- Kannada News Photo gallery Cricket photos Rishabh Pant accident 4 possible captaincy options for Delhi Capitals in IPL 2023 if Rishabh Pant misses out
IPL 2023: ಪಂತ್ ಐಪಿಎಲ್ ಆಡುವುದು ಡೌಟ್; ಡೆಲ್ಲಿ ತಂಡಕ್ಕೆ ಯಾರು ನಾಯಕ? ರೇಸ್ನಲ್ಲಿ ಈ ನಾಲ್ವರು
IPL 2023: ಐಪಿಎಲ್ನಲ್ಲಿ ದೆಹಲಿ ತಂಡದ ನಾಯಕತ್ವವಹಿಸಿರುವ ಪಂತ್ ಈ ಸೀಸನ್ನಲ್ಲಿ ಆಡುವುದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ಅವರ ಸ್ಥಾನದಲ್ಲಿ ಯಾರು ತಂಡವನ್ನು ಮುನ್ನಡೆಸಲಿದ್ದಾರೆ. ನಾಯಕತ್ವದ ರೇಸ್ನಲ್ಲಿ ಯಾರ್ಯಾರಿದ್ದಾರೆ ಎಂಬುದಕ್ಕೆ ಇಲ್ಲಿದೆ ವಿವರ.
Updated on: Dec 31, 2022 | 3:12 PM

ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯದ ಪ್ರಮಾಣ ಅಧಿಕವಾಗಿರುವ ಕಾರಣ ಕ್ರಿಕೆಟ್ನಿಂದ ಕೆಲ ಸಮಯ ದೂರ ಉಳಿಯಬೇಕಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 2023 ಆವೃತ್ತಿಯಿಂದಲೂ ಪಂತ್ ಹೊರಗುಳಿಯಲಿದ್ದಾರೆ. ಐಪಿಎಲ್ನಲ್ಲಿ ದೆಹಲಿ ತಂಡದ ನಾಯಕತ್ವವಹಿಸಿರುವ ಪಂತ್ ಈ ಸೀಸನ್ನಲ್ಲಿ ಆಡುವುದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ಅವರ ಸ್ಥಾನದಲ್ಲಿ ಯಾರು ತಂಡವನ್ನು ಮುನ್ನಡೆಸಲಿದ್ದಾರೆ. ನಾಯಕತ್ವದ ರೇಸ್ನಲ್ಲಿ ಯಾರ್ಯಾರಿದ್ದಾರೆ ಎಂಬುದಕ್ಕೆ ಇಲ್ಲಿದೆ ವಿವರ.

ಪಂತ್ ಬದಲಿಗೆ ಡೆಲ್ಲಿ ನಾಯಕತ್ವದ ರೇಸ್ನಲ್ಲಿ ಡೇವಿಡ್ ವಾರ್ನರ್ ಹೆಸರು ಮುಂಚೂಣಿಯಲ್ಲಿದೆ. ಡೇವಿಡ್ ವಾರ್ನರ್ ದೀರ್ಘಕಾಲದವರೆಗೆ ಸನ್‌ರೈಸರ್ಸ್ ಹೈದರಾಬಾದ್ ತಂಡ ನಾಯಕತ್ವ ವಹಿಸಿದ್ದರು. ಅಲ್ಲದೆ ಅವರ ನಾಯಕತ್ವದಲ್ಲಿ ತಂಡಕ್ಕೆ ಪ್ರಶಸ್ತಿ ಕೂಡ ಲಭಿಸಿತ್ತು. ಅಂತಹ ಪರಿಸ್ಥಿತಿಯಲ್ಲಿ, ವಾರ್ನರ್ ಈ ಸ್ಥಾನಕ್ಕೆ ಉತ್ತಮ ಆಯ್ಕೆಯಾಗಬಹುದು.

ಭಾರತೀಯ ಆಟಗಾರನನ್ನು ನಾಯಕನನ್ನಾಗಿ ಮಾಡಲು ತಂಡ ಬಯಸಿದರೆ ಅಥವಾ ಪಂತ್ ಅವರಂತಹ ಯುವ ಆಟಗಾರನಿಗೆ ನಾಯಕತ್ವವನ್ನು ನೀಡಲು ಯೋಚಿಸಿದರೆ, ಪೃಥ್ವಿ ಶಾ ಇದಕ್ಕೆ ಸೂಕ್ತ ಆಯ್ಕೆಯಾಗಲಿದ್ದಾರೆ. 2018 ರಿಂದ ಈ ಫ್ರಾಂಚೈಸಿಯಲ್ಲಿರುವ ಪೃಥ್ವಿ ಶಾ, ತಮ್ಮ ನಾಯಕತ್ವದಲ್ಲಿ ಭಾರತವನ್ನು ಅಂಡರ್-19 ವಿಶ್ವಕಪ್‌ನಲ್ಲಿ ಮುನ್ನಡೆಸಿದ್ದರು.

ಇವರಿಬ್ಬರನ್ನು ಬಿಟ್ಟರೆ ಮಿಚೆಲ್ ಮಾರ್ಷ್, ಡೆಲ್ಲಿಗೆ ನಾಯಕನಾಗಬಲ್ಲ ಮತ್ತೊಂದು ಆಯ್ಕೆ. ಮಾರ್ಷ್ ಆಸ್ಟ್ರೇಲಿಯಾದ ಉಪನಾಯಕನೂ ಆಗಿದ್ದಾರೆ. ಹೀಗಾಗಿ ಫ್ರಾಂಚೈಸಿ ಸಹ ಅವರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ.

ಅಕ್ಷರ್ ಪಟೇಲ್ ಅವರು ತಂಡದ ನಾಯಕತ್ವಕ್ಕೆ ಸ್ಪರ್ಧಿಯಾಗಬಹುದಾದಂತಹ ಮತ್ತೊಬ್ಬ ಆಟಗಾರ. ಪಟೇಲ್ ದೆಹಲಿ ಪರ ಸತತವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ ಹೀಗಾಗಿ ಅವರಿಗೂ ಈ ಅವಕಾಶ ಸಿಗುವ ಸಾಧ್ಯತೆಗಳಿವೆ.














