‘ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ’: ‘ರಾವಲ್ಪಿಂಡಿ ಎಕ್ಸ್‌ಪ್ರೆಸ್’ ವೇಗಕ್ಕೆ ಬ್ರೇಕ್ ಹಾಕಿದ ಶೋಯೆಬ್ ಅಖ್ತರ್

| Updated By: ಪೃಥ್ವಿಶಂಕರ

Updated on: Jan 22, 2023 | 9:12 AM

Shoaib Akhtar Biopic: ತನ್ನ ಬಯೋಪಿಕ್ ನಿರ್ಮಿಸುತ್ತಿರುವ ಚಿತ್ರ ತಂಡದೊಂದಿಗೆ ಎಲ್ಲಾ ರೀತಿಯ ಸಂಬಂಧಗಳನ್ನು ಕಡಿದುಕೊಂಡಿದ್ದು, ಈ ಚಿತ್ರದಲ್ಲಿ ನನ್ನ ಹೆಸರು ಅಥವಾ ನನ್ನ ಬದುಕಿಗೆ ಸಂಬಂಧಿಸಿದ ಯಾವುದೇ ಘಟನಾವಳಿಗಳನ್ನು ಬಳಸುವುದನ್ನು ಮುಂದುವರೆಸಿದರೆ, ನಿರ್ಮಾಪಕರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

1 / 6
ಪಾಕ್ ಕ್ರಿಕೆಟ್​ನ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ತಮ್ಮ ಜೀವನಚರಿತ್ರೆ ‘ರಾವಲ್ಪಿಂಡಿ ಎಕ್ಸ್‌ಪ್ರೆಸ್’ ಚಿತ್ರ ತಂಡದೊಂದಿಗೆ ಸಂಬಂಧ ಕಡಿತಗೊಳಿಸಿಕೊಂಡಿರುವ ಶಾಕಿಂಗ್ ಸುದ್ದಿಯೊಂದನ್ನು ಹೊರಹಾಕಿದ್ದಾರೆ.

2 / 6
ಕಳೆದ ವರ್ಷ ಜುಲೈನಲ್ಲಿ ಸ್ವತಃ ಅಖ್ತರ್ ಅವರೇ ಚಿತ್ರದ ಮೋಷನ್ ಪೋಸ್ಟರನ್ನು ಬಿಡುಗಡೆಗೊಳಿಸಿದಲ್ಲದೆ, ಮುಂದಿನ ವರ್ಷ ಅಂದರೆ, 2023 ರಲ್ಲಿ ನವೆಂಬರ್ 13 ರಂದು ಚಿತ್ರ ಬಿಡುಗಡೆಯಾಗುವ ಬಗ್ಗೆ ಮಾಹಿತಿ ನೀಡಿದ್ದರು.

3 / 6
ಆದರೆ ಇದೀಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಾಕಿರುವ ಅಖ್ತರ್, ತನ್ನ ಬಯೋಪಿಕ್ ನಿರ್ಮಿಸುತ್ತಿರುವ ಚಿತ್ರ ತಂಡದೊಂದಿಗೆ ಎಲ್ಲಾ ರೀತಿಯ ಸಂಬಂಧಗಳನ್ನು ಕಡಿದುಕೊಂಡಿದ್ದು, ಈ ಚಿತ್ರದಲ್ಲಿ ನನ್ನ ಹೆಸರು ಅಥವಾ ನನ್ನ ಬದುಕಿಗೆ ಸಂಬಂಧಿಸಿದ ಯಾವುದೇ ಘಟನಾವಳಿಗಳನ್ನು ಬಳಸುವುದನ್ನು ಮುಂದುವರೆಸಿದರೆ, ನಿರ್ಮಾಪಕರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

4 / 6
ಇನ್ನು ಟ್ವೀಟ್​ನಲ್ಲಿ ತಮ್ಮ ಅಳಲನ್ನು ತೊಡಿಕೊಂಡಿರುವ ಅಖ್ತರ್, "ಖಂಡಿತವಾಗಿಯೂ, ಇದು ನನ್ನ ಕನಸಿನ ಯೋಜನೆಯಾಗಿತ್ತು. ನಾನು ಅನೇಕ ವಿಷಯಗಳನ್ನು ನಿರ್ಬಂಧಿಸಲು ಪ್ರಯತ್ನಿಸಿದೆ. ದುರದೃಷ್ಟವಶಾತ್, ನನ್ನ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ. ಭಿನ್ನಾಭಿಪ್ರಾಯಗಳನ್ನು ಸೌಹಾರ್ದಯುತವಾಗಿ ಪರಿಹರಿಸುವಲ್ಲಿ ವಿಫಲರಾಗಿದ್ದು, ನಿರಂತರ ಒಪ್ಪಂದದ ಉಲ್ಲಂಘನೆಗಳು ಅಂತಿಮವಾಗಿ ನಾನು ಚಿತ್ರ ತಂಡದೊಂದಿಗೆ ಸಂಬಂಧವನ್ನು ಕಡಿತಗೊಳಿಸುವಂತೆ ಮಾಡಿದೆ ಎಂದು ಅಖ್ತರ್ ಬರೆದುಕೊಂಡಿದ್ದಾರೆ.

5 / 6
ಪಾಕ್ ಪರ 46 ಟೆಸ್ಟ್‌, 163 ಏಕದಿನ ಮತ್ತು 15 ಟಿ20 ಪಂದ್ಯಗಳನ್ನಾಡಿರುವ ಅಖ್ತರ್, ಕ್ರಮವಾಗಿ ಮೂರು ಸ್ವರೂಪಗಳಲ್ಲಿ 178, 247 ಮತ್ತು 19 ವಿಕೆಟ್‌ಗಳನ್ನು ಪಡೆದಿದ್ದಾರೆ. ತನ್ನ ವೇಗದ ಎಸೆತದಿಂದಲೇ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದ ಅಖ್ತರ್, ಬರೋಬ್ಬರಿ 161 ಕಿ. ಮೀ ವೇಗದಲ್ಲಿ ಬೌಲಿಂಗ್ ಮಾಡಿ ದಾಖಲೆಯನ್ನೂ ಸೃಷ್ಟಿಸಿದ್ದಾರೆ.

6 / 6
ಶೋಯೆಬ್ ಅಖ್ತರ್ ಅವರ ಜೀವನ ಚರಿತ್ರೆಯನ್ನು ಮುಹಮ್ಮದ್ ಫರಾಜ್ ಕೈಸರ್ ನಿರ್ದೇಶಿಸುತ್ತಿದ್ದು, ಈ ಹಿಂದೆ ನನ್ನ ಬಯೋಪಿಕ್​ನಲ್ಲಿ ಸಲ್ಮಾನ್​ ಖಾನ್ ನಟಿಸಬೇಕೆಂದು ಅಖ್ತರ್ ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿದ್ದರು.

Published On - 9:12 am, Sun, 22 January 23