ಹಾಗೆಯೇ 154 ಟಿ20 ಪಂದ್ಯಗಳನ್ನಾಡಿರುವ ಜಾರ್ಜ್ ವರ್ಕರ್, 123.57 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ 3480 ರನ್ ಬಾರಿಸಿದ್ದಾರೆ. ಈ ವೇಳೆ ಒಂದು ಶತಕ ಮತ್ತು 18 ಅರ್ಧ ಶತಕಗಳನ್ನು ಸಿಡಿಸಿದ್ದರು. ಇದರ ಜೊತೆಗೆ 34 ವರ್ಷದ ವರ್ಕರ್ ಅವರು ತಮ್ಮ ಆಟದ ವೃತ್ತಿಜೀವನದಲ್ಲಿ 58 ಪ್ರಥಮ ದರ್ಜೆ, 60 ಲಿಸ್ಟ್ ಎ ಮತ್ತು 42 ಟಿ20 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.