- Kannada News Photo gallery Cricket photos NZ Batting Masterclass: Daryl Mitchell and Glenn Phillips Smash Hundreds vs India
IND vs NZ: ಟೀಂ ಇಂಡಿಯಾ ವಿರುದ್ಧ ಚೊಚ್ಚಲ ಶತಕ ಬಾರಿಸಿದ ಗ್ಲೆನ್ ಫಿಲಿಪ್ಸ್
India vs New Zealand ODI: ಭಾರತ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ, ನ್ಯೂಜಿಲೆಂಡ್‌ನ ಡ್ಯಾರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಭರ್ಜರಿ ಶತಕಗಳನ್ನು ಬಾರಿಸಿದರು. ಸಂಕಷ್ಟದಲ್ಲಿದ್ದಾಗ ಜೊತೆಯಾದ ಈ ಜೋಡಿ, ಇಂದೋರ್‌ನಲ್ಲಿ 219 ರನ್‌ಗಳ ಅತಿ ದೊಡ್ಡ ಜೊತೆಯಾಟ ನಡೆಸಿತು. ಮಿಚೆಲ್ ಸತತ ಎರಡನೇ ಶತಕ ಗಳಿಸಿದರೆ, ಫಿಲಿಪ್ಸ್ ತಮ್ಮ ODI ವೃತ್ತಿಜೀವನದ ಎರಡನೇ ಹಾಗೂ ಭಾರತ ವಿರುದ್ಧದ ಮೊದಲ ಶತಕ ಪೂರೈಸಿ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು.
Updated on: Jan 18, 2026 | 5:58 PM

ಭಾರತ ಪ್ರವಾಸದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳು ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರೆಸಿದ್ದು, ಮೂರನೇ ಪಂದ್ಯದಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾರೆ. ಇಂದೋರ್‌ನಲ್ಲಿ ನಡೆದ ಸರಣಿಯ ಅಂತಿಮ ಪಂದ್ಯದಲ್ಲಿ, ಡ್ಯಾರಿಲ್ ಮಿಚೆಲ್ ಸತತ ಎರಡನೇ ಶತಕ ಬಾರಿಸಿದರೆ, ಗ್ಲೆನ್ ಫಿಲಿಪ್ಸ್ ಕೂಡ ತಮ್ಮ ಏಕದಿನ ವೃತ್ತಿಜೀವನದ ಎರಡನೇ ಶತಕ ಬಾರಿಸಿದ್ದಾರೆ.

ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಪರ ಡ್ಯಾರಿಲ್ ಮಿಚೆಲ್ ಮತ್ತು ಫಿಲಿಪ್ಸ್ ಸ್ಮರಣೀಯ ಜೊತೆಯಾಟ ಕಟ್ಟಿದರು. ತಂಡ ಸಂಕಷ್ಟದಲ್ಲಿದ್ದಾಗ, ಸ್ಫೋಟಕ ಇನ್ನಿಂಗ್ಸ್ ಆಡಿದ ಈ ಜೋಡಿ ಶತಕದ ಇನ್ನಿಂಗ್ಸ್ ಆಡಿತು. ಅದರಲ್ಲೂ ಭಾರತದ ವಿರುದ್ಧ ಚೊಚ್ಚಲ ಶತಕ ಬಾರಿಸಿದ ಗ್ಲೆನ್ ಫಿಲಿಪ್ಸ್ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು.

ಜನವರಿ 18 ರ ಭಾನುವಾರ ನಡೆದ ಸರಣಿ ನಿರ್ಣಾಯಕ ಪಂದ್ಯದಲ್ಲಿ, ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಿತು ಆದರೆ ಕೇವಲ 58 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಆ ಸಮಯದಲ್ಲಿ, ಡ್ಯಾರಿಲ್ ಮಿಚೆಲ್‌ಗೆ ಸಾಥ್ ನೀಡಿದ ಫಿಲಿಪ್ಸ್ ತಂಡವನ್ನು ಸಂಕಷ್ಟದಿಂದ ಹೊರತಂದರು.

ಸಾಮಾನ್ಯವಾಗಿ ಸ್ಫೋಟಕ ಬ್ಯಾಟಿಂಗ್ ಮತ್ತು ಫಿನಿಶಿಂಗ್‌ಗೆ ಹೆಸರುವಾಸಿಯಾಗಿದ್ದ ಫಿಲಿಪ್ಸ್ ಎಚ್ಚರಿಕೆಯಿಂದ ಆಟವಾಡಿ ತಂಡದ ಇನ್ನಿಂಗ್ಸ್ ಸ್ಥಿರಗೊಳಿಸಿದರು. ಮಾತ್ರವಲ್ಲದೆ ಅವರ ವೃತ್ತಿಜೀವನದ ಆರನೇ ಅರ್ಧಶತಕವನ್ನು ಪೂರ್ಣಗೊಳಿಸಿದರು. ಈ ಮೂಲಕ ಭಾರತದ ವಿರುದ್ಧ ತಮ್ಮ ಮೊದಲ ಅರ್ಧಶತಕವನ್ನು ಪೂರೈಸಿದರು.

ಅರ್ಧಶತಕ ಪೂರೈಸಲು 53 ಎಸೆತಗಳನ್ನು ತೆಗೆದುಕೊಂಡ ಫಿಲಿಪ್ಸ್, ಮುಂದಿನ 30 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ತಮ್ಮ ಇನ್ನಿಂಗ್ಸ್‌ನ 83 ನೇ ಎಸೆತದಲ್ಲಿ ಸಿಂಗಲ್ ಗಳಿಸಿ, ಫಿಲಿಪ್ಸ್ ತಮ್ಮ ಸ್ಮರಣೀಯ ಶತಕವನ್ನು ಪೂರೈಸಿದರು. ಇದು ಅವರ ಏಕದಿನ ವೃತ್ತಿಜೀವನದಲ್ಲಿ ಎರಡನೇ ಶತಕವಾಗುದೆ. ಮಾತ್ರವಲ್ಲದೆ ಇದು 13 ಇನ್ನಿಂಗ್ಸ್‌ಗಳಲ್ಲಿ ಭಾರತ ವಿರುದ್ಧ ಅವರ ಮೊದಲ ಶತಕವಾಗಿದೆ.

ಫಿಲಿಪ್ಸ್, ಡ್ಯಾರಿಲ್ ಮಿಚೆಲ್ ಜೊತೆಗೂಡಿ ನಾಲ್ಕನೇ ವಿಕೆಟ್‌ಗೆ 219 ರನ್‌ಗಳ ಅದ್ಭುತ ಪಾಲುದಾರಿಕೆಯನ್ನು ಹಂಚಿಕೊಂಡರು. ಮಿಚೆಲ್ ಕೂಡ ಅದ್ಭುತ ಶತಕ ಗಳಿಸಿದರು, ಇದು ಸರಣಿಯಲ್ಲಿ ಅವರ ಸತತ ಎರಡನೇ ಶತಕವಾಗಿತ್ತು. 44 ನೇ ಓವರ್‌ನಲ್ಲಿ ಅರ್ಶ್‌ದೀಪ್ ಸಿಂಗ್ ಫಿಲಿಪ್ಸ್ ಅವರನ್ನು ಔಟ್ ಮಾಡುವ ಮೂಲಕ ಈ ಪಾಲುದಾರಿಕೆ ಮುರಿದುಬಿತ್ತು. ಫಿಲಿಪ್ಸ್ ಕೇವಲ 88 ಎಸೆತಗಳಲ್ಲಿ ಒಂಬತ್ತು ಬೌಂಡರಿಗಳು ಮತ್ತು ಮೂರು ಸಿಕ್ಸರ್‌ಗಳನ್ನು ಒಳಗೊಂಡಂತೆ 106 ರನ್ ಗಳಿಸಿದರು. ಫಿಲಿಪ್ಸ್ ಔಟಾದ ನಂತರ, ಮಿಚೆಲ್ ಕೂಡ ಮುಂದಿನ ಓವರ್‌ನ ಮೊದಲ ಎಸೆತದಲ್ಲಿ 137 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.
