ಬಾಂಗ್ಲಾ ವೇಗಿ ಮುಸ್ತಾಫಿಜುರ್ ರೆಹಮಾನ್​ಗಾಗಿ ಬೇಡಿಕೆ ಇಟ್ಟ ಐಪಿಎಲ್ ಫ್ರಾಂಚೈಸಿಗಳು

Updated on: Mar 03, 2026 | 8:01 PM

Mustafizur Rahman The Hundred: ಹಿಂದೂಗಳ ಮೇಲಿನ ದೌರ್ಜನ್ಯದ ಕಾರಣ ಬಿಸಿಸಿಐನಿಂದ ಐಪಿಎಲ್ ನಿಷೇಧಕ್ಕೊಳಗಾಗಿದ್ದ ಬಾಂಗ್ಲಾದೇಶದ ಮುಸ್ತಾಫಿಜುರ್ ರೆಹಮಾನ್, ಐಪಿಎಲ್ ಮಾಲೀಕರೇ ತಂಡಗಳನ್ನು ಖರೀದಿಸಿರುವ 'ದಿ ಹಂಡ್ರೆಡ್ ಲೀಗ್'ಗೆ ಆಯ್ಕೆಯಾಗಿದ್ದಾರೆ. ಈ ಹಿಂದೆ ಐಪಿಎಲ್ ನಿಷೇಧದಿಂದ ಬಾಂಗ್ಲಾ ಕ್ರಿಕೆಟ್‌ಗೆ ನೂರಾರು ಕೋಟಿ ನಷ್ಟವಾಗಿತ್ತು. ಈಗ ಅದೇ ಐಪಿಎಲ್ ಮಾಲೀಕರಿಂದ ಮುಸ್ತಾಫಿಜುರ್‌ಗೆ ಮತ್ತೆ ಬೇಡಿಕೆ ಬಂದಿರುವುದು ಕುತೂಹಲ ಮೂಡಿಸಿದೆ.

1 / 6
ಬಾಂಗ್ಲಾದೇಶ ಕ್ರಿಕೆಟ್ ತಂಡದ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್​ರನ್ನು ಐಪಿಎಲ್​ನಿಂದ ಹೊರಹಾಕಿದ್ದಕ್ಕಾಗಿ ಏನೆಲ್ಲ ನಡೆಯಿತು ಎಂಬುದು ನಿಮಗೆಲ್ಲ ಗೊತ್ತಿರುವುದೇ. ಬಿಸಿಸಿಐನ ಈ ನಿಲುವಿನಿಂದ ಕೆರಳಿದ ಬಾಂಗ್ಲಾ ಕ್ರಿಕೆಟ್ ಮಂಡಳಿ ಟಿ20 ವಿಶ್ವಕಪ್​ನಿಂದಲೇ ಹಿಂದೆ ಸರಿಯಿತು. ಇದರಿಂದ ಬಿಸಿಸಿಐಗೆ ನಷ್ಟವಾಗದಿದ್ದರೂ, ಬಾಂಗ್ಲಾದೇಶ ಕ್ರಿಕೆಟ್​ಗೆ ನೂರಾರು ಕೋಟಿ ರೂ.ಗಳ ನಷ್ಟವುಂಟಾಯಿತು.

2 / 6
ವಾಸ್ತವವಾಗಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಬಿಸಿಸಿಐ ಬಾಂಗ್ಲಾದೇಶ ಆಟಗಾರರನ್ನು ಐಪಿಎಲ್​ನಿಂದ ಹೊರಹಾಕಿತ್ತು. ಅದರಂತೆ ದೊಡ್ಡ ಮೊತ್ತಕ್ಕೆ ಕೆಕೆಆರ್ ತಂಡವನ್ನು ಸೇರಿದ್ದ ಮುಸ್ತಾಫಿಜುರ್ ರೆಹಮಾನ್ ಐಪಿಎಲ್​ನಿಂದ ನಿಷೇಧಕ್ಕೊಳಗಾಗಬೇಕಾಯಿತು. ಇದರಿಂದ ದೊಡ್ಡ ವಿವಾದವೇ ಸೃಷ್ಟಿಯಾಗಿತ್ತು.

3 / 6
ಇದೀಗ ಇದೆಲ್ಲದರ ನಡುವೆಯೇ ಯಾವ ಐಪಿಎಲ್ ಫ್ರಾಂಚೈಸಿಗಳಿಂದ ತಿರಸ್ಕೃತಕ್ಕೆ ಒಳಗಾಗಿದ್ದ ಮುಸ್ತಾಫಿಜುರ್ ರೆಹಮಾನ್​ಗೆ ಮತ್ತೆ ಅದೇ ಐಪಿಎಲ್ ಫ್ರಾಂಚೈಸಿಗಳಿಂದ ಬೇಡಿಕೆ ಬಂದಿದೆ. ವಾಸ್ತವವಾಗಿ ಕೆಲವು ಐಪಿಎಲ್ ಫ್ರಾಂಚೈಸಿಗಳು ಈ ವರ್ಷದಿಂದ ದಿ ಹಂಡ್ರೆಂಡ್ ಲೀಗ್​ನಲ್ಲೂ ತಂಡವನ್ನು ಖರೀದಿಸಿವೆ. ಅದರಂತೆ ಇನ್ನೇನು ಕೆಲವೇ ದಿನಗಳಲ್ಲಿ ಈ ಲೀಗ್​ಗಾಗಿ ಹರಾಜು ಕೂಡ ನಡೆಯಲಿದೆ.

4 / 6
ದಿ ಹಂಡ್ರೆಡ್ ಲೀಗ್​ನ ಮೊದಲ ಹರಾಜು ಮಾರ್ಚ್ 11 ಮತ್ತು 12 ರಂದು ಲಂಡನ್‌ನಲ್ಲಿ ನಡೆಯಲಿದೆ. ಮುಸ್ತಾಫಿಜುರ್ ರೆಹಮಾನ್ ಕೂಡ ಈ ಪಂದ್ಯಾವಳಿಗೆ ನೋಂದಾಯಿಸಿಕೊಂಡಿದ್ದಾರೆ. ಹಂಡ್ರೆಡ್ ಹರಾಜಿಗೆ ಆಯ್ಕೆಯಾದ 23 ಬಾಂಗ್ಲಾದೇಶಿ ಆಟಗಾರರಲ್ಲಿ ಮುಸ್ತಾಫಿಜುರ್ ಕೂಡ ಒಬ್ಬರು. ಆದಾಗ್ಯೂ, ಎಲ್ಲಾ ತಂಡಗಳು ಸೇರಿ ರಿಷದ್ ಹುಸೇನ್ ಮತ್ತು ಮುಸ್ತಾಫಿಜುರ್ ರೆಹಮಾನ್ ಅವರನ್ನು ಮಾತ್ರ ಆಯ್ಕೆ ಮಾಡಿಕೊಂಡಿವೆ.

5 / 6
ಮೇಲೆ ಹೇಳಿದಂತೆ ಈ ವರ್ಷ, ಐಪಿಎಲ್ ಮಾಲೀಕರು ಮೊದಲ ಬಾರಿಗೆ ದಿ ಹಂಡ್ರೆಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಂಐ ಲಂಡನ್, ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್, ಸನ್‌ರೈಸರ್ಸ್ ಲೀಡ್ಸ್ ಮತ್ತು ಸದರ್ನ್ ಬ್ರೇವ್ ತಂಡಗಳನ್ನು ಐಪಿಎಲ್ ಮಾಲೀಕರು ಸ್ವಾಧೀನಪಡಿಸಿಕೊಂಡಿದ್ದಾರೆ. ಮುಸ್ತಾಫಿಜುರ್ ರೆಹಮಾನ್ ತಮ್ಮ ಆರಂಭಿಕ ಬೆಲೆಯನ್ನು 100,000 ಪೌಂಡ್‌ಗಳಿಗೆ ನಿಗದಿಪಡಿಸಿದ್ದರೆ, ರಿಷದ್ ಅವರ ಮೂಲ ಬೆಲೆ 75,000 ಪೌಂಡ್‌ಗಳಾಗಿವೆ.

6 / 6
16 ತಂಡಗಳಲ್ಲಿ 200 ಕ್ಕೂ ಹೆಚ್ಚು ಆಟಗಾರರು, ಪುರುಷರು ಮತ್ತು ಮಹಿಳೆಯರು ಸೇರಿದಂತೆ, ದಿ ಹಂಡ್ರೆಡ್ ಹರಾಜಿನಲ್ಲಿ ಭಾಗವಹಿಸಲಿದ್ದಾರೆ. ದಿ ಹಂಡ್ರೆಡ್ ಟೂರ್ನಮೆಂಟ್ ಜುಲೈ 21 ರಂದು ಆರಂಭವಾಗಲಿದ್ದು, ಎಂಐ ಲಂಡನ್ ಮತ್ತು ಸನ್‌ರೈಸರ್ಸ್ ಲೀಡ್ಸ್ ಪರಸ್ಪರ ಮುಖಾಮುಖಿಯಾಗಲಿವೆ. ಟೂರ್ನಮೆಂಟ್ ಫೈನಲ್ ಆಗಸ್ಟ್ 16 ರ ಭಾನುವಾರ ಲಾರ್ಡ್ಸ್‌ನಲ್ಲಿ ನಡೆಯಲಿದ್ದು, ಎಲಿಮಿನೇಟರ್ ಪಂದ್ಯಗಳು ಆಗಸ್ಟ್ 14 ರಂದು ದಿ ಓವಲ್‌ನಲ್ಲಿ ನಡೆಯಲಿವೆ.

Follow Us