ಅವರಿಲ್ಲ, ಇವರಿಲ್ಲ… ಸಿರಾಜ್ ಬೆನ್ನು ಮೂಳೆ ಮುರಿಯುತ್ತಿರುವ ಬಿಸಿಸಿಐ

Mohammed Siraj: ವೇಗದ ಬೌಲರ್​​ಗಳು ಅತ್ಯುತ್ತಮ ಪ್ರದರ್ಶನ ನೀಡಬೇಕಿದ್ದರೆ ಅವರಿಗೆ ಉತ್ತಮ ವಿಶ್ರಾಂತಿಯ ಅಗತ್ಯವಿರುತ್ತದೆ. ಅದರಲ್ಲೂ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್​ನಲ್ಲಿ ದೀರ್ಘಾವಧಿ ಬೌಲಿಂಗ್ ಮಾಡುವುದರಿಂದ ಫಿಟ್​ನೆಸ್​ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಇದಕ್ಕೆ ಉದಾಹರಣೆಯಾಗಿ ಈ ಹಿಂದೆ ಒಂದು ವರ್ಷ ತಂಡದಿಂದ ಹೊರಗುಳಿದಿರುವ ಜಸ್​ಪ್ರೀತ್ ಬುಮ್ರಾ ಹಾಗೂ ಕಳೆದ ಒಂದು ವರ್ಷದಿಂದ ಟೀಮ್ ಇಂಡಿಯಾದಿಂದ ಹೊರಗಿರುವ ಮೊಹಮ್ಮದ್ ಶಮಿ ನಮ್ಮ ಕಣ್ಮುಂದೆ ಇದ್ದಾರೆ. ಆದರೆ ಇವರಿಬ್ಬರ ಅಲಭ್ಯತೆಯನ್ನು ಟೀಮ್ ಇಂಡಿಯಾ ಸರಿದೂಗಿಸಿದ್ದು ಮೊಹಮ್ಮದ್ ಸಿರಾಜ್ ಅವರನ್ನು ಸತತವಾಗಿ ಕಣಕ್ಕಿಳಿಸುವ ಮೂಲಕ ಎಂಬುದೇ ಅಚ್ಚರಿ.

ಝಾಹಿರ್ ಯೂಸುಫ್
|

Updated on:Jan 07, 2025 | 8:54 AM

ಅವರಿಲ್ಲ... ನೀ ಆಡಲೇಬೇಕು. ಇವರಿಲ್ಲ ಹೀಗಾಗಿ ನೀ ಕಣಕ್ಕಿಳಿಯಲೇಬೇಕು. ಇದು ಟೀಮ್ ಇಂಡಿಯಾದಲ್ಲಿ ಮೊಹಮ್ಮದ್ ಸಿರಾಜ್ ಅವರ ಪರಿಸ್ಥಿತಿ. ಏಕೆಂದರೆ ಕಳೆದ ಒಂದೂವರೆ ವರ್ಷಗಳಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ಓವರ್​​ಗಳನ್ನು ಎಸೆದಿರುವುದು ಮೊಹಮ್ಮದ್ ಸಿರಾಜ್. ಅಂದರೆ ವಿಶ್ರಾಂತಿಯಿಲ್ಲದೆ ಸಿರಾಜ್ ಪ್ರತಿ ಪಂದ್ಯಗಳನ್ನಾಡುತ್ತಿದ್ದಾರೆ.

1 / 7
ಇದಕ್ಕೆ ಮುಖ್ಯ ಕಾರಣ ಕಳೆದ ಒಂದೂವರೆ ವರ್ಷದಿಂದ ಮೊಹಮ್ಮದ್ ಶಮಿ ತಂಡದಿಂದ ಹೊರಗುಳಿದಿರುವುದು. ಶಮಿ ಅವರ ಅನುಪಸ್ಥಿತಿಯಲ್ಲಿ ಜಸ್​ಪ್ರೀತ್ ಬುಮ್ರಾ ಜೊತೆ ಎರಡನೇ ವೇಗಿಯಾಗಿ ಸಿರಾಜ್ ಕಣಕ್ಕಿಳಿಯಬೇಕಾಗಿರುವುದು ಟೀಮ್ ಇಂಡಿಯಾ ಪಾಲಿಗೆ ಅನಿವಾರ್ಯವಾಗಿ ಬಿಟ್ಟಿದೆ.

2 / 7
ಇನ್ನು ಜಸ್​ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿದರೆ, ಮೊಹಮ್ಮದ್ ಸಿರಾಜ್ ಕಣಕ್ಕಿಳಿಯಲೇಬೇಕು. ಹೀಗಾಗಿಯೇ ಸಿರಾಜ್ 2023 ರಿಂದ ಭಾರತದ ಪರ ಸತತ ಪಂದ್ಯಗಳನ್ನಾಡಿ ಬಳಲಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ವೇಳೆ ಮೊಹಮ್ಮದ್ ಸಿರಾಜ್ ಫಿಟ್​ನೆಸ್ ಸಮಸ್ಯೆಗೆ ಒಳಗಾಗಿದ್ದರು.

3 / 7
ಇದಾಗ್ಯೂ ಅವರು ಐದು ಪಂದ್ಯಗಳಲ್ಲೂ ಬೌಲಿಂಗ್ ಮಾಡಿದ್ದಾರೆ ಎಂಬುದು ಉಲ್ಲೇಖಾರ್ಹ. ಅಲ್ಲದೆ ಈ ಬಾರಿಯ ಬಾರ್ಡರ್-ಗವಾಸ್ಕರ್ ಟೂರ್ನಿಯಲ್ಲಿ ಅತ್ಯಧಿಕ ಓವರ್​ಗಳನ್ನು ಎಸೆದ ಭಾರತೀಯ ಬೌಲರ್ (157.1 ಓವರ್​ಗಳು) ಎನಿಸಿಕೊಂಡಿದ್ದಾರೆ. ಇದರ ನಡುವೆ 20 ವಿಕೆಟ್ ಕಬಳಿಸಿ ಬುಮ್ರಾಗೆ ಉತ್ತಮ ಸಾಥ್ ಕೂಡ ನೀಡಿದ್ದರು.

4 / 7
ಇನ್ನು 2023 ರಿಂದ ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾ ಪರ 57 ಪಂದ್ಯಗಳನ್ನಾಡಿದ್ದು, ಈ ವೇಳೆ ಎಸೆದಿರುವ ಒಟ್ಟು ಓವರ್​ಗಳ ಸಂಖ್ಯೆ ಬರೋಬ್ಬರಿ 683.5. ಅಂದರೆ 4103 ಎಸೆತಗಳನ್ನು ಎಸೆದಿದ್ದಾರೆ. ಹೀಗೆ ವಿಶ್ರಾಂತಿ ನೀಡದೇ ಮೊಹಮ್ಮದ್ ಸಿರಾಜ್ ಅವರನ್ನು ಸತತ ಬಳಸಿಕೊಳ್ಳುತ್ತಿರುವುದರಿಂದಲೇ ಅವರ ಪ್ರದರ್ಶನ ಇಳಿಮುಖದತ್ತ ಸಾಗುತ್ತಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ.

5 / 7
ಇದೀಗ ಇಂಗ್ಲೆಂಡ್ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗಳಿಂದ ಜಸ್​ಪ್ರೀತ್ ಬುಮ್ರಾ ವಿಶ್ರಾಂತಿಯ ಕಾರಣ ಹೊರಗುಳಿಯುವುದು ಖಚಿತವಾಗಿದೆ. ಅತ್ತ ಮೊಹಮ್ಮದ್ ಶಮಿ ಸಂಪೂರ್ಣ ಫಿಟ್​ನೆಸ್​ನೊಂದಿಗೆ ಮರಳಿದರೆ ಬುಮ್ರಾ ಸ್ಥಾನ ತುಂಬಿಕೊಳ್ಳಲಿದ್ದಾರೆ. ಆದರೆ ಇಲ್ಲಿ ಎರಡನೇ ವೇಗಿಯಾಗಿ ಮತ್ತೆ ಮೊಹಮ್ಮದ್ ಸಿರಾಜ್ ಅವರನ್ನು ಕಣಕ್ಕಿಳಿಸಲೇಬೇಕಾದ ಅನಿವಾರ್ಯತೆ ಎದುರಾಗಲಿದೆ.

6 / 7
ಹೀಗೆ ಮೊಹಮ್ಮದ್ ಸಿರಾಜ್​ಗೆ ವಿಶ್ರಾಂತಿ ನೀಡದೇ ಇಂಗ್ಲೆಂಡ್ ಸರಣಿಯಲ್ಲೂ ಬಳಸಿಕೊಂಡರೆ, ಚಾಂಪಿಯನ್ಸ್ ಟ್ರೋಫಿಯಲ್ಲಿ ಅದರ ಪರಿಣಾಮ ಟೀಮ್ ಇಂಡಿಯಾ ಎದುರಿಸಲಿದೆ. ಹೀಗಾಗಿ ಆಂಗ್ಲರ ವಿರುದ್ಧದ ಟಿ20 ಸರಣಿ ವೇಳೆ ಮೊಹಮ್ಮದ್ ಸಿರಾಜ್​ಗೆ​ ಸಂಪೂರ್ಣ ವಿಶ್ರಾಂತಿ ನೀಡಲೇಬೇಕು. ಇದರ ಹೊರತಾಗಿ ಅವರಿಲ್ಲ, ಇವರಿಲ್ಲ ಎಂದು ಸತತವಾಗಿ ಕಣಕ್ಕಿಳಿಸಿದರೆ ಸಿರಾಜ್ ಕೆರಿಯರ್ ಸಟ್ ಪಟ್ ದುಡುಂ.

7 / 7

Published On - 7:53 am, Tue, 7 January 25

Follow us