Ranji Trophy: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 63ನೇ ಶತಕ ಸಿಡಿಸಿದ ಚೇತೇಶ್ವರ ಪೂಜಾರ..!

Updated on: Feb 17, 2024 | 6:36 PM

Cheteshwar Pujara: ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿ ಮಣಿಪುರ ವಿರುದ್ಧದ ಎಲೈಟ್ ಗ್ರೂಪ್ ಎ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಮ್ಮ 63ನೇ ಶತಕ ಸಿಡಿಸಿದ್ದಾರೆ.

1 / 7
ಟೀಂ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ದೇಶೀ ಟೂರ್ನಿ ರಣಜಿ ಟ್ರೋಫಿಯಲ್ಲಿ ತಮ್ಮ ಶತಕದ ಅಬ್ಬರವನ್ನು ಮುಂದುವರೆಸಿದ್ದಾರೆ. ಮಣಿಪುರ ವಿರುದ್ಧ ನಡೆಯುತ್ತಿರುವ ಎಲೈಟ್ ಗ್ರೂಪ್ ಎ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಮ್ಮ 63ನೇ ಶತಕ ಸಿಡಿಸಿದರು.

ಟೀಂ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ದೇಶೀ ಟೂರ್ನಿ ರಣಜಿ ಟ್ರೋಫಿಯಲ್ಲಿ ತಮ್ಮ ಶತಕದ ಅಬ್ಬರವನ್ನು ಮುಂದುವರೆಸಿದ್ದಾರೆ. ಮಣಿಪುರ ವಿರುದ್ಧ ನಡೆಯುತ್ತಿರುವ ಎಲೈಟ್ ಗ್ರೂಪ್ ಎ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಮ್ಮ 63ನೇ ಶತಕ ಸಿಡಿಸಿದರು.

2 / 7

ಭಾಝ್ ಬಾಲ್ ಮಾದರಿಯಲ್ಲಿ ಬ್ಯಾಟ್ ಬೀಸಿದ ಚೇತೇಶ್ವರ ಪೂಜಾರ ಕೇವಲ 102 ಎಸೆತಗಳಲ್ಲಿ ಶತಕ ಪೂರೈಸಿದರು. ಆದರೆ ಶತಕದ ನಂತರ ಪೂಜಾರ ಹೆಚ್ಚು ಹೊತ್ತು ಮೈದಾನದಲ್ಲಿ ಉಳಿಯಲು ಸಾಧ್ಯವಾಗಲಿಲ್ಲ.

3 / 7

ಅಂತಿಮವಾಗಿ ತಮ್ಮ ಇನ್ನಿಂಗ್ಸ್​ನಲ್ಲಿ 105 ಎಸೆತಗಳನ್ನು ಎದುರಿಸಿದ ಪೂಜಾರ 1 ಸಿಕ್ಸರ್ ಹಾಗೂ 12 ಬೌಂಡರಿಗಳ ನೆರವಿನಿಂದ 108 ರನ್ ಗಳಿಸಿದರು. ಇದು ಈ ರಣಜಿ ಸೀಸನ್​ನಲ್ಲಿ ಪೂಜಾರ ಅವರ ಮೂರನೇ ಶತಕವಾಗಿತ್ತು.

4 / 7

ಪೂಜಾರ ಈ ಹಿಂದೆ ಜಾರ್ಖಂಡ್ ವಿರುದ್ಧದ ರಣಜಿ ಪಂದ್ಯದಲ್ಲಿ 243 ​​ರನ್​ಗಳ ದ್ವಿಶತಕದ ಇನ್ನಿಂಗ್ಸ್ ಆಡಿದ್ದರೆ, ಆ ನಂತರ ರಾಜಸ್ಥಾನ ವಿರುದ್ಧ 110 ರನ್​ ಬಾರಿಸಿದ್ದರು.

5 / 7

ಈ ಬಾರಿಯ ರಣಜಿ ಸೀಸನ್​ನಲ್ಲಿ ಪೂಜಾರ ಇದುವರೆಗೆ 243*(356), 49(100), 43(77), 43(105), 66(137), 91(133), 3(16), 0(6), 110(230), 25 (60) ಮತ್ತು 108 (105) ರನ್ ಕಲೆಹಾಕಿದ್ದಾರೆ.

6 / 7

ಏತನ್ಮಧ್ಯೆ ಮಣಿಪುರ ವಿರುದ್ಧ ಚೇತೇಶ್ವರ ಪೂಜಾರ ಹೊರತುಪಡಿಸಿ, ನಾಯಕ ಅರ್ಪಿತ್ ವಾಸವಾಡ 148 ರನ್ ಕಲೆಹಾಕಿದರು. ಅರ್ಪಿತ್ ತಮ್ಮ ಈ ಇನ್ನಿಂಗ್ಸ್‌ನಲ್ಲಿ 197 ಎಸೆತಗಳನ್ನು ಎದುರಿಸಿ 1 ಸಿಕ್ಸರ್ ಮತ್ತು 18 ಬೌಂಡರಿಗಳನ್ನು ಬಾರಿಸಿದರು.

7 / 7

ಈ ಇಬ್ಬರಲ್ಲದೆ ಪ್ರೇರಕ್ ಮಂಕಡ್ ಕೂಡ 173 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಪ್ರರೆಕ್ ಅವರ ಇನ್ನಿಂಗ್ಸ್‌ನಲ್ಲಿ 19 ಬೌಂಡರಿ ಮತ್ತು 1 ಸಿಕ್ಸರ್ ಸೇರಿದ್ದವು.

Loading...
Unable to load recommendations.
Follow Us