
ಟಿ20 ವಿಶ್ವಕಪ್ನಲ್ಲಿ ನೇಪಾಳ ತಂಡವು ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ಅದು ಕೂಡ ಇಂಗ್ಲೆಂಡ್ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ನ 5ನೇ ಮ್ಯಾಚ್ನಲ್ಲಿ ನೇಪಾಳ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡದ ಪರ ಜೇಕಬ್ ಬೆಥೆಲ್ (55) ಹಾಗೂ ಹ್ಯಾರಿ ಬ್ರೂಕ್ (53) ಅರ್ಧಶತಕ ಬಾರಿಸಿದ್ದರು. ಈ ಹಾಫ್ ಸೆಂಚುರಿಗಳ ನೆರವಿನೊಂದಿಗೆ ಇಂಗ್ಲೆಂಡ್ ತಂಡ 20 ಓವರ್ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 184 ರನ್ಗಳು.

ಈ ಗುರಿಯನ್ನು ಬೆನ್ನತ್ತಿದ ನೇಪಾಳ ತಂಡವು ಭರ್ಒರಿ ಬ್ಯಾಟಿಂಗ್ ಪ್ರದರ್ಶಿಸಿತು. ಮೊದಲ 10 ಓವರ್ಗಳಲ್ಲಿ 85 ರನ್ ಬಾರಿಸಿದ್ದ ನೇಪಾಳ ತಂಡವು ದ್ವಿತೀಯಾರ್ಧದಲ್ಲಿ ಬರೋಬ್ಬರಿ 95 ರನ್ ಕಲೆಹಾಕಿದ್ದರು. ಈ ಮೂಲಕ 20 ಓವರ್ಗಳಲ್ಲಿ 180 ರನ್ಗಳಿಸಿ 4 ರನ್ಗಳಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡಿತು.

ಈ ಸೋಲಿನ ಹೊರತಾಗಿಯೂ ನೇಪಾಳ ತಂಡದ ಹೆಸರಿಗೆ ಹೊಸ ವಿಶ್ವ ದಾಖಲೆಯೊಂದು ಸೇರ್ಪಡೆಯಾಗಿದೆ. ಅದೇನೆಂದರೆ ಐಸಿಸಿ ಪೂರ್ಣ ಸದಸ್ಯ ರಾಷ್ಟ್ರದ ವಿರುದ್ಧ ಟಿ20 ವಿಶ್ವಕಪ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಅಸೋಸಿಯೇಟ್ ತಂಡವೆಂಬ ಹೆಗ್ಗಳಿಕೆಯನ್ನು ನೇಪಾಳ ತಂಡ ತಮ್ಮದಾಗಿಸಿಕೊಂಡಿದೆ.

ಇದಕ್ಕೂ ಮುನ್ನ ಇಂತಹದೊಂದು ಸಾಧನೆ ಮಾಡಿದ್ದು ಸ್ಕಾಟ್ಲೆಂಡ್. 2024ರ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ 20 ಓವರ್ಗಳಲ್ಲಿ 180 ರನ್ ಕಲೆಹಾಕಿದ್ದರು. ಇದೀಗ ನೇಪಾಳ ತಂಡವು ಇಂಗ್ಲೆಂಡ್ ವಿರುದ್ಧ ಚೇಸಿಂಗ್ ವೇಳೆ 180 ರನ್ಗಳಿಸಿ ಹೊಸ ಇತಿಹಾಸ ನಿರ್ಮಿಸಿದೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಐಸಿಸಿ ಪೂರ್ಣ ಸದಸ್ಯ ತಂಡದ ವಿರುದ್ಧ ಚೇಸಿಂಗ್ ವೇಳೆ ಅತೀ ಹೆಚ್ಚು ರನ್ ಬಾರಿಸಿದ ತಂಡ ಎಂಬ ವಿಶ್ವ ದಾಖಲೆಯನ್ನು ನೇಪಾಳ ತಂಡ ತಮ್ಮದಾಗಿಸಿಕೊಂಡಿದೆ.