- Kannada News Photo gallery Cricket photos Kannada News | ms dhoni in CSK vs GT IPL 2023 post match presentation he said this is the best time to announce my retirement
MS Dhoni IPL 2023 Final: ನಿವೃತ್ತಿ ಹೇಳಲು ಇದು ಸರಿಯಾದ ಸಮಯ, ಆದರೆ: ಪಂದ್ಯದ ಬಳಿಕ ಧೋನಿಯಿಂದ ಶಾಕಿಂಗ್ ಹೇಳಿಕೆ
CSK vs GT, IPL 2023 Final: ಐಪಿಎಲ್ 2023 ಫೈನಲ್ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಗೆದ್ದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಏನು ಹೇಳಿದ್ದಾರೆ ನೋಡಿ.
Updated on: May 30, 2023 | 9:03 AM

ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದನೇ ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದೆ. ಈ ಮೂಲಕ ಅತಿ ಹೆಚ್ಚು ಬಾರಿ ಚಾಂಪಿಯನ್ ಆದವರ ಸಾಲಿನಲ್ಲಿ ಮುಂಬೈ ಇಂಡಿಯನ್ಸ್ ಜೊತೆ ಸ್ಥಾನ ಪಡೆದುಕೊಂಡಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್ಕೆ ಡಕ್ವರ್ತ್ ಲುಯಿಸ್ ನಿಯಮದ ಅನ್ವಯ 5 ವಿಕೆಟ್ಗಳ ಜಯ ಸಾಧಿಸಿತು.

ಐಪಿಎಲ್ 2023 ಟೂರ್ನಿ ಆರಂಭವಾದಾಗಿನಿಂದ ಇದು ಸಿಎಸ್ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಕೊನೆಯ ಐಪಿಎಲ್ ಎಂದು ಹೇಳಲಾಗುತ್ತಿತ್ತು. ಆದರೆ, ಈ ಬಗ್ಗೆ ಧೋನಿ ಬಳಿ ಕೇಳಿದಾಗ ಸ್ಪಷ್ಟ ಉತ್ತರ ಬಂದಿರಲಿಲ್ಲ. ಇದೀಗ ಫೈನಲ್ ಪಂದ್ಯ ಮುಗಿದ ಬಳಿಕ ಎಲ್ಲ ಗೊಂದಲಗಳಿಗೆ ಧೋನಿ ತೆರೆ ಎಳೆದಿದ್ದಾರೆ.

ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಧೋನಿ, ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ, ನನಗೆ ನಿವೃತ್ತಿ ಘೋಷಿಸಲು ಇದು ನನಗೆ ಸರಿಯಾದ ಸಮಯ. ಆದರೆ, ಈ ವರ್ಷ ನಾನು ಎಲ್ಲೇ ಹೋಗಿದ್ದರು ನನ್ನ ಮೇಲೆ ಪ್ರೀತಿ ಮತ್ತು ವಾತ್ಸಲ್ಯ ತೋರಿಸಿದರು. ಎಲ್ಲರಿಗೂ ತುಂಬಾ ಧನ್ಯವಾದಗಳು ಎಂದು ಹೇಳುವುದು ಸುಲಭದ ವಿಷಯ, ಆದರೆ ಕಠಿಣ ವಿಷಯವೆಂದರೆ ಇನ್ನೂ 9 ತಿಂಗಳು ಕಷ್ಟಪಟ್ಟು ಮುಂದಿನ ಐಪಿಎಲ್ ಆಡುವುದು. ಇದು ನನ್ನ ದೇಹಕ್ಕೆ ಸುಲಭವಾಗುವುದಿಲ್ಲ. ಆದರೆ, ಅಭಿಮಾನಿಗಳಿಗೆ ನನ್ನಿಂದ ಉಡುಗೊರೆಯಾಗಲಿದೆ ಎಂದು ಹೇಳಿದ್ದಾರೆ.

ನಾನು ಈ ಬಾರಿ ಮೊದಲ ಪಂದ್ಯ ಆಡುವಾಗ ಎಲ್ಲರೂ ನನ್ನ ಹೆಸರನ್ನು ಕೂಗುತ್ತಿದ್ದರು. ನಿಜ ಹೇಳಬೇಕೆಂದರೆ ಆಗ ನನ್ನ ಕಣ್ಣುಗಳು ಒದ್ದೆಯಾಗಿದ್ದವು. ಹಾಗಾಗಿ ಡಗೌಟ್‌ನಲ್ಲಿ ಸ್ವಲ್ಪ ಸಮಯ ತೆಗೆದುಕೊಂಡಿದ್ದೆ- ಎಂಎಸ್ ಧೋನಿ.

ಅಭಿಮಾನಿಗಳ ಈ ಪ್ರೀತಿಯನ್ನು ಆನಂದಿಸಬೇಕು ಎಂದು ನಾನು ಅರಿತುಕೊಂಡಿದ್ದೇನೆ. ಇಂದು ನಾನು ಏನಾಗಿದ್ದೇನೆ ಅದಕ್ಕೆ ಮೂಲ ಕಾರಣವೇ ಅಭಿಮಾನಿಗಳ ಪ್ರೀತಿ. ಅಭಿಮಾನಿಗಳು ನನ್ನ ವೃತ್ತಿ ಜೀವನದ ಪ್ರಮುಖ ಭಾಗ ಎಂದು ಧೋನಿ ಹೇಳಿದ್ದಾರೆ.

ಚಾಂಪಿಯನ್ ಆದ ಬಗ್ಗೆ ಮಾತನಾಡಿದ ಎಂಎಸ್ಡಿ, ಪ್ರತಿಯೊಂದು ಟ್ರೋಫಿಯೂ ವಿಶೇಷ, ಆದರೆ ಐಪಿಎಲ್‌ನ ವಿಶೇಷತೆ ಏನೆಂದರೆ ಇಲ್ಲಿ ನೀವು ಯಾವುದೇ ಸಂದರ್ಭದಲ್ಲಿ ಕಠಿಣ ಪಂದ್ಯಕ್ಕೆ ಸಿದ್ಧರಾಗಿರಬೇಕು. ಇಂದು ನಮ್ಮ ಕಡೆಯಿಂದ ಹಲವು ತಪ್ಪುಗಳಾಗಿವೆ. ಬೌಲಿಂಗ್ ವಿಭಾಗ ಸರಿಯಾಗಿ ಕೆಲಸ ಮಾಡಲಿಲ್ಲ. ಆದರೆ ನಮ್ಮ ಬ್ಯಾಟರ್ಗಳು ಉತ್ತಮ ಪ್ರದರ್ಶನ ತೋರಿದರು ಎಂದಿದ್ದಾರೆ.

ಇದೇವೇಳೆ ಎಂಎಸ್ ಧೋನಿ ಅವರು ಇಡೀ ಟೂರ್ನಿಯಲ್ಲಿ ಸಿಎಸ್ಕೆ ಆಟಗಾರರು ನೀಡಿದ ಪ್ರದರ್ಶನವನ್ನು ಕೊಂಡಾಡಿದರು. ಮುಖ್ಯವಾಗಿ ಅಜಿಂಕ್ಯ ರಹಾನೆ ಅವರ ಪ್ರಬುದ್ಧತೆಯನ್ನು ಶ್ಲಾಘಿಸಿದರು. ನಿವೃತ್ತರಾದ ಅಂಬಟಿ ರಾಯುಡು ಅವರನ್ನೂ ಹೊಗಳಿದರು.




