ಕೊಹ್ಲಿಗೆ ಸರಿಸಾಟಿ ಯಾರು! 2021 ರಲ್ಲಿ ಕ್ರೀಡೆಗೆ ಸಂಬಂಧಿಸಿದಂತೆ ದೇಶದಲ್ಲಿ ಹೆಚ್ಚು ರೀಟ್ವೀಟ್, ಲೈಕ್ ಪಡೆದ ಟ್ವೀಟ್‌ಗಳು
TV9 Web | Updated By: ಪೃಥ್ವಿಶಂಕರ
Updated on:
Dec 09, 2021 | 6:10 PM
Twitter 2021: ಮಹೇಂದ್ರ ಸಿಂಗ್ ಧೋನಿ ಅಕ್ಟೋಬರ್‌ನಲ್ಲಿ ನಡೆದ ಐಪಿಎಲ್‌ನಲ್ಲಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದರು. ಇದಕ್ಕಾಗಿ ಧೋನಿಯನ್ನು ಹೊಗಳಿ ಕೊಹ್ಲಿ ಟ್ವೀಟ್ ಮಾಡಿದ್ದರು. ಕೊಹ್ಲಿಯ ಈ ಟ್ವೀಟ್ ಕ್ರೀಡಾ ಜಗತ್ತಿನಲ್ಲಿ ಅತಿ ಹೆಚ್ಚು ಲೈಕ್ ಮತ್ತು ರೀಟ್ವೀಟ್ ಮಾಡಿದ ಟ್ವೀಟ್ ಆಗಿದೆ.
1 / 5
ಭಾರತದಲ್ಲಿ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಚರ್ಚಿಸಲಾದ 2021ಟಾಪ್ ಸಂಭಾಷಣೆಗಳು, ಟ್ರೆಂಡ್ಸ್ ಮತ್ತು ಕ್ಷಣಗಳನ್ನು ಟ್ವಿಟರ್ (Twitter) ಗುರುವಾರ ಬಹಿರಂಗಪಡಿಸಿದೆ. ಈ ವರ್ಷ ಭಾರತದಲ್ಲಿ ಹೆಚ್ಚು ಜನರು ಇಷ್ಟಪಟ್ಟ ಟ್ವೀಟ್‌ಗಳು, ಹೆಚ್ಚಿನ ಮರುಟ್ವೀಟ್‌ಗಳು ಒಳಗೊಂಡಿದೆ. ಪ್ರತಿ ಕ್ಷೇತ್ರದಲ್ಲಿ ಈ ವರ್ಷದ ಅತ್ಯಂತ ಜನಪ್ರಿಯ ಹ್ಯಾಶ್‌ಟ್ಯಾಗ್‌ಗಳ ಬಗ್ಗೆಯೂ ಹೇಳಲಾಗಿದೆ.
2 / 5
ಆಸ್ಟ್ರೇಲಿಯಾದ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಏಪ್ರಿಲ್‌ನಲ್ಲಿ ಟ್ವೀಟ್ ಮಾಡಿದ್ದು, ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಹಾಯ ಮಾಡುವುದಾಗಿ ತಿಳಿಸಿದ್ದರು. ಭಾರತಕ್ಕೆ ಆರ್ಥಿಕವಾಗಿ ಸಹಾಯ ಮಾಡುವುದಾಗಿ ಕಮ್ಮಿನ್ಸ್ ಟ್ವೀಟ್ ಮೂಲಕ ತಿಳಿಸಿದ್ದರು. ಕಮ್ಮಿನ್ಸ್ ಅವರ ಈ ಟ್ವೀಟ್ 2021 ರಲ್ಲಿ ಭಾರತದಲ್ಲಿ ಅತಿ ಹೆಚ್ಚು ರಿಟ್ವೀಟ್ ಮಾಡಿದ ಟ್ವೀಟ್ ಆಗಿದೆ. ಇಲ್ಲಿಯವರೆಗೆ ಒಟ್ಟು 114,000 ಜನರು ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದಾರೆ.
3 / 5
ವಿರಾಟ್ ಕೊಹ್ಲಿ ಈ ವರ್ಷ ತಂದೆಯಾದರು. ಅದಕ್ಕಾಗಿಯೇ ಅವರು ಆಸ್ಟ್ರೇಲಿಯಾ ಪ್ರವಾಸವನ್ನು ಅರ್ಧಕ್ಕೆ ಬಿಟ್ಟು ಬರಬೇಕಾಯ್ತು. ನಂತರ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಸಂತಸದ ವಿಚಾರವನ್ನು ಕೊಹ್ಲಿ ಟ್ವೀಟ್ ಮೂಲಕ ತಿಳಿಸಿದ್ದರು. ಈ ಟ್ವೀಟ್‌ಗೆ ಇಡೀ ಭಾರತದಾದ್ಯಂತ ಸಾಕಷ್ಟು ಪ್ರೀತಿ ವ್ಯಕ್ತವಾಗಿತ್ತು. ಈ ಟ್ವೀಟ್ ಈ ವರ್ಷ ಭಾರತದಲ್ಲಿ ಹೆಚ್ಚು ಇಷ್ಟಪಟ್ಟ ಟ್ವೀಟ್ ಆಗಿದೆ. ಈ ಟ್ವೀಟ್‌ಗೆ ಇದುವರೆಗೆ 538,200 ಲೈಕ್‌ಗಳು ಬಂದಿವೆ.
4 / 5
ಇವೆರಡನ್ನು ಹೊರತುಪಡಿಸಿ ವಿರಾಟ್ ಕೊಹ್ಲಿಯ ಮತ್ತೊಂದು ಟ್ವೀಟ್ ಕ್ರೀಡಾ ಲೋಕದಲ್ಲಿ ಸಂಚಲನ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಮಹೇಂದ್ರ ಸಿಂಗ್ ಧೋನಿ ಅಕ್ಟೋಬರ್‌ನಲ್ಲಿ ನಡೆದ ಐಪಿಎಲ್‌ನಲ್ಲಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದರು. ಇದಕ್ಕಾಗಿ ಧೋನಿಯನ್ನು ಹೊಗಳಿ ಕೊಹ್ಲಿ ಟ್ವೀಟ್ ಮಾಡಿದ್ದರು. ಕೊಹ್ಲಿಯ ಈ ಟ್ವೀಟ್ ಕ್ರೀಡಾ ಜಗತ್ತಿನಲ್ಲಿ ಅತಿ ಹೆಚ್ಚು ಲೈಕ್ ಮತ್ತು ರೀಟ್ವೀಟ್ ಮಾಡಿದ ಟ್ವೀಟ್ ಆಗಿದೆ. ಇದು ಇಲ್ಲಿಯವರೆಗೆ 529,000 ಲೈಕ್‌ಗಳನ್ನು ಪಡೆದಿದೆ ಮತ್ತು 91,600 ಜನರು ರಿಟ್ವೀಟ್ ಮಾಡಿದ್ದಾರೆ.
5 / 5
ಮತ್ತೊಂದೆಡೆ, 2021 ರಲ್ಲಿ ಕ್ರೀಡಾ ಜಗತ್ತಿನಲ್ಲಿ ಹೆಚ್ಚು ಪ್ರಸಿದ್ಧವಾದ ಹ್ಯಾಶ್‌ಟ್ಯಾಗ್ ಕುರಿತು ನಾವು ಮಾತನಾಡಿದರೆ, #Teamindia ವರ್ಷವಿಡೀ ಬಹಳ ಜನಪ್ರಿಯವಾಗಿತ್ತು. ಇದಲ್ಲದೇ ಟಿ20 ವಿಶ್ವಕಪ್ ಮತ್ತು ಟೋಕಿಯೊ ಒಲಿಂಪಿಕ್ಸ್‌ನ ಹ್ಯಾಶ್‌ಟ್ಯಾಗ್‌ಗಳು ಕೂಡ ಟ್ವಿಟರ್‌ನಲ್ಲಿ ಹೆಚ್ಚು ಚರ್ಚೆಗೆ ಒಳಗಾಗಿದ್ದವು. #Tokyo2020 ಈ ವರ್ಷ ಕ್ರೀಡಾ ಜಗತ್ತಿನಲ್ಲಿ ಅತಿ ಹೆಚ್ಚು ರಿಟ್ವೀಟ್ ಮಾಡಿದ ಹ್ಯಾಶ್‌ಟ್ಯಾಗ್ ಆಗಿದೆ. #ಐಪಿಎಲ್ ಹ್ಯಾಶ್‌ಟ್ಯಾಗ್ ಕೂಡ ಕ್ರೀಡಾ ಲೋಕದಲ್ಲೂ ಸದ್ದು ಮಾಡಿತು.
Published On - 6:09 pm, Thu, 9 December 21