IPL 2023: RCB ಸೋಲುತ್ತಿದ್ದಂತೆ ಕಣ್ಣೀರಿಟ್ಟ ಹುಡುಗಿಯ ಫೋಟೋ ಫುಲ್ ವೈರಲ್

IPL 2023 Kannada: ಆರ್​ಸಿಬಿ ತಂಡವು ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 15 ರಂದು ಆಡಲಿದೆ. ಶನಿವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್​ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಣಕ್ಕಿಳಿಯಲಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Apr 11, 2023 | 11:30 PM

IPL 2023: ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಹೈವೋಲ್ಟೇಜ್ ಕದನಕ್ಕೆ ಸಾಕ್ಷಿಯಾಗಿತ್ತು. ರಣರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು 1 ವಿಕೆಟ್​ನಿಂದ ಜಯಗಳಿಸಿತ್ತು.

1 / 8
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ವಿರಾಟ್ ಕೊಹ್ಲಿ (61), ಫಾಫ್ ಡುಪ್ಲೆಸಿಸ್ (79) ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ (59) ಅವರ ಅಬ್ಬರದೊಂದಿಗೆ ಆರ್​ಸಿಬಿ ತಂಡವು ನಿಗದಿತ 20 ಓವರ್​ಗಳಲ್ಲಿ 212 ರನ್​ ಕಲೆಹಾಕಿತು. ಇತ್ತ ಆರ್​ಸಿಬಿ ಅಭಿಮಾನಿಗಳು ಈ ಪಂದ್ಯ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿದ್ದರು.

2 / 8
213 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್​ ತಂಡವು 23 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೋಯಿನಿಸ್ (65) ಹಾಗೂ ನಿಕೋಲಸ್ ಪೂರನ್ (62) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಕೊನೆಯ ಓವರ್​ನ ಕೊನೆಯ ಎಸೆತದಲ್ಲಿ 1 ರನ್​ ಓಡಿ ಲಕ್ನೋ ಸೂಪರ್ ಜೈಂಟ್ಸ್ ಜಯ ಸಾಧಿಸಿತು.

3 / 8
ಇತ್ತ ಅಂತಿಮ ಕ್ಷಣದವರೆಗೂ ಪ್ರೇಕ್ಷಕರನ್ನು ತುದಿಗಾಲಲ್ಲಿ ಕೂರಿಸಿದ್ದ ಈ ಪಂದ್ಯದಲ್ಲಿ ಆರ್​ಸಿಬಿ ಸೋಲುತ್ತಿದ್ದಂತೆ ಅಭಿಮಾನಿಗಳು ಕಣ್ಣೀರಿಟ್ಟದ್ದರು. ಅದರಲ್ಲೂ ಆರ್​ಸಿಬಿ ಮಹಿಳಾ ಅಭಿಮಾನಿಯೊಬ್ಬರು ಅಳುತ್ತಿರುವುದನ್ನು ಕ್ಯಾಮೆರಾಮ್ಯಾನ್ ಸೆರೆ ಹಿಡಿದಿದ್ದರು.

4 / 8
ಆರ್​ಸಿಬಿಯ ಸೋಲನ್ನು ಅರಗಿಸಿಕೊಳ್ಳಲಾಗದೇ ಕಣ್ಣೀರಿಡುತ್ತಾ ಭಾವುಕಳಾದ ಅಭಿಮಾನಿಯ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಯಾರೀಕೆ? ಎಲ್ಲಿಯವರು ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದೆ.

5 / 8
ಈ ಪ್ರಶ್ನೆಗಳಿಗೆ ಸದ್ಯ ಸ್ಪಷ್ಟ ಉತ್ತರವಂತು ಸಿಕ್ಕಿಲ್ಲ. ಇದಾಗ್ಯೂ ಈಕೆ ಆಟೋ ಡ್ರೈವರ್​ರೊಬ್ಬರ ಮಗಳು. ಆರ್​ಸಿಬಿ ತಂಡದ ಪಂದ್ಯ ವೀಕ್ಷಿಸಲೆಂದು 657 ಕಿಮೀ ದೂರದಿಂದ ಬೆಂಗಳೂರಿಗೆ ಆಗಮಿಸಿದ್ದಳು. ತನ್ನ ನೆಚ್ಚಿನ ತಂಡದ ಸೋಲಿನ ನೋವಿನಲ್ಲಿ ಅಳುತ್ತಿದ್ದ ಈಕೆಯನ್ನೂ ಕೂಡ ನೀವು ಟ್ರೋಲ್ ಮಾಡುತ್ತಿದ್ದೀರಿ. ನೀವೆಲ್ಲಾ ಯಾಕೆ ಇಷ್ಟೆಲ್ಲಾ ಕೀಳು ಮಟ್ಟಕ್ಕಿಳಿದ್ದೀರಿ ಎಂದು ವ್ಯಕ್ತಿಯೊಬ್ಬರು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಇದರ ಹೊರತಾಗಿ ಆರ್​​ಸಿಬಿ ಫ್ಯಾನ್ ಗರ್ಲ್​ ಬಗ್ಗೆ ಯಾವುದೇ ಮಾಹಿತಿಯಿಲ್ಲ.

6 / 8
ಈ ಪ್ರಶ್ನೆಗಳಿಗೆ ಸದ್ಯ ಸ್ಪಷ್ಟ ಉತ್ತರವಂತು ಸಿಕ್ಕಿಲ್ಲ. ಇದಾಗ್ಯೂ ಈಕೆ ಆಟೋ ಡ್ರೈವರ್​ರೊಬ್ಬರ ಮಗಳು. ಆರ್​ಸಿಬಿ ತಂಡದ ಪಂದ್ಯ ವೀಕ್ಷಿಸಲೆಂದು 657 ಕಿಮೀ ದೂರದಿಂದ ಬೆಂಗಳೂರಿಗೆ ಆಗಮಿಸಿದ್ದಳು. ತನ್ನ ನೆಚ್ಚಿನ ತಂಡದ ಸೋಲಿನ ನೋವಿನಲ್ಲಿ ಅಳುತ್ತಿದ್ದ ಈಕೆಯನ್ನೂ ಕೂಡ ನೀವು ಟ್ರೋಲ್ ಮಾಡುತ್ತಿದ್ದೀರಿ. ನೀವೆಲ್ಲಾ ಯಾಕೆ ಇಷ್ಟೆಲ್ಲಾ ಕೀಳು ಮಟ್ಟಕ್ಕಿಳಿದ್ದೀರಿ ಎಂದು ವ್ಯಕ್ತಿಯೊಬ್ಬರು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಆದರೆ ನಿಜನಾ ಎಂಬುದರ​ ಬಗ್ಗೆ ಯಾವುದೇ ಖಚಿತತೆ ಇಲ್ಲ.

7 / 8
ಆರ್​ಸಿಬಿ ತಂಡವು ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 15 ರಂದು ಆಡಲಿದೆ. ಶನಿವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್​ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಣಕ್ಕಿಳಿಯಲಿದೆ.

8 / 8
Follow us