ರಾಕಿ ಎಂಟ್ರಿ… 136 ವರ್ಷಗಳ ಹಳೆಯ ದಾಖಲೆ ಧೂಳೀಪಟ!

Updated on: Aug 12, 2026 | 10:11 AM

Somerset vs Lancashire: ಒನ್-ಡೇ ಕಪ್ ಟೂರ್ನಿಯಲ್ಲಿ ಲಂಕಾಷೈರ್​ ತಂಡ ಬರೋಬ್ಬರಿ 174 ರನ್​ಗಳ ಜಯ ಸಾಧಿಸಿದೆ. ಟೌಟನ್​ನಲ್ಲಿ ನಡೆದ ಸೋಮರ್‌ಸೆಟ್ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಂಕಾಷೈರ್​ ತಂಡವು 50 ಓವರ್​ಗಳಲ್ಲಿ 443 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸೋಮರ್‌ಸೆಟ್ ತಂಡವು 39.2 ಓವರ್​ಗಳಲ್ಲಿ 269 ರನ್​ಗಳಿಸಿ ಆಲೌಟ್ ಆಗಿದೆ.

1 / 6
ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಆಂಡ್ರ್ಯೂ  ಫ್ಲಿಂಟಾಫ್ ಅವರ ಪುತ್ರ ರಾಕಿ ಫ್ಲಿಂಟಾಫ್ ಹೊಸ ದಾಖಲೆ ಬರೆದಿದ್ದಾರೆ. ಅದು ಸಹ 136 ವರ್ಷಗಳ ಹಳೆಯ ದಾಖಲೆಯನ್ನು ಧೂಳೀಪಟ ಮಾಡುವ ಮೂಲಕ ಎಂಬುದು ವಿಶೇಷ. (PC: Lancashire CCC)

2 / 6
ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಮೆಟ್ರೋ ಬ್ಯಾಂಕ್ ಒನ್-ಡೇ ಕಪ್ ಟೂರ್ನಿಯಲ್ಲಿ ಲಂಕಾಷೈರ್ ಪರ ಕಣಕ್ಕಿಳಿದ 18 ವರ್ಷದ ರಾಕಿ ಫ್ಲಿಂಟಾಫ್  ಕೇವಲ 76 ಎಸೆತಗಳಲ್ಲಿ 123 ರನ್ ಚಚ್ಚಿದ್ದಾರೆ. ಈ ಮೂಲಕ ರಾಕಿ ತಮ್ಮ ಹಿರಿಯ ವೃತ್ತಿಪರ ಕ್ರಿಕೆಟ್ ಜೀವನದ ಚೊಚ್ಚಲ ಶತಕವನ್ನು ದಾಖಲಿಸಿದ್ದಾರೆ. (PC: Lancashire CCC)

3 / 6
ಈ ಶತಕದೊಂದಿಗೆ ರಾಕಿ ಫ್ಲಿಂಟಾಫ್ (18 ವರ್ಷ, 126 ದಿನಗಳು) ಲಂಕಾಷೈರ್ ಕ್ರಿಕೆಟ್ ಕ್ಲಬ್ ಪರ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೋಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಜಾನ್ ಕ್ರಾಸ್​ಲ್ಯಾಂಡ್ ಹೆಸರಿನಲ್ಲಿತ್ತು. (PC: Lancashire CCC)

4 / 6
1890 ರಲ್ಲಿ ಲಂಕಾಷೈರ್ ಕ್ರಿಕೆಟ್ ಕ್ಲಬ್ ಪರ ಕಣಕ್ಕಿಳಿದಿದ್ದ ಆರ್ಚಿ ಮೆಕ್‌ಲಾರೆನ್  ಸಸೆಕ್ಸ್ ವಿರುದ್ಧ 106 ರನ್ ಬಾರಿಸಿದ್ದರು. ಆಗ ಅವರಿಗೆ 18 ವರ್ಷ 256 ದಿನಗಳ ವಯಸ್ಸಾಗಿತ್ತು. ಈ ಮೂಲಕ ಲಂಕಾಷೈರ್ ಪರ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದರು. (PC: Getty Images)

5 / 6
ಇದೀಗ ಬರೋಬ್ಬರಿ 136 ವರ್ಷಗಳ ಬಳಿಕ ರಾಕಿ ಫ್ಲಿಂಟಾಫ್ ಈ ಭರ್ಜರಿ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಸೋಮರ್‌ಸೆಟ್ ವಿರುದ್ಧದ ಪಂದ್ಯದಲ್ಲಿ ಕೇವಲ 65 ಎಸೆತಗಳಲ್ಲಿ ಸೆಂಚುರಿ ಪೂರೈಸಿದ ರಾಕಿ, ಅಂತಿಮವಾಗಿ 10 ಬೌಂಡರಿ ಹಾಗೂ 7 ಸಿಕ್ಸರ್​ಗಳೊಂದಿಗೆ ಒಟ್ಟು 123 ರನ್​ ಕಲೆಹಾಕಿದರು. (PC: Lancashire CCC)

6 / 6
ಈ ಮೂಲಕ 162 ವರ್ಷಗಳ ಇತಿಹಾಸ ಇರುವ ಲಂಕಾಷೈರ್ ಕ್ಲಬ್ ಪರ ಪ್ರಥಮ ದರ್ಜೆ/ಲಿಸ್ಟ್​ ಎ ಕ್ರಿಕೆಟ್​ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಭರ್ಜರಿ ದಾಖಲೆಯನ್ನು ರಾಕಿ ಫ್ಲಿಂಟಾಫ್ ತಮ್ಮದಾಗಿಸಿಕೊಂಡಿದ್ದಾರೆ. ಈ ದಾಖಲೆಯೊಂದಿಗೆ ಜೂನಿಯರ್ ಫ್ಲಿಂಟಾಫ್ ಕ್ರಿಕೆಟ್​ ಜಗತ್ತಿಗೆ ತಮ್ಮ ಎಂಟ್ರಿಯನ್ನು ಸಾರಿದ್ದಾರೆ. (PC: Lancashire CCC)

Loading...
Unable to load recommendations.
Follow Us