AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BGT ಸರಣಿ ಬೆನ್ನಲ್ಲೇ ರೋಹಿತ್ ಶರ್ಮಾ ನಿವೃತ್ತಿ?

India vs Australia: ಆಸ್ಟ್ರೇಲಿಯಾ ವಿರುದ್ಧದ ಬ್ರಿಸ್ಬೇನ್ ಟೆಸ್ಟ್ ಪಂದ್ಯದ ಬೆನ್ನಲ್ಲೇ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಇದೀಗ ಸಿಡ್ನಿ ಟೆಸ್ಟ್ ಪಂದ್ಯದ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಟೆಸ್ಟ್ ಕೆರಿಯರ್ ಅಂತ್ಯಗೊಳಿಸುವ ಸಾಧ್ಯತೆಯಿದೆ. ಏಕೆಂದರೆ ರೋಹಿತ್ ಶರ್ಮಾ ಅವರ ಪ್ರಸ್ತುತ ವಯಸ್ಸು 37. ಹೀಗಾಗಿ ಮುಂಬರುವ ಟೆಸ್ಟ್ ಸರಣಿಗಳಿಗೆ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿಲ್ಲ.

ಝಾಹಿರ್ ಯೂಸುಫ್
|

Updated on: Dec 28, 2024 | 10:53 AM

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ ಎಂಬ ಸುದ್ದಿಯೊಂದು ಹುಟ್ಟಿಕೊಂಡಿದೆ. ಭಾರತ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ದಿಢೀರ್ ಆಸ್ಟ್ರೇಲಿಯಾಗೆ ತೆರಳಿದ್ದು, ಇದರ ಬೆನ್ನಲ್ಲೇ ಇಂತಹದೊಂದು ಊಹಾಪೋಹ ಶುರುವಾಗಿದೆ.

1 / 5
ಕಳಪೆ ಫಾರ್ಮ್​ನಿಂದ ಒದ್ದಾಡುತ್ತಿರುವ ರೋಹಿತ್ ಶರ್ಮಾ ಈ ಬಾರಿಯ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ 4 ಇನಿಂಗ್ಸ್​ಗಳಿಂದ ಕಲೆಹಾಕಿರುವುದು ಕೇವಲ 22 ರನ್​​ಗಳು ಮಾತ್ರ. ಅಲ್ಲದೆ ಹಿಟ್​ಮ್ಯಾನ್ ನಾಯಕತ್ವದಲ್ಲೂ ಹೇಳಿಕೊಳ್ಳುವಂತಹ ತಂತ್ರಗಾರಿಕೆ ಕೂಡ ಕಂಡು ಬರುತ್ತಿಲ್ಲ.

2 / 5
ಒಂದೆಡೆ ಕೆಟ್ಟ ಫಾರ್ಮ್ ಹಾಗೂ ಮತ್ತೊಂದೆಡೆ ಕಳಪೆ ನಾಯಕತ್ವದಿಂದ ಟೀಕೆಗೆ ಗುರಿಯಾಗಿರುವ ರೋಹಿತ್ ಶರ್ಮಾ ಅವರೊಂದಿಗೆ ಚರ್ಚಿಸಲೆಂದೇ ಅಜಿತ್ ಅಗರ್ಕರ್ ಮೆಲ್ಬೋರ್ನ್​ಗೆ ತೆರಳಿದ್ದಾರೆ. ಹೀಗಾಗಿ ಸಿಡ್ನಿ ಟೆಸ್ಟ್ ಪಂದ್ಯದ ಬಳಿಕ ಹಿಟ್​ಮ್ಯಾನ್ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರೂ ಅಚ್ಚರಿಪಡಬೇಕಿಲ್ಲ ಎಂದು ವರದಿಯಾಗಿದೆ.

3 / 5
ಏಕೆಂದರೆ ಈ ಬಾರಿಯ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಬಳಿಕ ಟೀಮ್ ಇಂಡಿಯಾದ ಇಬ್ಬರು ಹಿರಿಯ ಆಟಗಾರರು ನಿವೃತ್ತಿ ನೀಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಸುದ್ದಿಯನ್ನು ಪುಷ್ಠೀಕರಿಸುವಂತೆ ಸರಣಿಯ ಮಧ್ಯೆದಲ್ಲೇ ರವಿಚಂದ್ರನ್ ಅಶ್ವಿನ್ ನಿವೃತ್ತಿ ಘೋಷಿಸಿದ್ದಾರೆ. ಇದೀಗ ತಂಡದಲ್ಲಿರುವ ಅತ್ಯಂತ ಹಿರಿಯ ಆಟಗಾರನೆಂದರೆ ಅದು ರೋಹಿತ್ ಶರ್ಮಾ.

4 / 5
ಹೀಗಾಗಿ ಮುಂದಿನ ಸರದಿ ರೋಹಿತ್ ಶರ್ಮಾ ಅವರದ್ದು ಎಂದು ಹೇಳಬಹುದು. ಇದಾಗ್ಯೂ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ಗೇರುವ ಸಾಧ್ಯತೆಯಿದ್ದರೆ, ಹಿಟ್​ಮ್ಯಾನ್ WTC ವರೆಗೆ ಮುಂದುವರೆಯಬಹುದು. ಒಂದು ವೇಳೆ ಟೀಮ್ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಫೈನಲ್ ಆಸೆ ​ಕಮರಿದರೆ, ಆಸ್ಟ್ರೇಲಿಯಾ ವಿರುದ್ಧದ 5ನೇ ಟೆಸ್ಟ್ ಪಂದ್ಯದ ಬಳಿಕ ರೋಹಿತ್ ಶರ್ಮಾ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ.

5 / 5
Follow us