13 ವರ್ಷಗಳ ಬಳಿಕ ಪ್ಲೇಯಿಂಗ್ ಇಲೆವೆನ್​ನಿಂದ ಹೊರಬಿದ್ದ ನಾಥನ್ ಲಿಯಾನ್

Updated on: Dec 04, 2025 | 12:34 PM

Australia vs England, 2nd Test: ಆಸ್ಟ್ರೇಲಿಯಾ - ಇಂಗ್ಲೆಂಡ್ ನಡುವಣ ಪಿಂಕ್ ಬಾಲ್ ಟೆಸ್ಟ್​ ಪಂದ್ಯದಿಂದ ಆಸೀಸ್ ಸ್ಪಿನ್ನರ್ ನಾಥನ್ ಲಿಯಾನ್ ಹೊರಗುಳಿದಿದ್ದಾರೆ. 2012 ರಿಂದ ತವರಿನಲ್ಲಿ ಸತತ ಪಂದ್ಯಗಳನ್ನಾಡಿದ್ದ ಲಿಯಾನ್ ಅವರನ್ನು ಕೈ ಬಿಟ್ಟು ಈ ಬಾರಿ ಬೌಲಿಂಗ್ ಆಲ್​ರೌಂಡರ್​ಗೆ ಸ್ಥಾನ ನೀಡಿದ್ದಾರೆ.

1 / 5
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ (Australia vs England) ನಡುವಣ ಆ್ಯಶಸ್ ಸರಣಿಯ 2ನೇ ಟೆಸ್ಟ್ ಪಂದ್ಯ ಶುರುವಾಗಿದೆ. ಬ್ರಿಸ್ಬೇನ್​ನ ಗಾಬ್ಬಾ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಸ್ಪಿನ್ನರ್ ನಾಥನ್ ಲಿಯಾನ್ ಕಣಕ್ಕಿಳಿದಿಲ್ಲ ಎಂಬುದೇ ವಿಶೇಷ.

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ (Australia vs England) ನಡುವಣ ಆ್ಯಶಸ್ ಸರಣಿಯ 2ನೇ ಟೆಸ್ಟ್ ಪಂದ್ಯ ಶುರುವಾಗಿದೆ. ಬ್ರಿಸ್ಬೇನ್​ನ ಗಾಬ್ಬಾ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಸ್ಪಿನ್ನರ್ ನಾಥನ್ ಲಿಯಾನ್ ಕಣಕ್ಕಿಳಿದಿಲ್ಲ ಎಂಬುದೇ ವಿಶೇಷ.

2 / 5

ಅಂದರೆ ನಾಥನ್ ಲಿಯಾನ್ ಕಳೆದ 13 ವರ್ಷಗಳಲ್ಲಿ ತವರಿನಲ್ಲಿ ನಡೆದ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಮಿಸ್ ಮಾಡಿಕೊಂಡಿರಲಿಲ್ಲ. 2012 ರಿಂದ ಆಸ್ಟ್ರೇಲಿಯಾ ಟೆಸ್ಟ್ ತಂಡದ ಖಾಯಂ ಸದಸ್ಯರಾಗಿದ್ದ ಲಿಯಾನ್ ತವರಿನಲ್ಲಿ ಸತತವಾಗಿ 69 ಟೆಸ್ಟ್ ಪಂದ್ಯಗಳನ್ನಾಡಿ ಇತಿಹಾಸ ನಿರ್ಮಿಸಿದ್ದಾರೆ.

3 / 5

ಆದರೆ ಇದೀಗ ಬರೋಬ್ಬರಿ 13 ವರ್ಷಗಳ ಬಳಿಕ ನಾಥನ್ ಲಿಯಾನ್ ಅವರನ್ನು ಆಡುವ ಬಳಗದಿಂದ ಕೈ ಬಿಡಲಾಗಿದೆ. ಅವರ ಬದಲಿಗೆ ಅನುಭವಿ ಆಲ್​ರೌಂಡರ್ ಮೈಕೆಲ್ ನೇಸರ್​ಗೆ ಅವಕಾಶ ನೀಡಲಾಗಿದೆ. ಇದರೊಂದಿಗೆ ಕಳೆದ 13 ವರ್ಷಗಳಿಂದ ಸತತ ಪಂದ್ಯಗಳನ್ನಾಡುತ್ತಾ ಬಂದಿದ್ದ ಲಿಯಾನ್ ಅವರ ನಾಗಲೋಟ ಕೂಡ ಕೊನೆಗೊಂಡಿದೆ.

4 / 5

ಆಸ್ಟ್ರೇಲಿಯಾ ಪ್ಲೇಯಿಂಗ್ 11:  ಜೇಕ್ ವೆದರಾಲ್ಡ್ , ಟ್ರಾವಿಸ್ ಹೆಡ್ , ಮಾರ್ನಸ್ ಲ್ಯಾಬುಶೇನ್ , ಸ್ಟೀವ್ ಸ್ಮಿತ್ (ನಾಯಕ) , ಕ್ಯಾಮರೋನ್ ಗ್ರೀನ್ , ಜೋಶ್ ಇಂಗ್ಲಿಸ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಮೈಕೆಲ್ ನೇಸರ್ , ಮಿಚೆಲ್ ಸ್ಟಾರ್ಕ್ , ಸ್ಕಾಟ್ ಬೋಲ್ಯಾಂಡ್ , ಬ್ರೆಂಡನ್ ಡಾಗೆಟ್.

5 / 5

ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ , ಬೆನ್ ಡಕೆಟ್ , ಒಲೀ ಪೋಪ್ , ಜೋ ರೂಟ್ , ಹ್ಯಾರಿ ಬ್ರೂಕ್ , ಬೆನ್ ಸ್ಟೋಕ್ಸ್ (ನಾಯಕ) , ಜೇಮಿ ಸ್ಮಿತ್ (ವಿಕೆಟ್ ಕೀಪರ್) ವಿಲ್ ಜ್ಯಾಕ್ಸ್ , ಗಸ್ ಅಟ್ಕಿನ್ಸನ್ , ಬ್ರೈಡನ್ ಕಾರ್ಸ್ , ಜೋಫ್ರಾ ಆರ್ಚರ್.

Published On - 10:53 am, Thu, 4 December 25

Loading...
Unable to load recommendations.
Follow Us