- Kannada News Photo gallery Cricket photos Most catches as a wicketkeeper in IPL Dinesh Karthik surpasses MS Dhoni
IPL 2021: ವಿಕೆಟ್ ಕೀಪಿಂಗ್ನಲ್ಲಿ ಧೋನಿ ಹೆಸರಲ್ಲಿದ್ದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡ ದಿನೇಶ್ ಕಾರ್ತಿಕ್!
IPL 2021: ಐಪಿಎಲ್‌ನಲ್ಲಿ ವಿಕೆಟ್ ಕೀಪರ್ ಆಗಿ ಕಾರ್ತಿಕ್ ಪಡೆದ 115 ನೇ ಕ್ಯಾಚ್. ಕಾರ್ತಿಕ್ 205 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರೆ, ಧೋನಿ 212 ಪಂದ್ಯಗಳಲ್ಲಿ ವಿಕೆಟ್ ಕೀಪರ್ ಆಗಿ 114 ಕ್ಯಾಚ್ ಹೊಂದಿದ್ದಾರೆ.
Updated on: Sep 23, 2021 | 10:48 PM

ಮಹೇಂದ್ರ ಸಿಂಗ್ ಧೋನಿ ಭಾರತೀಯ ಕ್ರಿಕೆಟ್ಗೆ ಕಾಲಿಟ್ಟಾಗಿನಿಂದಲೂ, ಅವರು ನಿರಂತರ ಪ್ರಾಬಲ್ಯ ಹೊಂದಿದ್ದಾರೆ. ಅವರು ತಮ್ಮ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಮೂಲಕ ಅನೇಕ ದಾಖಲೆಗಳನ್ನು ಮಾಡಿದ್ದಾರೆ. ಅವರಿಂದಾಗಿ, ಅನೇಕ ವಿಕೆಟ್ ಕೀಪರ್‌ಗಳಿಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಗಲಿಲ್ಲ. ಅವರಲ್ಲಿ ಒಬ್ಬರು ದಿನೇಶ್ ಕಾರ್ತಿಕ್. ವಿಕೆಟ್ ಕೀಪರ್ ಆಗಿ ಧೋನಿಯ ಎಂಟ್ರಿಯ ನಂತರ, ಅವರು ಹೆಚ್ಚಾಗಿ ಬ್ಯಾಟ್ಸ್‌ಮನ್ ಆಗಿ ಆಡಿದರು. ಆದರೆ ಇಂದು ಅಂದರೆ 23 ಸೆಪ್ಟೆಂಬರ್ನಲ್ಲಿ ಕಾರ್ತಿಕ್ ವಿಕೆಟ್ ಕೀಪಿಂಗ್ ವಿಷಯದಲ್ಲಿ ಧೋನಿಯನ್ನು ಹಿಂದಿಕ್ಕಿದ್ದಾರೆ.

ಐಪಿಎಲ್ 2021 ರ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಾರ್ತಿಕ್ ಈ ಸಾಧನೆ ಮಾಡಿದ್ದಾರೆ. ಈ ಪಂದ್ಯದಲ್ಲಿ, ಕಾರ್ತಿಕ್ ಪ್ರಸಿದ್ಧ ಕೃಷ್ಣ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ (5) ಕ್ಯಾಚ್ ಹಿಡಿದ ತಕ್ಷಣ, ಅವರು ಧೋನಿ ಹೆಸರಿನಲ್ಲಿದ್ದ ದಾಖಲೆಯನ್ನು ಹಿಂದಿಕ್ಕಿದರು. ಅವರು ಐಪಿಎಲ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ವಿಕೆಟ್ ಕೀಪರ್ ಆಗಿದ್ದಾರೆ. ಇದು ಐಪಿಎಲ್‌ನಲ್ಲಿ ವಿಕೆಟ್ ಕೀಪರ್ ಆಗಿ ಕಾರ್ತಿಕ್ ಪಡೆದ 115 ನೇ ಕ್ಯಾಚ್. ಕಾರ್ತಿಕ್ 205 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರೆ, ಧೋನಿ 212 ಪಂದ್ಯಗಳಲ್ಲಿ ವಿಕೆಟ್ ಕೀಪರ್ ಆಗಿ 114 ಕ್ಯಾಚ್ ಹೊಂದಿದ್ದಾರೆ.

ಈ ಇಬ್ಬರ ನಂತರ, ಪ್ರಸ್ತುತ ಸಿಎಸ್‌ಕೆ ಮತ್ತು ಮಾಜಿ ಕೆಕೆಆರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಈ ಸಾಧನೆ ಮಾಡಿದ್ದಾರೆ. ಆದರೆ, ಉತ್ತಪ್ಪ ಅವರಿಬ್ಬರಿಗಿಂತ ತೀರಾ ಹಿಂದುಳಿದಿದ್ದಾರೆ. ಅವರು 189 ಪಂದ್ಯಗಳಲ್ಲಿ ವಿಕೆಟ್ ಕೀಪರ್ ಆಗಿ 90 ಕ್ಯಾಚ್ ತೆಗೆದುಕೊಂಡಿದ್ದಾರೆ.

ಉತ್ತಪ್ಪ ನಂತರ ಪಾರ್ಥಿವ್ ಪಟೇಲ್ ಈ ದಾಖಲೆ ಮಾಡಿದ್ದಾರೆ. ಐಪಿಎಲ್‌ನಲ್ಲಿ ಪಾರ್ಥಿವ್ 139 ಪಂದ್ಯಗಳನ್ನು ಆಡಿದ್ದಾರೆ ಮತ್ತು ವಿಕೆಟ್ ಕೀಪರ್ ಆಗಿ 81 ಕ್ಯಾಚ್ ಗಳನ್ನು ತೆಗೆದುಕೊಂಡಿದ್ದಾರೆ. ಸಿಎಸ್ ಕೆ, ಮುಂಬೈ ಇಂಡಿಯನ್ಸ್, ಆರ್ಸಿಬಿ, ಡೆಕ್ಕನ್ ಚಾರ್ಜರ್ಸ್, ಕೊಚ್ಚಿ ಟಸ್ಕರ್ಸ್, ಸನ್ ರೈಸರ್ಸ್ ಪರ ಪಾರ್ಥಿವ್ ಆಡಿದ್ದಾರೆ.

ಪಾರ್ಥಿವ್ ನಂತರ ಸನ್ ರೈಸರ್ಸ್ ಹೈದರಾಬಾದ್ನ ವೃದ್ಧಿಮಾನ್ ಸಹಾ ಇದ್ದಾರೆ. ಸಹಾ 127 ಐಪಿಎಲ್ ಪಂದ್ಯಗಳಲ್ಲಿ ವಿಕೆಟ್ ಕೀಪರ್ ಆಗಿ 79 ಕ್ಯಾಚ್ ತೆಗೆದುಕೊಂಡಿದ್ದಾರೆ. ಅವರು ಐಪಿಎಲ್‌ನಲ್ಲಿ ಸಿಎಸ್‌ಕೆ, ಕೆಕೆಆರ್, ಪಂಜಾಬ್ ಪರ ಆಡಿದ್ದಾರೆ.
