂಗ್ಸ್‌ಗಳಲ್ಲಿ 53.42 ಸರಾಸರಿಯಲ್ಲಿ 374 ರನ್ ಗಳಿಸಿದ್ದಾರೆ. ಮಾರ್ಷ್ ಪ್ರಸ್ತುತ ಈ ಆವೃತ್ತಿಯಲ್ಲಿ 300 ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಬ್ಯಾಟ್ಸ್‌ಮನ್.

4 / 5
ಹಾಗೆಯೇ ಮಿಚೆಲ್ ಮಾರ್ಷ್ ಒಂದು ಕ್ಯಾಲೆಂಡರ್ ವರ್ಷದಲ್ಲಿ 1,500 ಅಥವಾ ಅದಕ್ಕಿಂತ ಹೆಚ್ಚು ಟಿ20 ರನ್ ಗಳಿಸಿದ ಮೊದಲ ಆಸ್ಟ್ರೇಲಿಯಾದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಮಾರ್ಷ್ ಟಿಮ್ ಡೇವಿಡ್ ಅವರ ದಾಖಲೆಯನ್ನು ಮುರಿದಿದ್ದಾರೆ.

5 / 5
ಮಿಚೆಲ್ ಮಾರ್ಷ್​ಗಿಂತ ಮೊದಲು, ಟಿಮ್ ಡೇವಿಡ್ 2022 ರಲ್ಲಿ ಆಡಿದ 68 ಇನ್ನಿಂಗ್ಸ್‌ಗಳಲ್ಲಿ 27.67 ಸರಾಸರಿಯಲ್ಲಿ 1,461 ರನ್ ಗಳಿಸಿದ್ದರು. ಇದೀಗ ಮಾರ್ಷ್ 35 ಪಂದ್ಯಗಳಲ್ಲಿ 44.17 ಸರಾಸರಿಯಲ್ಲಿ 1502 ರನ್ ಗಳಿಸಿದ್ದಾರೆ. 160 ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿರುವ ಮಾರ್ಷ್​ ಇಲ್ಲಿಯವರೆಗೆ ಎರಡು ಶತಕಗಳು ಮತ್ತು 11 ಅರ್ಧಶತಕಗಳನ್ನು ಬಾರಿಸಿದ್ದಾರೆ.

Loading...
Unable to load recommendations.
Follow Us