Nathan Lyon: ಗೆರೆ ದಾಟದೇ ಹೊಸ ವಿಶ್ವ ದಾಖಲೆ ನಿರ್ಮಿಸಿದ ನಾಥನ್ ಲಿಯಾನ್

| Updated By: ಝಾಹಿರ್ ಯೂಸುಫ್

Updated on: Feb 11, 2023 | 9:22 PM

India vs Australia 1st Test: ನಾಗ್ಪುರದಲ್ಲಿ ನಡೆದ ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂಲಕ ಆಸ್ಟ್ರೇಲಿಯಾ ಸ್ಪಿನ್ನರ್ ನಾಥನ್ ಲಿಯಾನ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

1 / 6
ನಾಗ್ಪುರದಲ್ಲಿ ನಡೆದ ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸ್ಪಿನ್ನರ್ ನಾಥನ್ ಲಿಯಾನ್ 49 ಓವರ್​ ಎಸೆದಿದ್ದರು. ಅಂದರೆ 294 ಎಸೆತಗಳೊಂದಿಗೆ ಇದೀಗ ಆಸೀಸ್ ಸ್ಪಿನ್ನರ್ ಹೊಸ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

2 / 6
ಹೌದು, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಯಾವುದೇ ನೋ ಬಾಲ್ ಎಸೆಯದೇ 30,000 ಚೆಂಡೆಸೆದ ಮೊದಲ ಬೌಲರ್ ಎಂಬ ವಿಶ್ವ ದಾಖಲೆಯು ನಾಥನ್ ಲಿಯಾನ್ ಪಾಲಾಗಿದೆ. ಅಂದರೆ ಟೆಸ್ಟ್ ಕೆರಿಯರ್​ನಲ್ಲಿ ಒಟ್ಟು 218 ಇನಿಂಗ್ಸ್​ನಲ್ಲಿ ಬೌಲ್ ಮಾಡಿರುವ ಲಿಯಾನ್ ಇದುವರೆಗೆ ಒಂದೇ ಒಂದು ನೋಬಾಲ್ ಎಸೆದಿಲ್ಲ ಎಂಬುದೇ ಅಚ್ಚರಿ.

3 / 6
2011 ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್ ಕೆರಿಯರ್ ಆರಂಭಿಸಿದ್ದ ನಾಥನ್ ಇದುವರೆಗೆ 5 ಸಾವಿರಕ್ಕೂ ಅಧಿಕ ಓವರ್ ಎಸೆದಿದ್ದಾರೆ. ಈ ವೇಳೆ ಒಮ್ಮೆಯೂ ಗೆರೆದಾಟದೇ ವಿಶ್ವ ದಾಖಲೆ ಬರೆದಿರುವುದೇ ವಿಶೇಷ.

4 / 6
ಇನ್ನು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಒಂದು ನೋಬಾಲ್ ಎಸೆಯದೇ 100 ಟೆಸ್ಟ್ ಪಂದ್ಯವಾಡಿದ ಏಕೈಕ ಬೌಲರ್ ಎಂಬ ವಿಶ್ವ ದಾಖಲೆ ಕೂಡ ನಾಥನ್ ಲಿಯಾನ್ ಹೆಸರಿನಲ್ಲಿದೆ. ಇದೀಗ 30000 ಸಾವಿರ ಬಾಲ್​ಗಳನ್ನು ಪೂರೈಸುವ ಮೂಲಕ ಹೊಸ ಮೈಲುಗಲ್ಲನ್ನು ದಾಟಿದ್ದಾರೆ.

5 / 6
ಇದುವರೆಗೆ 116 ಟೆಸ್ಟ್ ಪಂದ್ಯಗಳನ್ನಾಡಿರುವ ನಾಥನ್ ಲಿಯಾನ್ 30064 ಎಸೆತಗಳಲ್ಲಿ 14689 ರನ್ ನೀಡಿದ್ದಾರೆ. ಈ ವೇಳೆ 461 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಅತ್ಯಧಿಕ ಟೆಸ್ಟ್ ವಿಕೆಟ್ ಪಡೆದ ವಿಶ್ವದ 8ನೇ ಬೌಲರ್ ಎನಿಸಿಕೊಂಡಿದ್ದಾರೆ.

6 / 6
ಹಾಗೆಯೇ ಟೆಸ್ಟ್ ಕ್ರಿಕೆಟ್​ನಲ್ಲಿ ಶೇನ್ ವಾರ್ನ್​ (708) ಬಳಿಕ ಅತೀ ಹೆಚ್ಚು ವಿಕೆಟ್ ಪಡೆದ ಆಸ್ಟ್ರೇಲಿಯಾ ಸ್ಪಿನ್ನರ್ ಎಂಬ ಹೆಗ್ಗಳಿಕೆಗೂ ನಾಥನ್ ಲಿಯಾನ್ ಪಾತ್ರರಾಗಿದ್ದಾರೆ. ಒಟ್ಟಿನಲ್ಲಿ 5 ಸಾವಿರಕ್ಕೂ ಅಧಿಕ ಓವರ್ ಎಸೆದು ಒಂದೇ ಒಂದು ನೋ ಬಾಲ್ ಮಾಡದಿರುವುದು ಸರ್ವಶ್ರೇಷ್ಠ ಸಾಧನೆ ಎಂದೇ ಹೇಳಬಹುದು.