MS Dhoni: ಎಲ್ಲೆಲ್ಲೂ ಯೆಲ್ಲೋ: ಫುಟ್​ಬಾಲ್ ವಿಶ್ವಕಪ್​ನಲ್ಲೂ ಧೋನಿಯದ್ದೇ ಹವಾ..!

| Updated By: ಝಾಹಿರ್ ಯೂಸುಫ್

Updated on: Nov 26, 2022 | 6:30 PM

FIFA World Cup 2022: ಮಹೇಂದ್ರ ಸಿಂಗ್ ಧೋನಿ ಕೂಡ ಫುಟ್​ಬಾಲ್ ಪ್ರಿಯರು. ಅವರ ನೆಚ್ಚಿನ ಫುಟ್​ಬಾಲ್​ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್.

1 / 6
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ವಿಶ್ವದಾದ್ಯಂತ ಅಭಿಮಾನಿಗಳಿರುವುದು ಗೊತ್ತೇ ಇದೆ. ಅದರಲ್ಲೂ ಯೆಲ್ಲೋ ಜೆರ್ಸಿಯ ಸಿಎಸ್​ಕೆಗೂ ಅಂತಹದ್ದೇ ಫ್ಯಾನ್​ ಫಾಲೋವರ್ಸ್​ ಇದೆ. ಇದೀಗ ಯೆಲ್ಲೋ ಅಭಿಮಾನಿಯೊಬ್ಬರು ಖತರ್ ವಿಶ್ವಕಪ್​ನಲ್ಲೂ ಕಾಣಿಸಿಕೊಂಡಿದ್ದಾರೆ. ಅದು ಕೂಡ ಧೋನಿಯ ಜೆರ್ಸಿಯ ಮೂಲಕ ಎಂಬುದು ವಿಶೇಷ.

2 / 6
ಅಂದರೆ ಸಿಎಸ್​ಕೆ ತಂಡದ ಅಪ್ಪಟ ಅಭಿಮಾನಿಯೊಬ್ಬರು ಮಹೇಂದ್ರ ಸಿಂಗ್ ಧೋನಿ ಜೆರ್ಸಿಯೊಂದಿಗೆ ವಿಶ್ವಕಪ್​ ನೋಡಲು ತೆರಳಿದ್ದಾರೆ. ಬ್ರೆಝಿಲ್-ಸರ್ಬಿಯಾ ಪಂದ್ಯದ ವೇಳೆ ಕಾಣಿಸಿಕೊಂಡ ಈ ಅಭಿಮಾನಿಯು ಧೋನಿಯ ಹೆಸರಿರುವ ಸಿಎಸ್​ಕೆ ಜೆರ್ಸಿ ಹಾಗೂ ಪೋಸ್ಟರ್​ಗಳನ್ನು ಪ್ರದರ್ಶಿಸಿದ್ದರು.

3 / 6
ಇದೀಗ ಈ ಅಭಿಮಾನಿಯ ಫೋಟೋವನ್ನು ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿಯ ಟ್ವಿಟರ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲದೆ ಈ ಫೋಟೋಗೆ ಎಲ್ಲೆಲ್ಲೂ ಯೆಲ್ಲೋ ಎಂಬ ಟ್ಯಾಗ್​ಲೈನ್ ನೀಡಲಾಗಿದೆ.

4 / 6
ಅಂದರೆ ಸಿಎಸ್​ಕೆ ಅಭಿಮಾನಿಯು ಬ್ರೆಝಿಲ್ ತಂಡದ ಅಪ್ಪಟ ಫ್ಯಾನ್. ಹೀಗಾಗಿ ಹಳದಿ ಬಣ್ಣದ ಬ್ರೆಝಿಲ್ ಜೆರ್ಸಿಯ ಜೊತೆ ಸಿಎಸ್​ಕೆ ಟಿ-ಶರ್ಟ್​ ಅನ್ನು ಕೂಡ ಧರಿಸಿಕೊಂಡಿದ್ದಾರೆ.

5 / 6
ಇದೀಗ ಫುಟ್​ಬಾಲ್​ ಫೀವರ್​ ನಡುವೆ ಧೋನಿ ಫ್ಯಾನ್​ನ ಫೋಟೋ​ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಎಂಎಸ್​ಡಿ ಅಭಿಮಾನಿಗಳಿಂದ ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದೆ.

6 / 6
ಅಂದಹಾಗೆ ಮಹೇಂದ್ರ ಸಿಂಗ್ ಧೋನಿ ಕೂಡ ಫುಟ್​ಬಾಲ್ ಪ್ರಿಯರು. ಅವರ ನೆಚ್ಚಿನ ಫುಟ್​ಬಾಲ್​ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್. ಹಾಗೆಯೇ ಧೋನಿಯ ನೆಚ್ಚಿನ ಫುಟ್​ಬಾಲ್ ಆಟಗಾರ ಪೋರ್ಚುಗಲ್​ನ ಕ್ರಿಸ್ಟಿಯಾನೋ ರೊನಾಲ್ಡೊ.

Published On - 6:30 pm, Sat, 26 November 22