Sign In

By signing in or creating an account, you agree with Associated Broadcasting Company's Terms & Conditions and Privacy Policy.

4,4,4,4,4,4: ಒಂದೇ ಓವರ್​ನಲ್ಲಿ 6 ಫೋರ್: ಆದರೂ ಕೈ ತಪ್ಪಿದ ವಿಶ್ವ ದಾಖಲೆ

Sri Lanka vs West Indies: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 20 ಓವರ್​ಗಳಲ್ಲಿ 162 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು 89 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಲಂಕಾ ಪಡೆ 73 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಝಾಹಿರ್ ಯೂಸುಫ್
|

Updated on:Oct 16, 2024 | 12:32 PM

ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ದಾಂಡಿಗ ಪಾತುಮ್ ನಿಸ್ಸಂಕಾ ಬ್ಯಾಕ್ ಟು ಬ್ಯಾಕ್ ಫೋರ್​ಗಳನ್ನು ಬಾರಿಸಿ ಅಬ್ಬರಿಸಿದ್ದಾರೆ. ಇದಾಗ್ಯೂ ಈ ಫೋರ್​ಗಳು ವಿಶ್ವ ದಾಖಲೆ ಪಟ್ಟಿಗೆ ಸೇರ್ಪಡೆಯಾಗಿಲ್ಲ ಎಂಬುದು ವಿಶೇಷ. ದಂಬುಲ್ಲಾದ ರಣ್​ಗಿರಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ಮೊದಲು ಬ್ಯಾಟ್ ಮಾಡಿತು.

1 / 6
ಶ್ರೀಲಂಕಾ ಪರ ಇನಿಂಗ್ಸ್ ಆರಂಭಿಸಿದ ಪಾತುಮ್ ನಿಸ್ಸಂಕಾ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ್ದರು. ಅದರಲ್ಲೂ ಶಮರ್ ಜೋಸೆಫ್ ಎಸೆದ 4ನೇ ಓವರ್​ನಲ್ಲಿ ಸತತ ಬೌಂಡರಿಗಳೊಂದಿಗೆ ನಿಸ್ಸಂಕಾ ಒಟ್ಟು 25 ರನ್​ಗಳನ್ನು ಕಲೆಹಾಕಿದ್ದರು.

2 / 6
ಆದರೆ ಒಂದೇ ಓವರ್​ನಲ್ಲಿ 6 ಫೋರ್​ಗಳು ಮೂಡಿಬಂದಿರೂ ಇದು ದಾಖಲೆ ಪಟ್ಟಿಗೆ ಸೇರ್ಪಡೆಯಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಪಾತುಮ್ ನಿಸ್ಸಂಕಾ ಬಾರಿಸಿದ ಮೊದಲ ಫೋರ್ ಲೆಗ್ ಬೈಸ್ ಆಗಿರುವುದು. ಅಂದರೆ ಶಮರ್ ಜೋಸೆಫ್ ಎಸೆದ 4ನೇ ಓವರ್​ನ ಮೊದಲ ಎಸೆತವು ಪಾತುಮ್ ನಿಸ್ಸಂಕಾ ಅವರ ಕಾಲಿಗೆ ತಾಗಿ ಫೋರ್ ಆಗಿತ್ತು.

3 / 6
ಇನ್ನು ಎರಡನೇ ಎಸೆತದಲ್ಲಿ ಬ್ಯಾಟ್ ಮೂಲಕವೇ ಫೋರ್ ಬಾರಿಸಿದರು. ಮೂರನೇ ಎಸೆತವು ವೈಡ್. ಮರು ಎಸೆತದಲ್ಲಿ ಫೋರ್. ಇನ್ನುಳಿದ ಮೂರು ಬಾಲ್​ಗಳಲ್ಲೂ ಪಾತುಮ್ ನಿಸ್ಸಂಕಾ ಬ್ಯಾಕ್ ಟು ಬ್ಯಾಕ್ ಬೌಂಡರಿ ಸಿಡಿಸಿದರು. ಈ ಮೂಲಕ ಶಮರ್ ಜೋಸೆಫ್ ಓವರ್​ನಲ್ಲಿ ಒಟ್ಟು 25 ರನ್ ಕಲೆಹಾಕಿದರು. ಅತ್ತ ಮೊದಲ ಫೋರ್​ ಲೆಗ್ ಬೈಸ್ ಆದ ಕಾರಣ ಟಿ20 ಕ್ರಿಕೆಟ್​ನಲ್ಲಿ ಒಂದೇ ಓವರ್​ನಲ್ಲಿ 6 ಫೋರ್​ ಬಾರಿಸಿದ ವಿಶ್ವ ದಾಖಲೆ ಕೂಡ ನಿಸ್ಸಂಕಾ ಅವರ ಕೈ ತಪ್ಪಿತು.

4 / 6
ಕ್ರಿಕೆಟ್ ಇತಿಹಾಸದಲ್ಲಿ 6 ಬ್ಯಾಟರ್​ಗಳು ಮಾತ್ರ ಒಂದೇ ಓವರ್​ನಲ್ಲಿ 6 ಫೋರ್​ಗಳನ್ನು ಬಾರಿಸಿದ್ದಾರೆ. ಅವರೆಂದರೆ ಸಂದೀಪ್ ಪಾಟೀಲ್ (ಟೆಸ್ಟ್), ಕ್ರಿಸ್ ಗೇಲ್ (ಟೆಸ್ಟ್), ಅಜಿಂಕ್ಯ ರಹಾನೆ (ಐಪಿಎಲ್), ತಿಲಕರತ್ನೆ ದಿಲ್ಶಾನ್ (ಏಕದಿನ), ರಾಮನರೇಶ್ ಸರವಣ್ (ಟೆಸ್ಟ್) ಮತ್ತು ಪೃಥ್ವಿ ಶಾ (ಐಪಿಎಲ್).

5 / 6
ಒಂದು ವೇಳೆ ಶಮರ್ ಜೋಸೆಫ್ ಎಸೆತದ ಮೊದಲ ಬೌಂಡರಿ ಲೆಗ್ ಬೈಸ್ ಆಗಿರದಿದ್ದರೆ, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಸತತ 6 ಫೋರ್​ಗಳನ್ನು ಬಾರಿಸಿದ ವಿಶ್ವ ದಾಖಲೆ ಪಾತುಮ್ ನಿಸ್ಸಂಕಾ ಪಾಲಾಗುತ್ತಿತ್ತು. ಆದರೆ ದುರಾದೃಷ್ಟ ಲಂಕಾ ಬ್ಯಾಟರ್​ಗೆ ಒಂದೇ ಓವರ್​ನಲ್ಲಿ 6 ಫೋರ್ ಸಿಕ್ಕರೂ, ವಿಶ್ವ ದಾಖಲೆ ಸಿಗಲಿಲ್ಲ.

6 / 6

Published On - 12:30 pm, Wed, 16 October 24

Follow us
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ

ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ

ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ

ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ

ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ

ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ

ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್

ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ

ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ