- Kannada News Photo gallery Cricket photos Rcb royal challengers bangalore womens team players start there practice for WPL 2023 Kannada Cricket News
WPL 2023: ಮಹಿಳಾ ಪ್ರೀಮಿಯರ್ ಲೀಗ್ಗೆ ಮಂಧಾನ ಪಡೆಯಿಂದ ಅಭ್ಯಾಸ ಶುರು: ಆರ್ಸಿಬಿ ವನಿತೆಯರ ಪ್ರ್ಯಾಕ್ಟೀಸ್ ಫೋಟೋ ಇಲ್ಲಿದೆ
RCB Womens Team 2023: ಆರ್ಸಿಬಿ ಮಹಿಳಾ ತಂಡ ಸಾಕಷ್ಟು ಬಲಿಷ್ಠವಾಗಿದ್ದು ಸ್ಟಾರ್ ಆಟಗಾರ್ತಿಯರಿಂದ ಕೂಡಿದೆ. ಸ್ಮೃತಿ ಮಂದಾನ ನಾಯಕಿಯಾಗಿದ್ದು, ಎಲಿಸ್ ಪೆರ್ರಿ, ರಿಚಾ ಘೋಷ್, ಸೋಫಿ ಡಿವೈನ್, ರೇಣುಕಾ ಸಿಂಗ್, ಎರಿನ್ ಬರ್ನ್ಸ್ ಅವರಂತಹ ಅಪಾಯಕಾರಿ ಪ್ಲೇಯರ್ಸ್ ಅನ್ನು ಹೊಂದಿದೆ.
Updated on:Feb 26, 2023 | 9:21 AM

ಚೊಚ್ಚಲ ಆವೃತ್ತಿಯ ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಮಾರ್ಚ್ 4 ರಂದು ಈ ಮಹತ್ವದ ಟೂರ್ನಿಗೆ ಚಾಲನೆ ಸಿಗಲಿದ್ದು ಮಾರ್ಚ್ 26ರವರೆಗೆ ನಡೆಯಲಿದೆ. ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿದೆ.

ಈ ಟೂರ್ನಿಯ ಎಲ್ಲಾ ಪಂದ್ಯಗಳಿಗೆ ಮಹಾರಾಷ್ಟ್ರದ ಡಿವೈ ಪಾಟೀಲ್ ಸ್ಟೇಡಿಯಂ ಮತ್ತು ಬ್ರಬೋರ್ನ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡವು ಮಾರ್ಚ್ 5 ರಿಂದ ಅಭಿಯಾನ ಆರಂಭಿಸಲಿದ್ದು, ಮೊದಲ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ.

ಈಗಾಗಲೇ ಆರ್ಸಿಬಿ ಮಹಿಳಾ ತಂಡದ ಆಟಗಾರ್ತಿಯರು ಅಭ್ಯಾಸ ಶುರು ಮಾಡಿಕೊಂಡಿದ್ದಾರೆ. ಆರ್ಸಿಬಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಆಟಗಾರ್ತಿಯರು ಬ್ಯಾಟಿಂಗ್, ಬೌಲಿಂಗ್ ಪ್ರ್ಯಾಕ್ಟೀಸ್ ನಡೆಸುತ್ತಿರುವ ಫೋಟೋವನ್ನು ಹಂಚಿಕೊಂಡಿದೆ.

ಸದ್ಯ ಹರಿಣಗಳ ನಾಡಲ್ಲಿ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯ ಇರುವ ಕಾರಣ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡದ ಆಟಗಾರರು ತಡವಾಗಿ ಭಾರತಕ್ಕೆ ಆಗಮಿಸಲಿದ್ದಾರೆ. ಉಳಿದಂತೆ ಮಹಿಳಾ ಪ್ರೀಮಿಯರ್ ಲೀಗ್‌ನ ಕೆಲವು ವಿದೇಶಿ ಆಟಗಾರರು ಭಾರತಕ್ಕೆ ಆಗಮಿಸಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ಆರ್ಸಿಬಿ ಮಹಿಳಾ ತಂಡದ ಆಟಗಾರ್ತಿ.

ಆರ್ಸಿಬಿ ಮಹಿಳಾ ತಂಡ ಸಾಕಷ್ಟು ಬಲಿಷ್ಠವಾಗಿದ್ದು ಸ್ಟಾರ್ ಆಟಗಾರ್ತಿಯರಿಂದ ಕೂಡಿದೆ. ಸ್ಮೃತಿ ಮಂದಾನ ನಾಯಕಿಯಾಗಿದ್ದು, ಎಲಿಸ್ ಪೆರ್ರಿ, ರಿಚಾ ಘೋಷ್, ಸೋಫಿ ಡಿವೈನ್, ರೇಣುಕಾ ಸಿಂಗ್, ಎರಿನ್ ಬರ್ನ್ಸ್ ಅವರಂತಹ ಅಪಾಯಕಾರಿ ಪ್ಲೇಯರ್ಸ್ ಅನ್ನು ಹೊಂದಿದೆ.

ಆರ್ಸಿಬಿ ಮಹಿಳಾ ತಂಡದ ಮೆಂಟರ್ ಆಗಿ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾರನ್ನು ಆಯ್ಕೆ ಮಾಡಿದ್ದು ಇವರು ಕೂಡ ಕ್ಯಾಂಪ್ ಸೇರಿಕೊಂಡಿದ್ದಾರೆ. ಮೊದಲನೇ ಆವೃತ್ತಿಯಲ್ಲಿ ಆರ್ಸಿಬಿ ಮಹಿಳಾ ತಂಡದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಇದುವರೆಗೆ ಪುರುಷರ ಐಪಿಎಲ್ನಲ್ಲಿ ಕಪ್ ಗೆಲ್ಲದ ಆರ್ಸಿಬಿ ಮಹಿಳಾ ತಂಡದ ಮೂಲಕವಾದರೂ ಕಪ್ ಎತ್ತಿ ಹಿಡಿಯುತ್ತಾ ನೋಡಬೇಕಿದೆ.

ಮಹಿಳಾ ಪ್ರೀಮಿಯರ್ ಲೀಗ್ 2023ರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಒಟ್ಟು 18 ಮಹಿಳಾ ಆಟಗಾರ್ತಿಯರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ಇದರಲ್ಲಿ ಸ್ಮೃತಿ ಮಂಧಾನ ಅವರನ್ನು 3.4 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದ್ದು ಈಗ ಇತಿಹಾಸ. ಡಬ್ಲ್ಯೂಪಿಎಲ್ ಚೊಚ್ಚಲ ಆವೃತ್ತಿಯಲ್ಲೇ ಗರಿಷ್ಠ ಮೊತ್ತಕ್ಕೆ ಸೇಲ್ ಆದ ಆಟಗಾರ್ತಿ ಎಂಬ ದಾಖಲೆ ಮಂಧಾನ ಪಾಲಾಯಿತು.

ಆರ್ಸಿಬಿ ಮಹಿಳಾ ತಂಡ: ಸ್ಮೃತಿ ಮಂಧಾನ, ಸೋಫಿ ಡಿವೈನ್, ಎಲಿಸ್ಸಾ ಪೆರಿ, ರೇಣುಕಾ ಸಿಂಗ್, ರಿಚಾ ಘೋಷ್, ಎರಿನ್ ಬರ್ನ್ಸ್, ದಿಶಾ ಕಸತ್, ಇಂದ್ರಾಣಿ ರಾಯ್, ಆಶಾ ಶೋಬನಾ, ಹೆದರ್ ನೈಟ್, ಶ್ರೇಯಾಂಕ ಪಾಟೀಲ್, ಕನಿಕಾ ಅಹುಜಾ, ಡೇನ್ ವ್ಯಾನ್ ನೀಕರ್ಕ್, ಪ್ರೀತಿ ಬೋಸ್, ಮೇಗನ್ ಶುಟ್, ಸಹನಾ ಪವಾರ್, ಪೂನಮ್ ಖೇಮ್ನಾರ್, ಕೋಮಲ್ ಝಂಜಾದ್.
Published On - 9:21 am, Sun, 26 February 23




