AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿ20 ವಿಶ್ವಕಪ್​ಗೆ ಬಲಿಷ್ಠ ಪಾಕಿಸ್ತಾನ್ ತಂಡ ಪ್ರಕಟ

T20 World Cup 2026 Pakistan Squad : ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್ 2026 ರಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ. ಈ 20 ತಂಡಗಳನ್ನು ನಾಲ್ಕು ಗ್ರೂಪ್​ಗಳಾಗಿ ವಿಂಗಡಿಸಲಾಗಿದೆ. ಗ್ರೂಪ್-1 ರಲ್ಲಿ ಸ್ಥಾನ ಪಡೆದಿರುವ ಪಾಕಿಸ್ತಾನ್ ತಂಡವು ಇದೀಗ ಬಲಿಷ್ಠ ಪಡೆಯನ್ನು ಘೋಷಿಸಿದೆ.

ಝಾಹಿರ್ ಯೂಸುಫ್
|

Updated on: Jan 25, 2026 | 2:23 PM

Share
T20 World Cup 2026: ಟಿ20 ವಿಶ್ವಕಪ್​ಗಾಗಿ ಪಾಕಿಸ್ತಾನ್ ತಂಡವನ್ನು ಘೋಷಿಸಲಾಗಿದೆ. 15 ಸದಸ್ಯರುಗಳ ಈ ತಂಡವನ್ನು ಸಲ್ಮಾನ್ ಅಲಿ ಅಘಾ ಮುನ್ನಡೆಸಲಿದ್ದಾರೆ. ಇನ್ನು ಈ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಕಾಣಿಸಿಕೊಂಡಿದೆ. ಅದರಲ್ಲೂ ಮುಂಬರುವ ಟಿ20 ವಿಶ್ವಕಪ್​ಗೆ ಬಾಬರ್ ಆಝಂ ಅವರನ್ನು ಆಯ್ಕೆ ಮಾಡಲಾಗಿದೆ.

1 / 5
ಬಾಬರ್ ಆಝಂ ಅಲ್ಲದೆ, ಪ್ರಮುಖ ವೇಗಿಯಾಗಿ ಶಾಹೀನ್ ಶಾ ಅಫ್ರಿದಿ ಕೂಡ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಆರಂಭಿಕ ದಾಂಡಿಗರಾಗಿ ಸೈಮ್ ಅಯ್ಯೂಬ್ ಹಾಗೂ ಸಾಹಿಬ್​ಝಾದ ಫರ್ಹಾನ್ ಅವರನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ ಅನುಭವಿ ದಾಂಡಿಗ ಫಖರ್ ಝಮಾನ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ.

2 / 5
ಇವರೊಂದಿಗೆ ಆಲ್​ರೌಂಡರ್​ಗಳಾಗಿ ಮೊಹಮ್ಮದ್ ನವಾಝ್, ಶಾದಾಬ್ ಖಾನ್, ಫಹೀಮ್ ಅಶ್ರಫ್ ತಂಡದಲ್ಲಿದ್ದಾರೆ. ಹಾಗೆಯೇ ವೇಗಿಗಳಾಗಿ ನಸೀಮ್ ಶಾ ಇದ್ದರೆ ಪ್ರಮುಖ ಸ್ಪಿನ್ನರ್​ ಆಗಿ ಅಬ್ರಾರ್ ಅಹ್ಮದ್ 15 ಸದಸ್ಯರುಗಳ ಬಳಗದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

3 / 5
ಇದಾಗ್ಯೂ ಈ ತಂಡದಲ್ಲಿ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಝ್ವಾನ್​​ಗೆ ಸ್ಥಾನ ಲಭಿಸಿಲ್ಲ. ಹಾಗೆಯೇ ಪ್ರಮುಖ ವೇಗಿಯಾಗಿದ್ದ ಹ್ಯಾರಿಸ್ ರೌಫ್​ರನ್ನು ಕೂಡ ಈ ಬಾರಿ ತಂಡಕ್ಕೆ ಆಯ್ಕೆ ಮಾಡಿಲ್ಲ. ಅದರಂತೆ ಟಿ20 ವಿಶ್ವಕಪ್​ಗೆ ಪಾಕಿಸ್ತಾನ್ ತಂಡ ಈ ಕೆಳಗಿನಂತಿದೆ...

4 / 5
ಟಿ20 ವಿಶ್ವಕಪ್​ಗೆ ಪಾಕಿಸ್ತಾನ್ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಬಾಬರ್ ಆಝಂ, ಫಹೀಮ್ ಅಶ್ರಫ್, ಫಖರ್ ಝಮಾನ್, ಖ್ವಾಜಾ ಮೊಹಮ್ಮದ್ ನಫಾಯ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಝ್, ಮೊಹಮ್ಮದ್ ಸಲ್ಮಾನ್ ಮಿರ್ಝ, ನಸೀಮ್ ಶಾ, ಸಾಹಿಬ್​ಝಾದ ಫರ್ಹಾನ್ (ವಿಕೆಟ್ ಕೀಪರ್), ಸೈಮ್ ಅಯ್ಯೂಬ್, ಶಾಹೀನ್ ಶಾ ಅಫ್ರಿದಿ, ಉಸ್ಮಾನ್ ತಾರಿಖ್, ಶಾದಾಬ್​ ಖಾನ್, ಉಸ್ಮಾನ್ ಖಾನ್ (ವಿಕೆಟ್ ಕೀಪರ್).

5 / 5