- Kannada News Photo gallery Cricket photos Most 150 Plus scores by an Indian in ODI In Kannada News zp
ಟೀಮ್ ಇಂಡಿಯಾ ಪರ ಅತೀ ಹೆಚ್ಚು ಬಾರಿ 150 ಕ್ಕೂ ಅಧಿಕ ರನ್ ಬಾರಿಸಿದ್ದು ಯಾರು ಗೊತ್ತಾ?
Team India Records: ಏಕದಿನ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಬಾರಿ 150+ ರನ್ ಬಾರಿಸಿವ ಭಾರತೀಯ ಬ್ಯಾಟ್ಸ್ಮನ್ಗಳು ಯಾರೆಲ್ಲಾ ಎಂದು ನೋಡೋಣ...
Updated on: Jan 15, 2023 | 10:06 PM

ತಿರುವನಂತಪುರದ ಗ್ರೀನ್ ಫೀಲ್ಡ್ ಮೈದಾನದಲ್ಲಿ ನಡೆದ ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಬಾರಿಸಿ ಮಿಂಚಿದ್ದರು. 85 ಎಸೆತಗಳಲ್ಲಿ ಶತಕ ಪೂರೈಸಿದ್ದ ಕೊಹ್ಲಿ ಆ ಬಳಿಕ ಕೇವಲ 106 ಎಸೆತಗಳಲ್ಲಿ 150 ರನ್ ಚಚ್ಚಿದ್ದರು.

ಅಷ್ಟೇ ಅಲ್ಲದೆ ಕೊನೆಯ ಎಸೆತದವರೆಗೆ ಕ್ರೀಸ್ನಲ್ಲಿದ್ದ ಕೊಹ್ಲಿ ಅಂತಿಮವಾಗಿ 110 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 13 ಫೋರ್ನೊಂದಿಗೆ ಅಜೇಯ 166 ರನ್ ಬಾರಿಸಿದರು. ಈ ಶತಕದೊಂದಿಗೆ ಕಿಂಗ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರ ಮತ್ತೊಂದು ದಾಖಲೆಯನ್ನೂ ಕೂಡ ಸರಿಗಟ್ಟಿದರು.

ಅಂದರೆ ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ಬಾರಿ 150 ಕ್ಕಿಂತ ಹೆಚ್ಚಿನ ರನ್ ಬಾರಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಕಿಂಗ್ ಕೊಹ್ಲಿ 2ನೇ ಸ್ಥಾನ ಅಲಂಕರಿಸಿದ್ದಾರೆ. ಅದು ಕೂಡ ಸಚಿನ್ ಅವರ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ. ಹಾಗಿದ್ರೆ ಏಕದಿನ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಬಾರಿ 150+ ರನ್ ಬಾರಿಸಿವ ಭಾರತೀಯ ಬ್ಯಾಟ್ಸ್ಮನ್ಗಳು ಯಾರೆಲ್ಲಾ ಎಂದು ನೋಡೋಣ...

1- ರೋಹಿತ್ ಶರ್ಮಾ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಹಿಟ್ಮ್ಯಾನ್ ಏಕದಿನ ಕ್ರಿಕೆಟ್ನಲ್ಲಿ ಒಟ್ಟು 29 ಶತಕ ಬಾರಿಸಿದ್ದಾರೆ. ಈ ವೇಳೆ 8 ಬಾರಿ 150+ ಸ್ಕೋರ್ ಕಲೆಹಾಕಿರುವುದು ವಿಶೇಷ. ಈ ಮೂಲಕ ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ 150+ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

2- ಸಚಿನ್ ತೆಂಡೂಲ್ಕರ್: ಈ ಪಟ್ಟಿಯಲ್ಲಿರುವ 2ನೇ ಬ್ಯಾಟ್ಸ್ಮನ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಕ್ರಿಕೆಟ್ ದೇವರು ಏಕದಿನ ಕ್ರಿಕೆಟ್ನಲ್ಲಿ 49 ಶತಕ ಬಾರಿಸಿದ್ದಾರೆ. ಈ ವೇಳೆ 5 ಬಾರಿ 150+ ರನ್ಗಳಿಸಿದ್ದರು ಎಂಬುದು ವಿಶೇಷ.

3- ವಿರಾಟ್ ಕೊಹ್ಲಿ: ಶ್ರೀಲಂಕಾ ವಿರುದ್ಧ ಅಜೇಯ 166 ರನ್ ಬಾರಿಸುವ ಮೂಲಕ ಕಿಂಗ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದರು. ಅಂದರೆ ವಿರಾಟ್ ಕೊಹ್ಲಿ ಕೂಡ ತಮ್ಮ 46 ಏಕದಿನ ಶತಕಗಳಲ್ಲಿ 5 ಬಾರಿ 150+ ರನ್ ಕಲೆಹಾಕಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಪರ ಅತ್ಯಧಿಕ ಬಾರಿ 150+ ರನ್ ಬಾರಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಜೊತೆ ಜಂಟಿಯಾಗಿ 2ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.
