- Kannada News Photo gallery Cricket photos RCB vs LSG IPL 2023 What will happen if RCB wins today's match vs LSG What will happen if they lose
RCB vs LSG: ಏಳನೇ ಸ್ಥಾನದಲ್ಲಿರುವ ಆರ್ಸಿಬಿ ಇಂದಿನ ಪಂದ್ಯ ಗೆದ್ದರೆ ಏನಾಗಲಿದೆ?: ಸೋತರೆ ಗತಿಯೇನು?
IPL 2023, Bangalore vs Lucknow: ಪಾಯಿಂಟ್ ಟೇಬಲ್ನಲ್ಲಿ ಏಳನೇ ಸ್ಥಾನದಲ್ಲಿರುವ ಆರ್ಸಿಬಿ -1.256 ರನ್ರೇಟ್ ಹೊಂದಿದೆ. ಇಂದಿನ ಲಖನೌ ವಿರುದ್ಧದ ಪಂದ್ಯದಲ್ಲಿ ಸಣ್ಣ ಮಟ್ಟದಲ್ಲಿ ಗೆದ್ದರೆ ಇದೇ ಸ್ಥಾನದಲ್ಲಿ ಬೆಂಗಳೂರು ಮುಂದುವರೆಯಲಿದೆ.
Updated on:Apr 10, 2023 | 12:40 PM

ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿಯಲ್ಲಿಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜೇಂಟ್ಸ್ ಮುಖಾಮುಖಿ ಆಗಲಿದ್ದು ಸಾಕಷ್ಟು ರೋಚಕತೆ ಸೃಷ್ಟಿಸಿದೆ. ತವರು ಮೈದಾನದಲ್ಲಿ ಎರಡನೇ ಪಂದ್ಯವನ್ನಾಡುತ್ತಿರುವ ಫಾಫ್ ಪಡೆಯ ಪ್ರದರ್ಶನ ಹೇಗಿರುತ್ತೆ ನೋಡಬೇಕಿದೆ.

ರಾಯಲ್ ಚಾಲೆಂಜರ್ಸ್ ತಂಡ ಆಡಿದ ಎರಡು ಪಂದ್ಯಗಳ ಪೈಕಿ ಮೊದಲ ಪಂದ್ಯದಲ್ಲಿ ಗೆದ್ದರೆ ದ್ವಿತೀಯ ಮ್ಯಾಚ್ನಲ್ಲಿ ಸೋಲುಂಡಿತ್ತು. ಕೆಕೆಆರ್ ವಿರುದ್ಧ ಆಡಿದ ಎರಡನೇ ಪಂದ್ಯದಲ್ಲಿ ಕೇವಲ 123 ರನ್ಗೆ ಆಲೌಟ್ ಆಗುವ ಹೀನಾಯ ಪ್ರದರ್ಶನ ತೋರಿತ್ತು. ಗೆಲುವಿನ ಲಯಕ್ಕೆ ಮರಳಲು ಇಂದಿನ ಪಂದ್ಯ ಮುಖ್ಯವಾಗಿದೆ.

ಪಾಯಿಂಟ್ ಟೇಬಲ್ನಲ್ಲಿ ಏಳನೇ ಸ್ಥಾನದಲ್ಲಿರುವ ಆರ್ಸಿಬಿ -1.256 ರನ್ರೇಟ್ ಹೊಂದಿದೆ. ಇಂದಿನ ಪಂದ್ಯದಲ್ಲಿ ಸಣ್ಣ ಮಟ್ಟದಲ್ಲಿ ಗೆದ್ದರೆ ಇದೇ ಸ್ಥಾನದಲ್ಲಿ ಬೆಂಗಳೂರು ಮುಂದುವರೆಯಲಿದೆ. ಎಲ್ಲಾದರು ದೊಡ್ಡ ಮೊತ್ತದ ಅಂತರದಲ್ಲಿ ಜಯ ಸಾಧಿಸಿದರೆ 4 ಅಂಕ ಸಂಪಾದಿಸಿ ಮೇಲಕ್ಕೆ ಜಿಗಿಯುವ ಸಾಧ್ಯತೆ ಇದೆ.

ಆರ್ಸಿಬಿ ಗೆಲುವು ಸಾಧಿಸಲು ವಿಫಲವಾದರೆ ಮುಂದಿನ ಹಾದಿ ಕೊಂಚ ಕಠಿಣವಾಗಲಿದೆ. ಯಾಕೆಂದರೆ ಆರ್ಸಿಬಿಗಿಂತ ಮೇಲಿರುವ ಉಳಿದ ಆರು ತಂಡಗಳು 4 ಅಂಕ ಪಡೆದುಕೊಂಡಿದೆ. ಎಲ್ಲಾದರು ಸೋತರೆ -ರನ್ರೇಟ್ ಇನ್ನೂ ಅಧಿಕವಾಗಲಿದ್ದು ಎಂಟನೇ ಸ್ಥಾನಕ್ಕೆ ಕುಸಿಯಬಹುದು. ಹೀಗಾಗಿ ಬೆಂಗಳೂರಿಗೆ ಗೆಲುವು ಮುಖ್ಯವಾಗಿದೆ.

ಫಾಫ್ ಪಡೆಯ ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ. ಶಹಬಾಜ್ ಅಹಮದ್ ಬದಲು ಮಹಿಪಾಲ್ ಲೊಮ್ರೂರ್ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಇಂಜುರಿಯಿಂದಾಗಿ ಟೂರ್ನಿಯಿಂದ ಹೊರಬಿದ್ದಿರುವ ರಿಸೆ ಟೋಪ್ಲೆ ಜಾಗಕ್ಕೆ ದಕ್ಷಿಣಾ ಆಫ್ರಿಕಾ ವೇಗಿ ವೇಯ್ನ್ ಪಾರ್ನೆಲ್ ಆಯ್ಕೆ ಆಗಿದ್ದು ತಂಡ ಸೇರಿಕೊಂಡಿದ್ದಾರೆ. ಇವರು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಾಣಿಸುವ ಸಾಧ್ಯತೆ ಇದೆ.

ಆರ್ಸಿಬಿ ಮೊದಲ ಪಂದ್ಯದಲ್ಲಿ ಉತ್ತಮ ಆರಂಭ ಪಡೆದುಕೊಂಡಿತ್ತು. ಆದರೆ, ದ್ವಿತೀಯ ಪಂದ್ಯದಲ್ಲಿ ಕೊಹ್ಲಿ-ಫಾಫ್ ಕಡೆಯಿಂದ ನಿರೀಕ್ಷೆಗೆ ತಕ್ಕ ಆಟ ಬರಲಿಲ್ಲ. ಗ್ಲೆನ್ ಮ್ಯಾಕ್ಸ್ವೆಲ್, ದಿನೇಶ್ ಕಾರ್ತಿಕ್ ಕೂಡ ಸಂಪೂರ್ಣ ವೈಫಲ್ಯ ಅನುಭವಿಸಿದ್ದರು. ಮಿಚೆಲ್ ಬ್ರೇಸ್ವೆಲ್ ಕಡೆಯಿಂದ ಆಕ್ರಮಣಕಾರಿ ಆಟ ಹೊರಬರಬೇಕಿದೆ.

ಕರ್ಣ್ ಶರ್ಮಾ ಹಾಗೂ ಮೊಹಮ್ಮದ್ ಸಿರಾಜ್ ಅಪಾಯಕಾರಿ ಆಗಿ ಕಾಣಿಸಿಕೊಂಡಿದ್ದಾರೆ. ಹರ್ಷಲ್ ಪಟೇಲ್ ದುಬಾರಿ ಆಗುತ್ತಿದ್ದು ಲೆಂತ್ನಲ್ಲಿ ಎಡವುತ್ತಿದ್ದಾರೆ. ಹಿಂದಿನ ಪಂದ್ಯದಲ್ಲಿ ಮಾಡಿದ ತಪ್ಪುಗಳನ್ನು ಸರಿ ಪಡಿಸಿ ಆರ್ಸಿಬಿ ಇಂದು ಉತ್ತಮ ಪ್ರದರ್ಶನ ನೀಡ ಬೇಕಾದ ಒತ್ತಡದಲ್ಲಿದೆ.
Published On - 12:40 pm, Mon, 10 April 23




