Riyan Parag: ಸಖತ್ ಹಾಟ್ ಮಗ: ರಿಯಾನ್ ಪರಾಗ್ ಯೂಟ್ಯೂಬ್ ಸರ್ಚ್ ಲೀಕ್..!
Riyan Parag: ಈ ಬಾರಿಯ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ರಿಯಾನ್ ಪರಾಗ್ ಅದ್ಭುತ ಪ್ರದರ್ಶನ ನೀಡಿದ್ದರು. ಸ್ಪೋಟಕ ಇನಿಂಗ್ಸ್ಗಳೊಂದಿಗೆ ಅಬ್ಬರಿಸಿದ್ದ 22 ವರ್ಷದ ಯುವ ದಾಂಡಿಗ, 15 ಪಂದ್ಯಗಳಲ್ಲಿ 4 ಅರ್ಧಶತಕಗಳನ್ನು ಬಾರಿಸಿದ್ದರು. ಅಲ್ಲದೆ ಒಟ್ಟು 573 ರನ್ ಕಲೆಹಾಕುವ ಮೂಲಕ ಮಿಂಚಿದ್ದರು.
Updated on: May 28, 2024 | 12:07 PM

ರಾಜಸ್ಥಾನ್ ರಾಯಲ್ಸ್ ತಂಡದ ಯುವ ಸ್ಪೋಟಕ ದಾಂಡಿಗ ರಿಯಾನ್ ಪರಾಗ್ (Riyan Parag) ಸಖತ್ ಸುದ್ದಿಯಲ್ಲಿದ್ದಾರೆ. ಆದರೆ ಅದು ಈ ಬಾರಿಯ ಐಪಿಎಲ್ನಲ್ಲಿನ ಪ್ರದರ್ಶನದಿಂದಾಗಿ ಅಲ್ಲ. ಬದಲಾಗಿ ಹಾಟ್ ಹುಡುಕಾಟದಿಂದ ಎಂಬುದು ವಿಶೇಷ.

ರಿಯಾನ್ ಪರಾಗ್ ತನ್ನ ಯೂಟ್ಯೂಬ್ ಖಾತೆಯಲ್ಲಿ ಬಾಲಿವುಡ್ ನಟಿಯರ ಹಾಟ್ ವಿಡಿಯೋಗಳನ್ನು ಹುಡುಕಾಡಿರುವುದು ಬಹಿರಂಗವಾಗಿದೆ. ನಟಿಯರಾದ ಅನನ್ಯಾ ಪಾಂಡೆ ಹಾಗೂ ಸಾರಾ ಅಲಿ ಖಾನ್ ಅವರ ಹಾಟ್ ವಿಡಿಯೋಗಳನ್ನು ಪರಾಗ್ ಸರ್ಚ್ ಮಾಡಿದ್ದಾರೆ.

ರಿಯಾನ್ ಪರಾಗ್ ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್ ಮಾಡಿದ್ದರು. ಇದಕ್ಕೂ ಮೊದಲು ಅವರು ನಟಿ ಅನನ್ಯಾ ಪಾಂಡೆ ಹಾಗೂ ಸಾರಾ ಅಲಿ ಖಾನ್ ಅವರ ಹಾಟ್ ವಿಡಿಯೋಗಳನ್ನು ಹುಡುಕಾಡಿದ್ದರು. ಆದರೆ ಈ ಸರ್ಚ್ ಹಿಸ್ಟರಿಯನ್ನು ಡಿಲೀಟ್ ಮಾಡದೇ ಪರಾಗ್ ಲೈವ್ ಸ್ಟ್ರೀಮಿಂಗ್ನಲ್ಲಿ ಕಾಣಿಸಿಕೊಂಡಿದ್ದರು.

ಈ ವೇಳೆ ಅವರ ಸರ್ಚ್ ಹಿಸ್ಟರಿಯಲ್ಲಿ ನಟಿಮಣಿಯರ ಹೆಸರುಗಳೊಂದಿಗೆ ಹಾಟ್ ವಿಡಿಯೋಗಳನ್ನು ಹುಡುಕಾಡಿರುವುದು ಕಂಡು ಬಂದಿದೆ. ಇದೀಗ ರಿಯಾನ್ ಪರಾಗ್ ಅವರ ಸರ್ಚ್ ಹಿಸ್ಟರಿ ಸ್ಕ್ರೀನ್ ಶಾಟ್ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನಾನಾ ಪ್ರತಿಕ್ರಿಯೆಗಳ ಮೂಲಕ ಯುವ ಆಟಗಾರನನ್ನು ಟ್ರೋಲ್ ಮಾಡಲಾಗುತ್ತಿದೆ.

ಈ ಬಾರಿಯ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ರಿಯಾನ್ ಪರಾಗ್ ಅದ್ಭುತ ಪ್ರದರ್ಶನ ನೀಡಿದ್ದರು. 15 ಇನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿದ್ದ ಪರಾಗ್ 4 ಅರ್ಧಶತಕಗಳೊಂದಿಗೆ ಒಟ್ಟು 573 ರನ್ ಕಲೆಹಾಕಿದ್ದರು.

ಈ ಅದ್ಭುತ ಪ್ರದರ್ಶನದಿಂದಾಗಿ ಈ ಬಾರಿ ರಾಜಸ್ಥಾನ್ ರಾಯಲ್ಸ್ ತಂಡ ಪ್ಲೇಆಫ್ ಪ್ರವೇಶಿಸಲು ಸಾಧ್ಯವಾಗಿತ್ತು. ಅಲ್ಲದೆ ಪರಾಗ್ ಅವರ ಪ್ರದರ್ಶನಕ್ಕೆ ಭಾರೀ ಮೆಚ್ಚುಗೆಗಳು ಕೂಡ ವ್ಯಕ್ತವಾಗಿದ್ದವು. ಆದರೀಗ ಯುವ ದಾಂಡಿಗ ಹಾಟ್ ಟಾಪಿಕ್ನಿಂದ ಸುದ್ದಿಯಾಗಿದ್ದು ಮಾತ್ರ ವಿಪರ್ಯಾಸ.




