ಆ ಒಂದು ಯೂಟ್ಯೂಬ್ ವಿಡಿಯೋ ಅಶ್ವಿನ್ ಐಪಿಎಲ್ ​ವೃತ್ತಿಜೀವನಕ್ಕೆ ಮುಳುವಾಯ್ತ?

Updated on: Aug 27, 2025 | 7:55 PM

Ravi Ashwin IPL retirement: ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ರವಿಚಂದ್ರನ್ ಅಶ್ವಿನ್ ಅವರು ಐಪಿಎಲ್‌ನಿಂದಲೂ ನಿವೃತ್ತಿ ಘೋಷಿಸಿದ್ದಾರೆ. ಇತರ ಟಿ20 ಲೀಗ್‌ಗಳಲ್ಲಿ ಆಡುವ ಆಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಆದರೆ, ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗಿನ ವಿವಾದವೂ ನಿವೃತ್ತಿಗೆ ಕಾರಣವೆಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಅಶ್ವಿನ್ ಅವರ ಯೂಟ್ಯೂಬ್ ವಿಡಿಯೋದಲ್ಲಿ ಸಿಎಸ್‌ಕೆ ಬಗ್ಗೆ ಮಾಡಿದ್ದ ಹೇಳಿಕೆ ವೈರಲ್ ಆಗಿತ್ತು.

1 / 6
ಕಳೆದ ವರ್ಷದ ಅಂತ್ಯದಲ್ಲಿ ಅಂದರೆ ಡಿಸೆಂಬರ್ ತಿಂಗಳಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇದೀಗ ಐಪಿಎಲ್​ಗೆ ಗುಡ್​ ಬೈ ಹೇಳಿದ್ದಾರೆ. ಅಚ್ಚರಿಯ ಸಂಗತಿಯೆಂದರೆ ಅಶ್ವಿನ್ ಯಾವ ತಂಡದ ಪರ ಐಪಿಎಲ್ ವೃತ್ತಿಜೀವನವನ್ನು ಆರಂಭಿಸಿದ್ದರೋ ಅದೇ ತಂಡದಿಂದಲೇ ಐಪಿಎಲ್​ಗೆ ನಿವೃತ್ತಿ ಘೋಷಿಸಿದ್ದಾರೆ.

2 / 6
ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಬಳಿಕ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದ ಅಶ್ವಿನ್​ಗೆ ಕಳೆದ ಆವೃತ್ತಿ ಹೇಳಿಕೊಳ್ಳುವಂತಹ ಯಶಸ್ಸು ನೀಡಿರಲಿಲ್ಲ. ಬೌಲಿಂಗ್ ಜೊತೆಗೆ ಬ್ಯಾಟಿಂಗ್​ನಲ್ಲೂ ಅಶ್ವಿನ್ ಪರಿಣಾಮ ಬೀರಲಿಲ್ಲ. ಹೀಗಾಗಿ ಅವರನ್ನು ಮುಂದಿನ ಆವೃತ್ತಿಗೂ ಮುನ್ನ ತಂಡದಿಂದ ಕೈಬಿಡುವುದು ಖಚಿತ ಎಂಬ ಮಾತು ಕೇಳಿಬಂದಿತ್ತು.

3 / 6
ಇದೆಲ್ಲದರ ನಡುವೆ ಅಶ್ವಿನ್ ಇದ್ದಕ್ಕಿದ್ದಂತೆ ಐಪಿಎಲ್​ಗೆ ವಿದಾಯ ಹೇಳಲು ಏನು ಕಾರಣವಿರಬಹುದು ಎಂಬುದು ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆಯಾಗಿದೆ. ಇದಕ್ಕೆ ಅಶ್ವಿನ್ ಅವರೇ ಉತ್ತರಿಸಿದ್ದು, ಇತರ ದೇಶಗಳ ಟಿ20 ಲೀಗ್‌ಗಳಲ್ಲಿ ಆಡುವ ಇರಾದೆ ವ್ಯಕ್ತಪಡಿಸಿದ್ದಾರೆ. ಇದರರ್ಥ ಐಪಿಎಲ್‌ಗೆ ವಿದಾಯ ಹೇಳುವ ಮೂಲಕ ಅಶ್ವಿನ್​ಗೆ ಇತರ ಟಿ20 ಲೀಗ್​ಗಳಲ್ಲಿ ಆಡುವುದಕ್ಕೆ ಅನುಮತಿ ಸಿಕ್ಕಂತಾಗಿದೆ.

4 / 6
ಆದಾಗ್ಯೂ ಅಶ್ವಿನ್ ವಿದಾಯಕ್ಕೆ ಇನ್ನೊಂದು ಕಾರಣವಿರಬಹುದು ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ. ವಾಸ್ತವವಾಗಿ ಕಳೆದ ಕೆಲವು ದಿನಗಳ ಹಿಂದೆ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ, ಲೀಗ್ ಮಧ್ಯದಲ್ಲಿ ಬದಲಿ ಆಟಗಾರನಾಗಿ ದಕ್ಷಿಣ ಆಫ್ರಿಕಾದ ಡೆವಾಲ್ಡ್ ಬ್ರೆವಿಸ್ ಅವರನ್ನು ಹೆಚ್ಚುವರಿ ಹಣ ನೀಡಿ ಖರೀದಿಸಿದೆ ಎಂದು ಹೇಳಿದ್ದರು.

5 / 6
ಅಶ್ವಿನ್ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಇದನ್ನು ನೋಡಿದವರು ಸಿಎಸ್​ಕೆ ಮತ್ತೊಮ್ಮೆ ಐಪಿಎಲ್‌ನಲ್ಲಿ ಕಳ್ಳಾಟ ಆಡಿದೆ ಎಂಬ ಆರೋಪವನ್ನು ಹೊರಿಸಿದ್ದರು. ಇದನ್ನು ಗಮನಿಸಿದ ಸಿಎಸ್​ಕೆ ಆ ರೀತಿಯಾಗಿ ಏನು ನಡೆದಿಲ್ಲ, ಬ್ರೆವಿಸ್ ಅವರ ಖರೀದಿ ಐಪಿಎಲ್​ ನಿಯಮಗಳಿಗೆ ಅನುಗುಣವಾಗಿದೆ ಎಂದಿತ್ತು.

6 / 6
ಇದಾದ ಬಳಿಕ ಅಶ್ವಿನ್ ಅವರು ಕೂಡ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ್ದರು. ಆದರೆ ಅದಾಗಲೇ ಸಿಎಸ್​ಕೆ ಫ್ರಾಂಚೈಸಿ ಮೇಲೆ ಅಭಿಮಾನಿಗಳಲ್ಲಿ ಅನುಮಾನವೆಂಬುದು ಮೂಡಿತ್ತು. ಹೀಗಾಗಿ ಫ್ರಾಂಚೈಸಿ ಹಾಗೂ ಅಶ್ವಿನ್ ನಡುವೆ ವೈಮನಸ್ಸು ಮೂಡಿದ್ದು, ಇದೇ ಕಾರಣಕ್ಕೆ ಅಶ್ವಿನ್ ನಿವೃತ್ತಿ ಘೋಷಿಸಿದ್ದಾರೆ ಎನ್ನಲಾಗುತ್ತಿದೆ.

Published On - 7:53 pm, Wed, 27 August 25