ಇದೀಗ ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಯನ್ನು 3-0 ಅಂತರದಿಂದ ಗೆಲ್ಲುವ ಮೂಲಕ ಆಸ್ಟ್ರೇಲಿಯಾ ತಂಡ 100ನೇ ಗೆಲುವು ದಾಖಲಿಸಿದೆ. ಇದುವರೆಗೆ 188 ಟಿ20 ಪಂದ್ಯಗಳನ್ನಾಡಿರುವ ಆಸೀಸ್ ಪಡೆ, ಇದೀಗ ನೂರನೇ ಗೆಲುವು ದಾಖಲಿಸಿ ಟಿ20 ಕ್ರಿಕೆಟ್ನಲ್ಲಿ 100 ಪಂದ್ಯಗಳಲ್ಲಿ ಜಯ ಸಾಧಿಸಿದ ವಿಶ್ವದ 4ನೇ ತಂಡವಾಗಿ ಹೊರಹೊಮ್ಮಿದೆ.