AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿಢೀರ್ ನಿವೃತ್ತಿ ಘೋಷಿಸಿದ ಮಿಚೆಲ್ ಸ್ಟಾರ್ಕ್​

Mitchell Starc T20I Retirement: ಆಸ್ಟ್ರೇಲಿಯಾ ತಂಡದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್​ ಟಿ20 ವಿಶ್ವಕಪ್​ಗೂ ಮುನ್ನ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಆಸ್ಟ್ರೇಲಿಯಾ ಪರ 65 ಟಿ20 ಪಂದ್ಯಗಳನ್ನಾಡಿರುವ ಸ್ಟಾರ್ಕ್​ ಒಟ್ಟು 79 ವಿಕೆಟ್​ ಕಬಳಿಸಿದ್ದಾರೆ. ಈ ಮೂಲಕ ಚುಟುಕು ಕ್ರಿಕೆಟ್​ನಲ್ಲಿ ಆಸೀಸ್ ಪರ ಅತೀ ಹೆಚ್ಚು ವಿಕೆಟ್ ಪಡೆದ ವೇಗಿ ಎಂಬ ದಾಖಲೆಯನ್ನು ಹೊಂದಿದ್ದಾರೆ.

ಝಾಹಿರ್ ಯೂಸುಫ್
|

Updated on: Sep 02, 2025 | 7:38 AM

Share
ಆಸ್ಟ್ರೇಲಿಯಾ ತಂಡದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ (Mitchell Starc)​ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಮುಂಬರುವ ಏಕದಿನ ವಿಶ್ವಕಪ್​ಗೆ ಆದ್ಯತೆ ನೀಡುವ ಸಲುವಾಗಿ ಚುಟುಕು ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸುತ್ತಿರುವುದಾಗಿ ಸ್ಟಾರ್ಕ್ ತಿಳಿಸಿದ್ದಾರೆ.

1 / 5
ಸದ್ಯ ನಾನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ಇದಾಗ್ಯೂ ಏಕದಿನ ಹಾಗೂ ಟೆಸ್ಟ್​ ಕ್ರಿಕೆಟ್​ನಲ್ಲಿ ಮುಂದುವರೆಯುವೆ. ನನ್ನ ಮೊದಲ ಆದ್ಯತೆ ಯಾವತ್ತಿದ್ದರೂ ಅದು ಟೆಸ್ಟ್ ಆಡುವುದು. ಹಾಗೆಯೇ 2027ರ ಏಕದಿನ ವಿಶ್ವಕಪ್​ ಅನ್ನು ಗಮನದಲ್ಲಿರಿಸಿ ಟಿ20 ಕ್ರಿಕೆಟ್​ಗೆ ವಿದಾಯ ಹೇಳಲು ನಿರ್ಧರಿಸಿದ್ದೇನೆ ಎಂದು ಮಿಚೆಲ್ ಸ್ಟಾರ್ ತಿಳಿಸಿದ್ದಾರೆ.

2 / 5
ಮಿಚೆಲ್ ಸ್ಟಾರ್ಕ್​ ಆಸ್ಟ್ರೇಲಿಯಾ ಪರ 65 ಟಿ20 ಪಂದ್ಯಗಳನ್ನಾಡಿದ್ದಾರೆ. ಅದರಲ್ಲೂ 2021 ರಲ್ಲಿ ಚೊಚ್ಚಲ ಬಾರಿ ಟಿ20 ವಿಶ್ವಕಪ್ ಗೆದ್ದುಕೊಡುವಲ್ಲಿ ಸ್ಟಾರ್ಕ್​ ಪ್ರಮುಖ ಪಾತ್ರವಹಿಸಿದ್ದರು. ಇದೀಗ 13 ವರ್ಷಗಳ ಟಿ20 ಕೆರಿಯರ್​ಗೆ ಗುಡ್ ಬೈ ಹೇಳಲು ಎಡಗೈ ವೇಗಿ ನಿರ್ಧರಿಸಿದ್ದಾರೆ.

3 / 5
ಆಸ್ಟ್ರೇಲಿಯಾ ಪರ 65 ಟಿ20 ಪಂದ್ಯಗಳನ್ನಾಡಿರುವ ಮಿಚೆಲ್ ಸ್ಟಾರ್ಕ್ 1458 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ 1881 ರನ್​ಗಳನ್ನು ನೀಡಿರುವ ಅವರು ಒಟ್ಟು 79 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಪರ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದ 2ನೇ ಬೌಲರ್ ಎನಿಸಿಕೊಂಡಿದ್ದಾರೆ.

4 / 5
ಇದೀಗ ತಮ್ಮ 35ನೇ ವಯಸ್ಸಿನಲ್ಲಿ ಚುಟುಕು ಕ್ರಿಕೆಟ್​ಗೆ ವಿದಾಯ ಹೇಳಿರುವ ಮಿಚೆಲ್ ಸ್ಟಾರ್ಕ್ ಮುಂಬರುವ ದಿನಗಳಲ್ಲಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್​ನಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಇದಾಗ್ಯೂ ಅವರು ಐಪಿಎಲ್ ಸೇರಿದಂತೆ ವಿಶ್ವದ ಪ್ರಮುಖ ಟಿ20 ಲೀಗ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

5 / 5